ಹೆಜಮಾಡಿ : ಟೋಲ್ ಗೇಟ್ ನಲ್ಲಿ ಪವನ ವಿದ್ಯುತ್ ಯಂತ್ರ – ಲಾಭವೇನು ಗೊತ್ತಾ ?

Advertisement

ಹೆಜಮಾಡಿ, ಜು. 14 : ಹೆಜಮಾಡಿ ಸುಂಕ ವಸುಲಾತಿ ಕೇಂದ್ರದ ಮೇಲ್ಮೈಯಲ್ಲಿ ಗೋಚರಿಸುವ ಸುರುಳಿಯಾಕಾರದ ಯಂತ್ರವು ಪವನ ವಿದ್ಯುತ್ ಉತ್ಪಾದಿಸುವ ಯಂತ್ರಗಳಾಗಿದೆ. ಇವುಗಳನ್ನು “ಲಂಬ ಅಕ್ಷದ ಪವನ ಯಂತ್ರಗಳು’ ಎಂದು ಕರೆಯಲಾಗುತ್ತದೆ.

Advertisement

ಭಾರತದ ಮೊದಲ ಯೋಜನೆ :

Advertisement

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಉಡುಪಿ ಟೋಲ್‌ವೇಪ್ರೈವೇಟ್ ಲಿಮಿಟೆಡ್ ಜಂಟಿಯಾಗಿ ಈ 10 ಕಿಲೋವ್ಯಾಟ್ ಸಾಮರ್ಥ್ಯದ ವ್ಯವಸ್ಥೆಯನ್ನು ಅಳವಡಿಸಿವೆ. ಟೋಲ್ ಪ್ಲಾಜಾ ಮೇಲ್ಛಾವಣಿಯಲ್ಲಿ ಅಳವಡಿಸಲಾಗಿರುವ ದೇಶದ ಮೊಟ್ಟಮೊದಲ ಪ್ರಾಯೋಗಿಕ ಪವನ ವಿದ್ಯುತ್ ಯೋಜನೆ ಇದಾಗಿದೆ. ಕರಾವಳಿ ಭಾಗದಲ್ಲಿ ಬೀಸುವ ಗಾಳಿಯನ್ನು ಎಲ್ಲಾ ದಿಕ್ಕುಗಳಿಂದಲೂ ಗ್ರಹಿಸಿ ಇವು ವಿದ್ಯುತ್ ಉತ್ಪಾದಿಸುತ್ತವೆ. ಕೇವಲ 2.5 m/sನಿಂದ 3 m/sನಷ್ಟು ಕಡಿಮೆ ವೇಗದ ಗಾಳಿ ಇದ್ದರೂ ಇವು ನಿರಂತರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಸದ್ಯಕ್ಕೆ ಮೇಲ್ಪಾವಣಿಯ ಈ ವಿಶಿಷ್ಟ ಪ್ರಾಯೋಗಿಕ ಯೋಜನೆ ಇರುವುದು ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಮಾತ್ರ. ಈ ಪ್ರಯೋಗ ಯಶಸ್ವಿಯಾದರೆ ಸದ್ಯದಲ್ಲೇ “ಹಸುರು ಹೆದ್ದಾರಿ’ ಪರಿಕಲ್ಪನೆಯಡಿ ಇತರ ಕಡೆಗಳಿಗೂ ಇದನ್ನು ವಿಸ್ತರಿಸುವ ಗುರಿಯನ್ನು ಎನ್‌ಎಚ್‌ಎಐ ಹೊಂದಿದೆ ಎನ್ನಲಾಗಿದೆ.

ಹೆಜಮಾಡಿ ಟೋಲ್‌ನಲ್ಲಿ ಈಗಾಗಲೇ 60 ಕಿಲೋವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಘಟಕವಿದೆ. ಈಗ ಈ ಪವನ ವಿದ್ಯುತ್ ಯಂತ್ರಗಳು ಸೌರಶಕ್ತಿಯ ಜತೆಗೂಡಿ ಹೈಬ್ರಿಡ್ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಇದರಿಂದಾಗಿ ರಾತ್ರಿ ವೇಳೆ ಅಥವಾ ಮೋಡ ಕವಿದ ವಾತಾವರಣದಲ್ಲೂ ಟೋಲ್‌ ಕಾರ್ಯಾಚರಣೆಗೆ ತಡೆಯಿಲ್ಲದೆ ವಿದ್ಯುತ್ ಪೂರೈಕೆಯಾಗುತ್ತದೆ. ಈ ಪರಿಸರ ಸ್ನೇಹಿ ಹೆಜ್ಜೆಯಿಂದ ವಾರ್ಷಿಕವಾಗಿ ವಿದ್ಯುತ್ ವೆಚ್ಚದಲ್ಲಿ ಭಾರೀ ಉಳಿತಾಯವಾಗುವುದಲ್ಲದೆ, ಅಂದಾಜು 20 ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ತಡೆಯಬಹುದಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ