ನ್ಯೂಯಾರ್ಕ್ :‌ $12.1 ಮಿಲಿಯನ್‌ ಗೆ ಮಾರಾಟವಾಯಿತು “ಚಿನ್ನದ ಟಾಯ್ಲೆಟ್” ! ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ…

ನ್ಯೂಯಾರ್ಕ್ :‌ ವಿಚಿತ್ರ ವಿನ್ಯಾಸದ ಟಾಯ್ಲೆಟ್ ಗಳನ್ನು ನೀವು ನೋಡಿರ್ತೀರಾ, ಕೇಳಿರ್ತೀರ.. ಆದರೆ, ಚಿನ್ನದ ಟಾಯ್ಲೆಟ್ ಬಗ್ಗೆ ನಿಮಗೆ ಗೊತ್ತಾ ? ಚಿನ್ನದ ಟಾಯ್ಲೆಟ್ ಒಂದು ಬರೋಬ್ಬರಿ $12.1 ಮಿಲಿಯನ್‌ ಮಾರಟವಾಗಿದೆ ಇದು ಅಚ್ಚರಿಯಾದರೂ ಸತ್ಯ ಘಟನೆ. $12.1 ಮಿಲಿಯನ್‌ ಅಂದರೆ ಭಾರತದ 10,62,69,00,000 ರೂಪಾಯಿ…

Advertisement

ಸೋಮವಾರ, ನ್ಯೂಯಾರ್ಕ್‌ನಲ್ಲಿರುವ ಸೋಥಬಿಸ್ ಹರಾಜು ಮನೆಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಇಟಾಲಿಯನ್ ಕಲಾವಿದ ಮೌರಿಜಿಯೋ ಕ್ಯಾಟೆಲಾನ್ ಅವರು ನಿರ್ಮಿಸಿದ ‘ಅಮೆರಿಕಾ’ ಎಂಬ ಹೆಸರಿನ 223 ಪೌಂಡ್ ತೂಕ 18-ಕ್ಯಾರೆಟ್ ಚಿನ್ನದ ಟಾಯ್ಲೆಟ್ ಮಾರಾಟವಾಗಿದೆ. ಇದರ ಆರಂಭಿಕ ಬೆಲೆ $10 ಮಿಲಿಯನ್‌ ನಿಗದಿಪಡಿಸಲಾಗಿತ್ತು. ಇದು ಚಿನ್ನದ ಪ್ರಸ್ತುತ ಮಾರುಕಟ್ಟೆ ಬೆಲೆಗೆ ಸಮನಾಗಿತ್ತು. ಇದು ಹಾರಾಜಿನಲ್ಲಿ $12.1 ಮಿಲಿಯನ್‌ ಗಳಿಸಿಕೊಂಡಿದೆ. ಈ ಕಲಾಕೃತಿಯು ಸಾಮಾನ್ಯ ಟಾಯ್ಲೆಟ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ಹರಾಜಿಗೆ ಮುನ್ನ ಸೋಥಬಿಸ್ ನ್ಯೂಯಾರ್ಕ್ ಪ್ರಧಾನ ಕಚೇರಿಯಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಇದನ್ನು ಅಳವಡಿಸಲಾಗಿತ್ತು. ಇದನ್ನು ವೀಕ್ಷಿಸಲು ಸುಮಾರು 100,000 ಜನರು ಬಂದಿದ್ದರು. ಇನ್ನು, ಇದರ ಹೆಸರು ವಿವಾದಕ್ಕೆ ಕಾರಣವಾಗಿದ್ದು, ಟಾಯ್ಲಟ್‌ ಗೆ ʼಅಮೆರಿಕಾʼ ಎಂದು ಹೆಸರಿಡಲಾಗಿದೆ ಯಾಕೆ ಎಂದು ಕ್ಯಾಟೆಲಾನ್ ಹೇಳಿದ್ದು, ಇದು ಕಲಾ ಉತ್ಪಾದನೆ ಮತ್ತು ವಾಣಿಜ್ಯ ಮೌಲ್ಯದ ಘರ್ಷಣೆಯ ಮೇಲೆ ತೀಕ್ಷ್ಣವಾದ ವ್ಯಾಖ್ಯಾನವಾಗಿದೆ. ಅತಿಯಾದ ಸಂಪತ್ತಿನ ಮೇಲೆ ವ್ಯಂಗ್ಯವಾಡಲು ಇದನ್ನು ರಚಿಸಲಾಗಿದ್ದು, ನೀವು 200 ಡಾಲರ್ ಊಟ ತಿನ್ನಿರಿ ಅಥವಾ 2 ಡಾಲರ್ ಹಾಟ್ ಡಾಗ್ ತಿನ್ನಿರಿ, ಆದರೆ ಟಾಯ್ಲೆಟ್ ವಿಷಯದಲ್ಲಿ ಫಲಿತಾಂಶ ಒಂದೇ ಆಗಿರುತ್ತದೆ ಎಂದು ತಿಳಿಸುತ್ತದೆ ಎಂದಿದ್ದಾರೆ.

ಒಟ್ಟಿನಲ್ಲಿ, ಇಂದು ಟಾಯ್ಲೆಟ್ ಗೆ ಕೂಡಾ ಜಗತ್ತಿನಲ್ಲಿ ಬಲು ಎತ್ತರದ ಸ್ಥಾನ ಸಿಕ್ಕಿರುವುದು ಸುಳ್ಳಲ್ಲ.. ಚಿನ್ನದ ಟಾಯ್ಲೆಟ್‌ನ ಮಾರಾಟವು ಕಲೆಯ ಜಗತ್ತಿನಲ್ಲಿ ದೊಡ್ಡ ಸುದ್ದಿಯಾಗಿದೆ. ಈ ಚಿನ್ನದ ಟಾಯ್ಲೆಟ್ ಇದೀಗ ಜಗತ್ತಿನಲ್ಲಿ ಬಹಳ ವೈರಲ್ ಆಗುತ್ತಿರುವ ಸುದ್ದಿಯಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

⚠️ Contents are protected on this website.