ಕಾರ್ಕಳ, ಜು. 29 : ಹಿರ್ಗಾನ ಗ್ರಾಮದ ಹಾಡಿಗರಡಿ ಶ್ರೀ ಬ್ರಹ್ಮಬೈದರ್ಕಳ ಮಾಯಂದಾಲ ದೇವಿ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಕ್ಷೇತ್ರದ ವರ್ಷಾವಧಿ ಉತ್ಸವವು ಆಗಸ್ಟ್ 17ರಿಂದ ಆಗಸ್ಟ್ 21ವರೆಗೆ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಆಗಸ್ಟ್ 17ನೇ ಸೋಮವಾರದಂದು ತೋರಣ ಮುಹೂರ್ತ, ಹಾಡಿಗರಡಿ ಮನೆಯಿಂದ ಶ್ರೀ ಕ್ಷೇತ್ರಕ್ಕೆ ಭಂಡಾರ ಬರುವುದು, ಪಂಚದೈವಗಳ ಸನ್ನಿಧಾನದಲ್ಲಿ ತನು ತಂಬಿಲ ಹಾಗೂ ಪಂಚಪರ್ವ ಸೇವೆಗಳು, ಸೋಣಾರತಿ ದೀಪಾರಾಧನೆ, ಮಹಾಗಣಬಲಿ, ಮಹಾಪೂಜೆ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ಜರುಗಲಿದೆ.

ಆಗಸ್ಟ್ 18ನೇ ಮಂಗಳವಾರದಂದು ಕಲಶ ಪೂಜೆ, ಕ್ಷೇತ್ರ ಶುದ್ಧಿ, ಮಹಾಪೂಜೆ ಹಾಗೂ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 8.30ಕ್ಕೆ “ಶ್ರೀ ಬೈದರ್ಕಳಾದಿ ಪರಿವಾರ ದೈವಗಳ ನೇಮೋತ್ಸವ”ವು ನಡೆಯಲಿದೆ.
ಆಗಸ್ಟ್ 19ನೇ ಬುಧವಾರದಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಬೆ. 11 ಕ್ಕೆ : “ಶ್ರೀ ಮಾಯಂದಾಲ ದೇವಿ ನೇಮೋತ್ಸವ”ವು ಜರುಗಲಿದೆ.
ಆಗಸ್ಟ್ 20ನೇ ಗುರುವಾರದಂದು ಮಹಾಪೂಜೆ, ವಾರ್ಷಿಕ ನೈವೇದ್ಯ ಪೂಜೆ(ಅಗೇಲು ಸೇವೆ)ಯು ನಡೆಯಲಿದೆ.
ಆಗಸ್ಟ್ 21ನೇ ಶುಕ್ರವಾರದಂದು ಮಹಾಪೂಜೆ, ಪ್ರಸಾದ, ಮಹಾ ಮಂತ್ರಾಕ್ಷತೆ, ಗರಡಿಮನೆಗೆ ಭಂಡಾರ ನಿರ್ಗಮನ, ಸೋಣಾರತಿ ಪೂಜೆ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ.




