ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳ ವೆಚ್ಚ ಬಹಿರಂಗಪಡಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ !

ನವದೆಹಲಿ, ಆ. 06 : ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳಿಗೆ ಕೇಂದ್ರ ಸರ್ಕಾರ ಈ ವರ್ಷ ಸುಮಾರು74.5 ಕೋಟಿ ರೂ. ವೆಚ್ಚ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ. ಇದೇ ಉತ್ತರದಲ್ಲಿ 2021ರ ಏಪ್ರಿಲ್‌ನಿಂದ 2025ರ ಡಿಸೆಂಬರ್‌ವರೆಗೆ ಭಾರತಕ್ಕೆ 381.8 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಹೂಡಿಕೆ (FDI) ಹರಿದು ಬಂದಿದೆ ಎಂಬ ಮಾಹಿತಿಯನ್ನೂ ಬಹಿರಂಗಪಡಿಸಲಾಗಿದೆ.

Advertisement

ಆಮ್ ಆದ್ಮ ಪಕ್ಷದ ಸಂಸದ ಸಂಜಯ್ ಸಿಂಗ್ ಹಾಗೂ ಸಿಪಿಐ(ಎಂ) ಸಂಸದ ಡಾ.ವಿ.ಶಿವದಾಸನ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಈ ಅಂಕಿಅಂಶಗಳನ್ನು ನೀಡಲಾಗಿದೆ. 2021ರಿಂದ ಪ್ರಧಾನಿ ಭೇಟಿ ನೀಡಿದ ದೇಶಗಳ ಪಟ್ಟಿ, ಪ್ರತಿ ವರ್ಷದ ಹಾಗೂ ಪ್ರತಿ ಪ್ರವಾಸದ ವೆಚ್ಚ, ಆ ಭೇಟಿಗಳ ಸಂದರ್ಭದಲ್ಲಿ ಕೈಗೊಳ್ಳಲಾದ ದ್ವಿಪಕ್ಷೀಯ ಒಪ್ಪಂದಗಳು, ಹೂಡಿಕೆ ಭರವಸೆಗಳು ಹಾಗೂ ವಾಸ್ತವವಾಗಿ ಬಂದ ಎಫ್‌ಡಿಐ ವಿವರಗಳನ್ನು ಕೇಳಿದ್ದರು.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ, ವರ್ಷವಾರು ಹಾಗೂ ಪ್ರವಾಸವಾರು ವೆಚ್ಚದ ವಿವರಗಳು ಮತ್ತು ಭೇಟಿ ಸಂದರ್ಭಗಳಲ್ಲಿ ಸಹಿ ಮಾಡಲಾದ ಪರಸ್ಪರ ಒಪ್ಪಂದ ಪತ್ರಗಳ (MoU) ದೇಶವಾರು ಪಟ್ಟಿಯನ್ನು ಎರಡು ಅನುಬಂಧಗಳಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಮನಮೋಹನ್ ಸಿಂಗ್ ಅವಧಿಯ ಪ್ರವಾಸ ವೆಚ್ಚಗಳ ಉಲ್ಲೇಖ

ಸಚಿವಾಲಯ ಹಿನ್ನಲೆಯಾಗಿ ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಪ್ರಧಾನಮಂತ್ರಿ ಪ್ರವಾಸಗಳ ವೆಚ್ಚವನ್ನೂ ಉಲ್ಲೇಖಿಸಿದೆ.
2011ರಲ್ಲಿ ಅಮೆರಿಕ ಪ್ರವಾಸ: 10.74 ಕೋಟಿ ರೂ.
2013ರಲ್ಲಿ ರಷ್ಯಾ ಪ್ರವಾಸ: 9.96 ಕೋಟಿ ರೂ.
2011ರಲ್ಲಿ ಫ್ರಾನ್ಸ್ ಪ್ರವಾಸ: 8.33 ಕೋಟಿ ರೂ.
2013ರಲ್ಲಿ ಜರ್ಮನಿ ಪ್ರವಾಸ: 6.02 ಕೋಟಿ ರೂ.
ಈ ಎಲ್ಲವೂ ಪ್ರತ್ಯೇಕ ಏಕೈಕ ಪ್ರವಾಸಗಳ ವೆಚ್ಚವಾಗಿದ್ದು, ಅವುಗಳಲ್ಲಿ ಕೆಲವು ಈ ವರ್ಷದ ಒಟ್ಟು ವಿದೇಶ ಪ್ರವಾಸ ವೆಚ್ಚಕ್ಕಿಂತಲೂ ಹೆಚ್ಚಿನವು ಎಂದು ಸಚಿವಾಲಯ ಸೂಚಿಸಿದೆ. ಈ ಅಂಕಿಅಂಶಗಳು ಹಣದುಬ್ಬರ ಅಥವಾ ಕರೆನ್ಸಿ ಮೌಲ್ಯ ಬದಲಾವಣೆಗೆ ಹೊಂದಾಣಿಕೆ ಮಾಡದ ನೈಜ ವೆಚ್ಚಗಳಾಗಿವೆ ಎಂದು ಸ್ಪಷ್ಟಪಡಿಸಲಾಗಿದೆ.

ಎಫ್‌ಡಿಐ ಕುರಿತು ಸರ್ಕಾರದ ಮಾಹಿತಿ

ಎಫ್‌ಡಿಐ ಕುರಿತು ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, 2021ರ ಏಪ್ರಿಲ್‌ನಿಂದ 2025ರ ಡಿಸೆಂಬರ್‌ವರೆಗೆ ಭಾರತಕ್ಕೆ ಒಟ್ಟು 381.8 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ ಬಂದಿದೆ.

ಪ್ರಧಾನಮಂತ್ರಿಯವರ ಉನ್ನತ ಮಟ್ಟದ ವಿದೇಶ ಪ್ರವಾಸಗಳು ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ಸಹಕಾರವನ್ನು ಬಲಪಡಿಸುವ ಪ್ರಮುಖ ಸಾಧನವಾಗಿವೆ ಎಂದು ಸರ್ಕಾರ ಹೇಳಿದೆ. ಇಂತಹ ಭೇಟಿಗಳ ವೇಳೆ ಕೈಗೊಳ್ಳಲಾದ ಒಪ್ಪಂದಗಳು ತಂತ್ರಜ್ಞಾನ, ನವೀನತೆ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ಸಹಕಾರ, ಇಂಧನ ಸಹಯೋಗ ಹಾಗೂ ಸರಬರಾಜು ಸರಪಳಿ ಸ್ಥೆರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಭಾಗಿತ್ವವನ್ನು ಗಟ್ಟಿಗೊಳಿಸಲು ನೆರವಾಗಿವೆ ಎಂದು ತಿಳಿಸಲಾಗಿದೆ.

ಆದರೆ, 381.8 ಬಿಲಿಯನ್ ಡಾಲರ್ ಎಫ್‌ಡಿಐ ಪೈಕಿ ಎಷ್ಟು ಮೊತ್ತ ಯಾವ ಪ್ರವಾಸ, ಯಾವ ಎಂಒಯು ಅಥವಾ ಯಾವ ಹೂಡಿಕೆ ಭರವಸೆಯೊಂದಿಗೆ ನೇರವಾಗಿ ಸಂಬಂಧಿಸಿದೆ ಎಂಬ ವಿವರವನ್ನು ಉತ್ತರದಲ್ಲಿ ನೀಡಲಾಗಿಲ್ಲ. 2021ರ ಏಪ್ರಿಲ್‌ನಿಂದ 2025ರ ಡಿಸೆಂಬರ್‌ವರೆಗಿನ ಒಟ್ಟು ಎಫ್‌ಡಿಐ ಹರಿವು ಎನ್ನುವ ರೂಪದಲ್ಲೇ ಆ ಸಂಖ್ಯೆಯನ್ನು ಮಂಡಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2026ರಲ್ಲಿ (ಜುಲೈವರೆಗೆ) 13 ದೇಶಗಳಿಗೆ ಅಧಿಕೃತ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಮಲೇಷ್ಯಾ, ಇಸ್ರೇಲ್, ಯುಎಇ, ನೆದರ್ಲೆಂಡ್ಸ್, ಸ್ವೀಡನ್, ನಾರ್ವೆ, ಇಟಲಿ, ಫ್ರಾನ್ಸ್, ಸ್ಟೋವಾಕಿಯಾ, ಸೀಶೆಲ್ಸ್, ಇಂಡೋನೇಷ್ಯಾ, ಆಸ್ಟ್ರೇಲಿಯ ಹಾಗೂ ನ್ಯೂಜಿಲೆಂಡ್‌ಗೆ ಭೇಟಿ ನೀಡಿ ದ್ವಿಪಕ್ಷೀಯ ಮಾತುಕತೆ ಮತ್ತು ವಿವಿಧ ಜಾಗತಿಕ ಸಭೆಗಳಲ್ಲಿ ಭಾಗವಹಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು  : ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ – ರಾಜಿ ಸಂಧಾನ ವಿಫಲ, ಸೆ. 11ಕ್ಕೆ ಮುಂದಿನ ವಿಚಾರಣೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಮುಂಬೈ : 2013ರ ಅತ್ಯಾಚಾರ ಪ್ರಕರಣ – ‘ತೆಹಲ್ಕಾ’ದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ದೋಷಿ ಎಂದ ಕೋರ್ಟ್ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಭೂ ಪರಿವರ್ತನೆ ಆಗದ ಜಗದಲ್ಲಿ ಹೋಟೆಲ್ – ಲೋಕಾಯುಕ್ತಕ್ಕೆ ದೂರು

⚠️ Contents are protected on this website.