ಕಟ್ಟಡದ ಬೆಂಕಿ ನಂದಿಸುವಾಗ ಉರುಳಿ ಬಿದ್ದ ಗೋಡೆ – ಇಬ್ಬರು ಅಗ್ನಿಶಾಮಕ ಸಿಬ್ಬಂದಿಗಳು ಹುತಾತ್ಮ

Advertisement

ಲಕ್ನೋ, ಆ. 04 : ಗ್ರೇಟರ್ ನೋಯ್ಡಾದ ಎಲೆಕ್ಟ್ರಾನಿಕ್ ಚಿಪ್ ಉತ್ಪಾದನಾ ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸುವಾಗ ಇಬ್ಬರು ಅಗ್ನಿ ಶಾಮಕ ಸಿಬ್ಬಂದಿ ಹುತಾತ್ಮರಾಗಿರುವ ಘಟನೆ ವರದಿಯಾಗಿದೆ. ಈ ಅವಘಡದಲ್ಲಿ ಮೂವರು ಗಾಯಗೊಂಡಿದ್ದಾರೆನ್ನಲಾಗಿದೆ.

Advertisement

ಸೋಮವಾರ ತಡರಾತ್ರಿ ಇಕೋಟೆಕ್-3 ಕೈಗಾರಿಕಾ ಪ್ರದೇಶದ ಐಎಲ್‌ಜಿಐಎಂ ಕಂಪನಿಯಲ್ಲಿ ಈ ಘಟನೆ ಸಂಭವಿಸಿದೆ. ಮಾಹಿತಿ ತಿಳಿದ ತಕ್ಷಣ ಆರು ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ಕಳಿಸಲಾಗಿತ್ತು. ಬೆಂಕಿ ನಂದಿಸುವಾಗ ಕಾರ್ಖಾನೆಯ ಗೋಡೆ ಹಾಗೂ ಬೃಹತ್‌ ಕಬ್ಬಿಣದ ಕಂಬಿ ಉರುಳಿ ಬಿದ್ದಿದೆ. ಇದರಿಂದ ಐವರು ಸಿಬ್ಬಂದಿ ಗಾಯಗೊಂಡಿದ್ದರು. ಅಲ್ಲದೇ ಅಗ್ನಿಶಾಮಕ ವಾಹನ ಸಹ ಜಖಂ ಆಗಿದೆ.

Advertisement

ಗಾಯಾಳುಗಳನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅಗ್ನಿಶಾಮಕ ಸಿಬ್ಬಂದಿ ರೋಹಿತ್ ಯಾದವ್ ಮತ್ತು ಹೆಡ್ ಕಾನ್‌ಸ್ಟೆಬಲ್ ಚಾಲಕ ತಿರತ್‌ಪಾಲ್ ಸಾವಿಗೀಡಾದರು. ಗಾಯಗೊಂಡ ಅಗ್ನಿಶಾಮಕ ದಳದ ಚಾಲಕ ರಾಜ್‌ಪಾಲ್ ಸಿಂಗ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಮನೀಶ್ ಕುಮಾರ್, ಅಮಿತ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ