ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ – ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಆರೋಪ !

ಹುಬ್ಬಳ್ಳಿ, ಏ. 05 : ಕೆಲವೇ ದಿನದ ಅಂತರದಲ್ಲಿ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸುವ ನೆಪದಲ್ಲಿ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ. ಹುಬ್ಬಳ್ಳಿಯಲ್ಲಿ ಜಿಮ್ ನಲ್ಲಿ ಪ್ರೀತಿಸಿದ ಸಮೀರ್ ಪ್ರಕರಣ ಬಯಲಾಗಿ ದೊಡ್ಡ ಸುದ್ದಿಯಾಗುತ್ತಿದ್ದಂತೆ ಈಗ ಮುಫೀಸ್ ಎಂಬಾತನ ಮೇಲೆ ಲವ್ ಜಿಹಾದ್ ಆರೋಪ ಕೇಳಿಬಂದಿದೆ.

Advertisement

ಕಮರಿಪೇಟೆಯ ಗವಿ ಓಣಿ ನಿವಾಸಿ ಮುಫೀಸ್ ಮಿಯಾನ್ನವರ್ ಎಂಬಾತ ಸಹನಾ ಎಂಬ ಹಿಂದೂ ಯುವತಿಯ ಮೇಲೆ‌ ಬ್ಲ್ಯಾಕ್ ಮೇಲ್ ಮಾಡಿ ನಿರಂತರ ಅತ್ಯಾಚಾರ ಎಸಗಿದ್ದಾನೆಂಬ ಆರೋಪ ಕೇಳಿಬಂದಿದೆ. ಮುಸ್ಲಿಂ ವ್ಯಕ್ತಿಯಾಗಿರುವ ಮುಫೀಸ್ , ಹಿಂದೂ ಮರಾಠ ಯುವತಿ ಸಹನಾ ಎಂಬಾಕೆಗೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ‌ ಧಾರವಾಡದಲ್ಲಿ ರಿಜಿಸ್ಟರ್ ಮದುವೆ ಆಗಲು ತಯಾರಿ ನಡೆಸಿದ್ದ. ಕಳೆದ ಆಗಸ್ಟ್ ನಲ್ಲೇ ಮದುವೆಯಾಗಲು ನೊಂದಣಿ ಮಾಡಿಸಲು ಸಿದ್ದತೆ ಮಾಡಲಾಗಿತ್ತು. ವಿಷಯ ತಿಳಿದು ಯುವತಿ ಕುಟುಂಬಸ್ಥರು ಮದುವೆ ನಿಲ್ಲಿಸಿದ್ದರು. ಇದಾದ ಬಳಿಕ ಪುನಃ ಯುವತಿಗೆ ಬ್ಲಾಕ್ ಮೇಲ್ ಮಾಡಿ, ಖಾಸಗಿ ವಿಡಿಯೋ ಬಿಡುವುದಾಗಿ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ.

ಯುವತಿ ಮನೆಯಲ್ಲಿ ಒಂಟಿಯಾಗಿದ್ದ ವೇಳೆ‌ ಮನೆಗೆ ನುಗ್ಗಿ ಅತ್ಯಾಚಾರ ಎಸಗುತ್ತಿದ್ದ. ವಿಷಯ ಯಾರಿಗಾದರೂ ತಿಳಿಸಿದ್ರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಜೀವ ಭಯದ ಹಿನ್ನೆಲೆ ದೂರು ನೀಡಲು ಸಹನಾ ಹಿಂದೇಟು ಹಾಕಿದ್ದಳು. ಸಮೀರ್ ಮುಲ್ಲಾನ ಲವ್ ಜಿಹಾದ್ ಪ್ರಕರಣ ಹೊರ ಬಂದ‌ ಬಳಿಕ ದೈರ್ಯದಿಂದ ಹೊರಬಂದ ಯುವತಿ, ಸಂಘಟನೆಯವರ ನೆರವಿನಿಂದ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇದೀಗ ಮುಫೀಸ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದೆ.

ಕಾಲೇಜು ಕಾರ್ಯಕ್ರಮವೊಂದರಲ್ಲಿ ಸಹಾನಳನ್ನು ಮುಫೀಸ್ ಪರಿಚಯ ಮಾಡಿಕೊಂಡಿದ್ದ. ಮುಸ್ಲಿಂ ಯುವತಿಯ ಸಹಾಯದಿಂದ ಸಹಾನಳನ್ನು ಪರಿಚಯ ಮಾಡಿಕೊಂಡಿದ್ದ ಮುಫೀಸ್, ಬಳಿಕ ಬೈಕ್ ನಲ್ಲಿ ಸುತ್ತಾಡಿಸಿ ಸಲುಗೆ ಬೆಳೆಸಿದ್ದ. ಇದಾದ ಬಳಿಕ‌ ಸಹಾನಳ‌ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಳಿಕ‌ ರಿಜಿಸ್ಟರ್ ಮದುವೆಗೆ ತಯಾರಿ ನಡೆಸಿದ್ದ ಎಂದು ದೂರಲಾಗಿದೆ.

ಸಮೀರ್ ಲವ್‌ ಜಿಹಾದ್‌ ಪ್ರಕರಣಕ್ಕೆ ಹೊಸ ತಿರುವು

ಸಮೀರ್ ಲವ್‌ ಜಿಹಾದ್‌ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಳ್ಳುತ್ತಿದ್ದು, ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿದಾಖಲಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಪೊಲೀಸರು, ಶನಿವಾರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಬಳಿಕ ಕೆಎಂಸಿಆರ್‌ಐನ ನಿರ್ಭಯಾ ವಾರ್ಡ್‌ನಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಕೌನ್ಸೆಲಿಂಗ್‌ ನಡೆಸಿದರು.

ಏತನ್ಮಧ್ಯೆ, ಘಟನೆಗೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ಹಾಗೂ ಅಶೋಕ ನಗರ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿವೆ. ವಿದ್ಯಾನಗರ ಠಾಣೆಯಲ್ಲಿ ಸಂತ್ರಸ್ತೆಯು ಆರೋಪಿ ಸಮೀರ್‌ ಮುಲ್ಲಾವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದರೆ, ವಿಕಾಸನಗರದಲ್ಲಿರುವ ತಮ್ಮ ಮನೆಗೆ ನುಗ್ಗಿ ಆರೋಪಿ ಸಮೀರ್‌ ಸಹೋದರಿ ತಹಸೀನ್‌ ಮುಲ್ಲಾ, ಲೂಕ್‌, ಸೈಫ್‌, ಗೌತಮ, ರುಕ್ಸಾನ್‌, ಅಜೀಂ ಸೇರಿದಂತೆ ಇತರರು ದಾಂಧಲೆ ಮಾಡಿ ಅವಾಚ್ಯವಾಗಿ ಬೈದು, ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆಯ ತಂದೆ-ತಾಯಿ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದೆಡೆ ಆರೋಪಿ ಸಮೀರ್‌ ಮುಲ್ಲಾ ಕೂಡ ಇಲ್ಲಿಯ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಶುಕ್ರವಾರ ದೇವಾಂಗಪೇಟೆಯ ತಮ್ಮ ಮನೆಗೆ ಬಂದ ಚಿಂತನ, ಈತನ ಪುತ್ರ ಹಾಗೂ 50-60 ಜನರ ತಂಡ ಅವಾಚ್ಯವಾಗಿ ಬೈದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಅಲ್ಲದೇ, ಆಟೊದಲ್ಲಿ ಅಪಹರಿಸಿಕೊಂಡು ಹೋಗಿ ದನದ ಕೊಟ್ಟಿಗೆಯಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಹೊರಬಿದ್ದ ಇನ್ನೊಂದು ವಿಡಿಯೋದಲ್ಲಿ, ಆರೋಪಿ ದೌರ್ಜನ್ಯ ಎಸಗಿದಾಗ ಗರ್ಭನಿರೋಧಕ ಮಾತ್ರೆ ನೀಡುತ್ತಿದ್ದ ಎಂಬ ಆರೋಪ ಸಂತ್ರಸ್ತೆಯಿಂದ ಕೇಳಿ ಬಂದಿದೆ. ‘‘ಮಾತ್ರೆ ತೆಗೆದುಕೊಳ್ಳಲು ನಿರಾಕರಿಸಿದಾಗ ಆರೋಪಿ ಬೆದರಿಕೆ, ಒತ್ತಡ ಹಾಕುತ್ತಿದ್ದ’’ಎಂದು ಸಂತ್ರಸ್ತೆ ಹಾಗೂ ಕುಟುಂಬದವರು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾತ್ರೆ ತೆಗೆದುಕೊಳ್ಳುವ ವಿಡಿಯೋ ಕೂಡ ಬಹಿರಂಗಗೊಂಡಿದೆ. ಕಾನೂನು ನಿಯಮಕ್ಕೆ ಅನುಗುಣವಾಗಿ ಆರೋಪಿಗಳನ್ನು ಹಾಗೂ ಸಂಬಂಧಪಟ್ಟವರನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಯುವತಿ ಹೇಳಿಕೆ ಅನ್ವಯ, ಸಮೀರ್‌ ಸಹೋದರಿ ಹಾಗೂ ಅವರ ಪತಿ ಸಂತ್ರಸ್ತೆಗೆ ಸಮಿರ್‌ ಜತೆಯೇ ಇರುವಂತೆ ಒತ್ತಡ ಹಾಕುತ್ತಿದ್ದರು ಎಂದು ತಿಳಿದು ಬಂದಿದೆ. ಅವರನ್ನು ಸಹ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ ಮಾಹಿತಿ ನೀಡಿದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.