ಬಂಟ್ವಾಳ : ಫೋಟೋ ಎಡಿಟ್ ಮಾಡಿ ಸುಳ್ಳು ಸುದ್ದಿ ವೈರಲ್ – ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ವ್ಯಾಪಕ ಆಕ್ರೋಶ

Advertisement

ಬಂಟ್ವಾಳ, ಜು. 16 : ಬಸ್ ನಿಲ್ದಾಣದಲ್ಲಿ ನಡೆದ ಅಮಾನವೀಯ ರಾಕ್ಷಸಿ ಕೃತ್ಯಕ್ಕೆ ಇಡೀ ಸಮಾಜವೇ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ ಕೆಲವು ಸಮಾಜ ಘಾತುಕರು ಸಮಾಜದ ಸ್ವಾಸ್ತ್ಯ ಕೆಡಿಸಲು ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಕಂಡು ಬಂದಿದೆ.

Advertisement

ಉದೈಫ್ ಅನಕ್ಕಲ್ ಎಂಬ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಎಡಿಟ್ ಮಾಡಿದ ಫೋಟೋ ಬಳಸಿ “ಆರೋಪಿ ಭಜರಂಗ ದಳ ಕಾರ್ಯಕರ್ತ” ಎಂದು ಸುಳ್ಳು ಸುದ್ದಿಯನ್ನು ಬರೆದು ಹಾಕಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ಇನ್ನು, ರಶೀದ್ ಲಾಯಿಲ ಎಂಬ ವಾಟ್ಸಾಪ್ ಖಾತೆಯಲ್ಲಿ “Facts ans Justice” ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಎಡಿಟ್ ಮಾಡಿರುವ ಫೋಟೋ ಬಳಸಿ “ಪ್ರೀತಿಯ ಹೆಸರಲ್ಲಿ ಹಿಂದೂ ಯುವತಿಯನ್ನು ಕೊಚ್ಚಿ ಕೊಂದ ಭಜರಂಗದಳ ಮುಖಂಡ ಚೇತನ್ ಪೂಜಾರಿ” ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಅಷ್ಟೇ ಅಲ್ಲದೇ, ಇದೇ ಸಂದೇಶವನ್ನು ಹಲವಾರು ಮಂದಿ ವಾಟ್ಸಾಪ್ ಖಾತೆಯಲ್ಲಿ ಮತ್ತು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆನ್ನಾಲಾಗಿದೆ.

ಸಮಾಜದ ಸ್ವಾಸ್ತ್ಯ ಕೆಡಿಸುವ ನಿಟ್ಟಿನಲ್ಲಿ, ಸಾವಿನಲ್ಲೂ ರಾಜಕೀಯ ಹುಡುಕುವ ಇಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಗ್ರಹ ಕೇಳಿ ಬರುತ್ತಿದೆ.

ಸುಳ್ಳು ಸುದ್ದಿ ಮತ್ತು ಸಮಾಜದ ಸ್ವಾಸ್ತ್ಯ ಕೆಡಿಸುವವರ ವಿರುದ್ಧ ಕಾನೂನು ಬಿಗಿಗೊಳಿಸುತ್ತಿರುವ ಪೊಲೀಸರು ಈ ಪ್ರಕರಣದಲ್ಲೂ ಕ್ರಮ ಕೈಗೊಳ್ಳುತ್ತಾರ ಎಂಬುದನ್ನು ಕಾದು ನೋಡಬೇಕಿದೆ…

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ