ಉಡುಪಿ : ಅಧಿಕ ಲಾಭಾಂಶದ ಆಮಿಷ – ಬರೋಬ್ಬರಿ 71.74 ಲಕ್ಷ ರೂ. ವಂಚನೆ

Advertisement

ಉಡುಪಿ, ಜ. 22 : ಷೇ‌ರ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭಾಂಶ ಪಡೆಯಬಹುದು ಎಂದು ಆಮಿಷವೊಡ್ಡಿ ಸಿಂಗಾಪುರದಲ್ಲಿ ಅಕೌಂಟೆಂಟ್ ಆಗಿರುವ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 71.74 ಲಕ್ಷ ರೂ.ಗಳನ್ನು ವಂಚಿಸಿರುವ ಪ್ರಕರಣವೊಂದು ಉಡುಪಿಯ ಸೈಬ‌ರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Advertisement

ಸಿಂಗಾಪುರದಲ್ಲಿ ಅಕೌಟೆಂಟ್ ಆಗಿರುವ ಮಹೇಶ್ ಶೆಟ್ಟಿಗಾರ್ ಎಂಬವರಿಗೆ ಜ.3ರಂದು ಒಮ್ಮಿಫಿಕ್ಸ್ ಪ್ರೊ ಎಂಬ ಹೆಸರಿನಲ್ಲಿ ವಾಟ್ಸಪ್ ಮೂಲಕ ಸಂದೇಶವೊಂದು ಬಂದಿದ್ದು, ಅದರಲ್ಲಿ ಷೇರ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿ ದರೆ ಅಧಿಕ ಲಾಭಾಂಶ ಕೊಡಿಸುವುದಾಗಿ ನಂಬಿಸಲಾಗಿತ್ತು. ಅದರಂತೆ ಮಹೇಶ್ ಅವರು ವಾಟ್ಸಪ್ ಬಳಕೆದಾರ ತಿಳಿಸಿದಂತೆ ಆತ ವಾಟ್ಸಾಪ್ ಮೂಲಕ ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಜ.4ರಿಂದ 18ರವರೆಗೆ ಒಟ್ಟು 71.74 ಲಕ್ಷ ರೂ. ಹಣವನ್ನು ಬ್ಯಾಂಕ್ ಆಫ್ ಇಂಡಿಯಾದ ಉಡುಪಿ ಶಾಖೆಯ ಖಾತೆಯ ಮೂಲಕ ಕಳುಹಿಸಿದ್ದರು.

Advertisement

ಆದರೆ ಈವರೆಗೆ ಹೂಡಿಕೆ ಮಾಡಿದ ಹಣವಾಗಲೀ, ಲಾಭಾಂಶವಾಗಲೀ ನೀಡದೇ ಮೋಸ ಮಾಡಿರುವುದಾಗಿ ಮಹೇಶ್ ಅವರ ಪತ್ನಿ ಯಶೋಧ ದೂರಿನಲ್ಲಿ ತಿಳಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ