ಯಾರೋ ಎಸೆದು ಹೋದ ನವಜಾತ ಶಿಶುವಿಗೆ ಕಾವಲು ಕಾದು ರಕ್ಷಣೆ ಕೊಟ್ಟ ಬೀದಿ ನಾಯಿಗಳು – ಇದು ಸತ್ಯ ಘಟನೆ

Advertisement

ಕೋಲ್ಕತ್ತ : ರಸ್ತೆಯಲ್ಲಿ ಹೋಗುವ ಪುಟ್ಟ ಮಕ್ಕಳನ್ನು ರಕ್ಕಸರಂತೆರಗುವ ಬೀದಿನಾಯಿಗಳ ಸುದ್ದಿಗಳು ನೀವು ಕೇಳಿರಬಹುದು. ಸಿನಿಮಾಗಳಲ್ಲಿ ಯಾವುದೋ ಕಾಡು ಪ್ರಾಣಿಗಳು ಮಗುವಿಗೆ ರಕ್ಷಣೆ ಕೊಡುವುದನ್ನು ನೋಡಿರಬಹುದು. ಆದರೆ, ಇಲ್ಲೊಂದು ವಿಚಿತ್ರ ಘಟನೆ ವರದಿಯಾಗಿದೆ. ಬೀದಿ ನಾಯಿಗಳು ನವಜಾತ ಶಿಶುವಿಗೆ ರಾತ್ರಿಯಿಡೀ ಕಾವಲು ಕಾದಂತಹ ಸತ್ಯ ಘಟನೆ ಇದು. ಇದು ಸತ್ಯವೇ ಎಂಬ ಪ್ರಶ್ನೆಗೆ ಉತ್ತರ ಹೌದು, ಈ ಘಟನೆ ಸತ್ಯವೇ ಆಗಿದೆ.

Advertisement

ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ರೈಲ್ವೆ ಕಾರ್ಮಿಕರ ಕಾಲೋನಿಯಲ್ಲಿ ಯಾರೋ ನವಜಾತಶಿಶುವನ್ನು ಶೌಚಾಲಯದ ಹೊರಗೆ ಇಟ್ಟು ಸ್ಥಳದಿಂದ ಪರಾರಿಯಾಗಿದ್ದರು. ಮಗುವಿನ ಮೈಮೇಲೆ ಒಂದು ತುಂಡು ಬಟ್ಟೆಯೂ ಇರಲಿಲ್ಲ. ಅನಾಥವಾಗಿ ರಸ್ತೆ ಬದಿಯಲ್ಲಿ ಬಿದ್ದು, ಮಗು ಅಳುತ್ತಿತ್ತು. ಮಗುವನ್ನು ಕಂಡ ನಾಯಿಗಳ ಗುಂಪೊಂದು ಆ ಮಗುವಿನ ಮೇಲೆ ರಕ್ಕಸರಂತೆರಗದೆ, ದೇವರಂತೆ ರಕ್ಷಣೆಗೆ ನಿಂತಿದೆ.! ಇದು ನಂಬಲು ಸ್ವಲ್ಪ ಕಷ್ಟವಾಗಬಹುದು, ಆದರೆ ನಂಬಲೇಬೇಕಾದ ಸತ್ಯ ಘಟನೆಯಿದು. ಪ್ರಕೃತಿಯ ವಿಸ್ಮಯವೇ ಹೀಗೆ, ನಮ್ಮನ್ನು ಕಾಪಾಡುವ ಶಕ್ತಿಯೊಂದು ಅಗೋಚರವಾಗಿದೆ ಎಂಬುದಕ್ಕೆ ಇದೊಂದು ನಿದರ್ಶನ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Advertisement

ಮಗುವಿನ ಸುತ್ತಲೂ ವೃತ್ತಕಾರದಲ್ಲಿ ನಾಯಿಗಳು ಮಲಗಿ ರಾತ್ರಿಯಿಂದ ಬೆಳಗ್ಗಿನವರೆಗೂ ಕಾವಲು ನಿಂತಿದೆ. ಸ್ಥಳೀಯರು ಹೇಳುವ ಪ್ರಕಾರ, “ಮುಂಜಾನೆ ಮಗು ಅಳುವ ಸದ್ದು ಕೇಳಿತ್ತು. ಯಾರದ್ದೋ ಮಗು ಅನಾರೋಗ್ಯದಿಂದ ಕೂಗುತ್ತಿದೆ ಎಂದು ನಾವು ಭಾವಿಸಿದ್ದೆವು. ಆದ್ರೆ ಹೊರಗೆ ಬಂದು ನೋಡಿದ ವೇಳೆ ನಮಗೆ ಶಾಕ್ ಆಯಿತು. ನವಜಾತ ಶಿಶುವಿನ ಸುತ್ತ ನಾಯಿಗಳು ಮಲಗಿದ್ದವು. ನಾಯಿಗಳು ಮಗುವಿಗೆ ಕಾವಲು ಕಾಯುತ್ತಿದ್ದಂತೆ ಕಾಣುತ್ತಿತ್ತು ಅದನ್ನು ನಂಬಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.

ಸ್ಥಳೀಯ ವ್ಯಕ್ತಿಯೊಬ್ಬರು ಮಗುವನ್ನು ದುಪ್ಪಟ್ಟಾದಲ್ಲಿ ಸುತ್ತಿಕೊಂಡು ಸಮೀಪದ ಮಹೇಶ್ ಗಂಜ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಂದ ಹೆಚ್ಚಿನ ಪೋಷಣೆಗಾಗಿ ಮಗುವನ್ನು ಕೃಷ್ಣನಗರ ಸದರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಗುವಿನ ಮೇಲೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನೂ ಮಗುವನ್ನು ಬಿಟ್ಟು ಹೋದವರು ಯಾರು ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ