ಬೆಳ್ತಂಗಡಿ : ಹನೂರು ಅರಣ್ಯ ಇಲಾಖೆ ಎನ್ಕೌಂಟರ್ ಪ್ರಕರಣ ; ಮೂವರನ್ನು ಹತ್ಯೆಗೈದ ಅಧಿಕಾರಿಗಳನ್ನು ಅಮಾನತು ಮಾಡಿ – ಶಾಸಕ ಹರೀಶ್ ಪೂಂಜಾ ಆಗ್ರಹ

Advertisement

ಬೆಳ್ತಂಗಡಿ, ಆ. 16 : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಅರಣ್ಯ ಸಿಬ್ಬಂದಿಗಳು ಬೇಟೆಯಾಡುತ್ತಿದ್ದರು ಎಂಬ ಕಾರಣಕ್ಕೆ  ಮೂವರನ್ನು ಎನ್ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡಿದ್ದನ್ನು ಶಾಸಕ ಹರೀಶ್ ಪೂಂಜಾ ಅವರು ತೀವ್ರವಾಗಿ ಖಂಡಿಸಿದ್ದಾರೆ.

Advertisement

ಸಾಮಾಜಿಕ ಜಾಲತಾಣದ ತಮ್ಮ ಖಾತೆಯ ಮೂಲಕ ಲೈವ್ ಮೂಲಕ ರಾಜ್ಯ ಸರಕಾರವನ್ನು ಎಚ್ಚರಿಸಿದ ಅವರು, ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಲು ಯೋಚಿಸುವ ಮಧ್ಯೆ, ಸಂವಿಧಾನಕ್ಕೆ, ಕಾನೂನು ಚೌಕಟ್ಟಿಗೆ ವಿರುದ್ಧವಾಗಿ ಅರಣ್ಯ ಇಲಾಖೆ ನಡೆದುಕೊಂಡಿದೆ.

Advertisement

ವೀಡಿಯೋ ಇಲ್ಲಿದೆ

ಈ ಘಟನೆಯು ಗ್ರಾಮೀಣ ಮತ್ತು ಕರ್ನಾಟಕದ ಜನತೆ ಭಯದಿಂದ ಬದುಕುವಂತಾಗಿದೆ. ಅರಣ್ಯದಂಚಿನ ನಿವಾಸಿಗಳಿಗೆ ರಸ್ತೆ, ವಿದ್ಯುತ್ ನಂತಹ ಮೂಲಭೂತ ಸೌಕರ್ಯ ಒದಗಿಸಲು ಕಾನೂನು ತಡೆ ನೀಡುವ ಅರಣ್ಯ ಇಲಾಖೆ ಈ ರೀತಿಯ ಹತ್ಯೆ ಮಾಡಿರುವುದು ಖಂಡನೀಯ. ಅರಣ್ಯ ಇಲಾಖೆಯ ಈ ಧೋರಣೆಯ ವಿರುದ್ಧ ಜನತೆ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಇಲ್ಲದೇ ಇದ್ದರೆ ನಮ್ಮ ಬದುಕಿಗೆ ನಾವೇ ಕೊಳ್ಳಿ ಇಡಬೇಕಾದ ಪರಿಸ್ಥಿತಿ ಬರಬಹುದು.



ಬೆಂಗಳೂರಿನ ಕಾಂಕ್ರಿಟ್ ರಸ್ತೆ ನೋಡಿ ಬೆಳೆದವರು ಇಂದು ರಾಜ್ಯದಲ್ಲಿ ಅರಣ್ಯ ಸಚಿವರಾಗಿದ್ದಾರೆ. ಹೀಗಾಗಿ ಅರಣ್ಯ ನಿವಾಸಿಗಳ ಮೇಲೆ ಕರುಣೆ ಇರುವವರಿಗೆ ಜವಾಬ್ದಾರಿಯನ್ನು ನೀಡಬೇಕಿದೆ ಎಂದರು.
ಅರಣ್ಯ ಇಲಾಖೆಯಿಂದ ಹತ್ಯೆಯಾದ ಮುವರ ಕುಟುಂಬಕ್ಕೆ ಪರಿಹಾರ ಧನ ಒದಗಿಸಬೇಕು. ಈ ಕೃತ್ಯ ನಡೆಸಿದ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ