ಉಜಿರೆ : ದಶಮಾನೋತ್ಸವದ ಸಂಭ್ರಮದಲ್ಲಿ ಹಿಪ್- ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ; ಏ. 18ರಂದು “ಉಜಿರೆ ಸ್ಟಾರ್ ನೈಟ್ – ದಶಕದ ಸಂಭ್ರಮ”

ಉಜಿರೆ, ಏ. 11 : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತ್ಯಂತ ಚಿರಪರಿಚಿತವಾದ ನೃತ್ಯ ತಂಡ ಹಿಪ್- ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ತಂಡಕ್ಕೀಗ ದಶಮಾನೋತ್ಸವದ ಸಂಭ್ರಮ. ದಶಮಾನೋತ್ಸವದ ಹಿನ್ನಲೆಯಲ್ಲಿ ಏಪ್ರಿಲ್ 18 ಶನಿವಾರದಂದು ಸಂಜೆ ಗಂಟೆ 6 ರಿಂದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ಉಜಿರೆ ಸ್ಟಾರ್ ನೈಟ್ – ದಶಕದ ಸಂಭ್ರಮ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಹನ್ ಎಂ.ಎಸ್ ಮಾಹಿತಿ ನೀಡಿದ್ದಾರೆ.

Advertisement

2015 ರ ಲ್ಲಿ ಸಹನ್ ಎಂ.ಎಸ್ ಉಜಿರೆ ಇವರ ನೇತೃತ್ವದಲ್ಲಿ ಪ್ರಾರಂಭವಾದ ಹಿಪ್- ಬಾಯ್ಸ್ ಡಾನ್ಸ್ ಕ್ರೀವ್ ಉಜಿರೆ ಸಂಸ್ಥೆ, ಇಂದು ಬೃಹತ್ ಆಗಿ ಬೆಳೆದು ನಿಂತು, ಸಾವಿರಾರು ವಿದ್ಯಾರ್ಥಿಗಳ ನೃತ್ಯ ಸಾಧನೆಗ ಮೆಟ್ಟಿಲಾಗಿ ನಿಂತಿದೆ. ಇಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಅನೇಕ ಟಿ.ವಿ ರಿಯಾಲಿಟಿ ಶೋ ಗಳಲ್ಲಿ, ಸೀರಿಯಲ್ ಗಳಲ್ಲಿ, ಚಲನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸೃಜನಾತ್ಮಕ ನೃತ್ಯ ಪ್ರದರ್ಶನದ ಮೂಲಕ ಹೆಸರುವಾಸಿಯಾಗಿರುವ ಈ ತಂಡ ಕರ್ನಾಟಕದಲ್ಲೇ ವೈರಲ್ ತಂಡ ಇದಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿಯೇ ಅತೀ ಹೆಚ್ಚು ಮಕ್ಕಳು ನೃತ್ಯಾಭ್ಯಾಸ ಮಾಡುತ್ತಿರುವ ಏಕೈಕ ಸಂಸ್ಥೆ ಇದಾಗಿದ್ದು, ಇದೀಗ ಈ ತಂಡ ತನ್ನ 10 ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದ್ದು ದಶಮಾನೋತ್ಸವದ ಸಂಭ್ರದಲ್ಲಿದೆ.

ಏಪ್ರಿಲ್ 18 ಶನಿವಾರದಂದು ಸಂಜೆ ಗಂಟೆ 6 ರಿಂದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಥಬೀದಿಯಲ್ಲಿ ಉಜಿರೆ ಸ್ಟಾರ್ ನೈಟ್ – ದಶಕದ ಸಂಭ್ರಮ ಎಂಬ ಕಾರ್ಯಕ್ರಮದಲ್ಲಿ ಸೀರಿಯಲ್, ಚಲನ ಚಿತ್ರಗಳ ಸೆಲೆಬ್ರಿಟಿಗಳು ಭಾಗವಹಿಸಲಿದ್ದು, ಸಂಸ್ಥೆಯಲ್ಲಿ ಕಲಿಯುತ್ತಿರುವ ಮಕ್ಕಳ ಮತ್ತು ಪೋಷಕರ ನೃತ್ಯ ಪ್ರದರ್ಶನ ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.