ಸೆಪ್ಟೆಂಬರ್ 9ಕ್ಕೆ ಐಫೋನ್ 18 ಪ್ರೋ ಬಿಡುಗಡೆ

Advertisement

ನವದೆಹಲಿ, ಆ. 27 : ಆಪಲ್ ಕಂಪನಿಯು ಐಫೋನ್‌ನ ಮುಂಬರುವ 18ರ ಸರಣಿಯನ್ನು ಬಿಡುಗಡೆ ಮಾಡುವ ಬಗ್ಗೆ ಇದೀಗ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಸೆ.9ರಂದು ಲಾಂಚ್ ಇವೆಂಟ್ ನಡೆಯಲಿದೆ. ಈ ವೇಳೆ ಹಲವು ಹೊಸ ಪ್ರಾಡಕ್ಟ್‌ಗಳು ರಿಲೀಸ್ ಆಗಲಿದ್ದು, ಐಫೋನ್ 18 ಪ್ರೋ, ಐಫೋನ್ 18 ಪ್ರೋ ಮ್ಯಾಕ್ಸ್ ಬಿಡುಗಡೆಯಾಗುವ ನಿರೀಕ್ಷೆಯಿದೆ.

Advertisement

ಈ ಕುರಿತು ಆಪಲ್ ಕಂಪನಿಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಸೆಪ್ಟೆಂಬರ್ 9ರಂದು ಬೆಳಿಗ್ಗೆ 10 ಗಂಟೆಗೆ “ಸರ್ಪ್ರೈಸ್ ಅಂಡ್ ಶೈನ್” ಎಂಬ ಟ್ಯಾಗ್‌ಲೈನ್‌ನೊಂದಿಗೆ ಲಾಂಚ್ ಇವೆಂಟ್ ನಡೆಯಲಿದೆ.

Advertisement

ಐಫೋನ್ ಪ್ರಿಯರು ಸೆ.9ರಂದು ಐಫೋನ್ 18ರ ಸರಣಿ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದು, ಆದರೆ ಕಂಪನಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಬದಲಾಗಿ ಏನೆಲ್ಲಾ ಬಿಡುಗಡೆಯಾಗಬಹುದು ಎಂಬ ಪಟ್ಟಿ ಬಿಡುಗಡೆ ಮಾಡಿದ್ದು, ಐಫೋನ್ 18 ಪ್ರೋ, ಐಫೋನ್ 18 ಪ್ರೋ ಮ್ಯಾಕ್ಸ್, ಐಫೋನ್ ಫೋಲ್ಡ್, ಆಪಲ್ ವಾಚ್ ಸೀರಿಸ್ 12, ಆಪಲ್ ವಾಚ್ ಅಲ್ಟ್ರಾ 4, ಏರ್‌ಪಾಡ್ 6, ಐಪ್ಯಾಡ್ ಮಿನಿ, ಹೋಮ್‌ಪಾಡ್ ಮಿನಿ 2, ಆಪಲ್ ಟಿವಿ 4ಕೆ, ಆಪಲ್ ಹೋಮ್ ಹಬ್ ಬಿಡುಗಡೆಯಾಗುವ ಸಾಧ್ಯತೆಯಿದೆ.

ಲಾಂಚ್ ಇವೆಂಟ್ ಯೂಟ್ಯೂಬ್, ಆಪಲ್ ವೆಬ್‌ಸೈಟ್ ಮತ್ತು ಆಪಲ್ ಟಿವಿಯಲ್ಲಿ ನೇರಪ್ರಸಾರವಾಗಲಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ