ಬೆಳ್ತಂಗಡಿ : ಭೂ ಪರಿವರ್ತನೆ ಆಗದ ಜಗದಲ್ಲಿ ಹೋಟೆಲ್ – ಲೋಕಾಯುಕ್ತಕ್ಕೆ ದೂರು

ಬೆಳ್ತಂಗಡಿ, ಆ. 06 : ಲಾಯಿಲ ಗ್ರಾಮ ಪಂಚಾಯತ್‌ನಿಂದ ಭೂ ಪರಿವರ್ತನೆಯಾಗದ ಜಾಗದಲ್ಲಿ ಹೊಟೇಲ್ ಉದ್ಯಮ ನಡೆಸಲು ನಿಯಮ ಬಾಹಿರವಾಗಿ ವಾಣಿಜ್ಯ ವ್ಯವಹಾರದ ಪರವಾನಿಗೆಯನ್ನು ಈ ಹಿಂದಿನ ಪಿಡಿಒ ನೀಡಿದ್ದಾರೆ ಎಂದು ಆರೋಪಿಸಿ, ಇದರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿ ಮಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

ಲಾಯಿಲ ಗ್ರಾಮದ ಎಚ್.ಅಬ್ದುಲ್ ಕರೀಮ್ ಎಂಬವರ ಪತ್ನಿಗೆ ಸೇರಿದ ಸ.ನಂ: 164/2014 ರಲ್ಲಿ  01.50 ಎಕ್ರರೆ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡದೇ ನ್ಯೂ ಮೈನಾ ಹೊಟೇಲ್ ಹೆಸರಿನಲ್ಲಿರುವ ವಾಣಿಜ್ಯ ವ್ಯವಹಾರದ ಉದ್ದೇಶಕ್ಕಾಗಿ ಜಾಗದ ಮಾಲಿಕರು ಪತ್ನಿ ಆಗಿದ್ದರೂ ಪತಿ ಹೆಸರಿಗೆ 2025 ಸೆ.30ರಂದು ಲಾಯಿಲಾ ಗ್ರಾಮ ಪಂಚಾಯತ್‌ನಲ್ಲಿ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿದ್ದ ಶ್ರೀನಿವಾಸ.ಡಿ.ಪಿ ಇವರು ನಿಯಮ ಬಾಹಿರವಾಗಿ ಲೈಸೆನ್ಸ್‌ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ತಕ್ಷಣ ಈ ಬಗ್ಗೆ ತನಿಖೆ ನಡೆಸಿ, ಕಾನೂನು ಪ್ರಕಾರ ಯಾವುದೇ ದಾಖಲೆಗಳಿಲ್ಲದೆ ಲೈಸೆನ್ಸ್ ಮಾಡಿಸಿಕೊಂಡವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆ.6 ರಂದು ಮಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು  : ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ – ರಾಜಿ ಸಂಧಾನ ವಿಫಲ, ಸೆ. 11ಕ್ಕೆ ಮುಂದಿನ ವಿಚಾರಣೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳ ವೆಚ್ಚ ಬಹಿರಂಗಪಡಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಮುಂಬೈ : 2013ರ ಅತ್ಯಾಚಾರ ಪ್ರಕರಣ – ‘ತೆಹಲ್ಕಾ’ದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ದೋಷಿ ಎಂದ ಕೋರ್ಟ್ !

⚠️ Contents are protected on this website.