ಸುಬ್ರಹ್ಮಣ್ಯ : ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೂ ತಟ್ಟಿದ ಗ್ಯಾಸ್ ವ್ಯತ್ಯಯ ಬಿಸಿ !

Advertisement

ಸುಬ್ರಹ್ಮಣ್ಯ, ಮಾ. 11 : ದೇಶದಲ್ಲಿ ಉಂಟಾಗಿರುವ ಗ್ಯಾಸ್ ವ್ಯತ್ಯಯ ಬಿಸಿ ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯಕ್ಕೂ ತಟ್ಟಿದ್ದು, ಗ್ಯಾಸ್‌ ಪೊರೈಕೆ ವ್ಯತ್ಯಯದಿಂದ ಮಾ. 11ರ ಬುಧವಾರದಿಂದ ಬೆಳಗ್ಗಿನ ಉಪಹಾರದಲ್ಲಿ ಬದಲಾವಣೆ ಮಾಡಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪ್ರತಿದಿನ ಬೆಳಗ್ಗೆ ವಿವಿಧ ಬಗೆಯ ಉಪಹಾರ ನೀಡಲಾಗುತ್ತಿತ್ತು, ಇದೀಗ ಗ್ಯಾಸ್‌ ಪೊರೈಕೆ ವ್ಯತ್ಯಯದಿಂದ ಬೇಯಿಸುವ ತಿನಿಸು ಬದಲಾಗಿ, ಅವಲಕ್ಕಿ, ಮೊಸರು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ದೇವಸ್ಥಾನದಲ್ಲಿ ಮುಂದಿನ 3 ದಿನಕ್ಕೆ ಬೇಕಾಗುವಷ್ಟು ಗ್ಯಾಸ್ ಲಭ್ಯವಿದ್ದು, ಬಳಿಕದಲ್ಲೂ ಪೊರೈಕೆ ಆಗದೇ ಇದ್ದಲ್ಲಿ ಸಮಸ್ಯೆ ಆಗಲಿದೆ ಎನ್ನಲಾಗಿದ್ದು, ಈಗಾಗಲೇ ಗ್ಯಾಸ್ ಪೊರೈಕೆ ಸಂಸ್ಥೆಯವರಿಗೆ ದಿನಕ್ಕೆ 20 ಸಿಲಿಂಡ‌ರ್ ಗ್ಯಾಸ್ ಪೊರೈಕೆ ಮಾಡಲು ದೇವಸ್ಥಾನದ ವತಿಯಿಂದ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತೂ ಪೊರೈಕೆ ಆಗದೇ ಇದ್ದಲ್ಲಿ ಮಧ್ಯಾಹ್ನದ ಭೋಜನ ಪ್ರಸಾದ ವಿತರಣೆಯಲ್ಲೂ ಕೆಲ ಬದಲಾವಣೆ ಮಾಡಲು ಚಿಂತನೆ ನಡೆಸಲಾಗಿದ್ದು, ಬದಲಾವವಣೆ ಮಾಡುವುದಿದ್ದಲ್ಲಿ ಈ ಬಗ್ಗೆ ದೇವಸ್ಥಾನದ ವತಿಯಿಂದ ಅಧಿಕೃತ ಮಾಹಿತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

Advertisement

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ