ಟೆಹ್ರಾನ್ : ‌ಕುವೈತ್‌ನಲ್ಲಿನ US ಮಿಲಿಟರಿ ಬೇಸ್‌ಗಳ ಮೇಲೆ ಇರಾನ್‌ ಆಕ್ರಮಣ – ಅರಬ್ ರಾಷ್ಟ್ರಗಳಿಗೆ ಈಗ ಜೀವಭಯ !

Advertisement

ಟೆಹ್ರಾನ್, ಜೂ. 03 : ‌ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಲ್ಭಣವಾಗುತ್ತಿದ್ದಂತೆ ಪರ್ಷಿಯನ್‌ ಕೊಲ್ಲಿಯಲ್ಲಿ ಇರಾನ್‌ ಮೇಲಿನ ಅಮೆರಿಕಾದ ದಾಳಿಗೆ ಪ್ರತೀಕಾರವಾಗಿ ಕುವೈತ್‌ನಲ್ಲಿನ US ಮಿಲಿಟರಿ ಬೇಸ್‌ಗಳ ಮೇಲೆ ಆಕ್ರಮಣ ಮಾಡಲಾಗಿದೆ ಎಂದು ಬುಧವಾರ(ಜೂನ್.03ರಂದು) ಇರಾನ್‌ ರಾಜ್ಯ ಮಾಧ್ಯಮ IRIB ತಿಳಿಸಿದೆ.

Advertisement

ಈ ಕುರಿತು IRIB ವರದಿಯ ಪ್ರಕಾರ, “ಪರ್ಷಿಯನ್ ಕೊಲ್ಲಿ, ಹೊರ್ಮುಜ್ ಜಲಸಂಧಿ ಮತ್ತು ಕೆಶ್ಮ್ ದ್ವೀಪದಲ್ಲಿ ಅಮೆರಿಕಾದ ʼಪ್ರತಿಕೂಲ ಕ್ರಮಗಳʼ ನಂತರ, ಇದಕ್ಕೆ ಪ್ರತಿಕ್ರಿಯೆಯಾಗಿ ಕುವೈತ್‌ನಲ್ಲಿರುವ ಅಮೆರಿಕಾ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆʼ ಎಂದು ತಿಳಿಸಿದೆ. ಇನ್ನು, ಬಹ್ರೇನ್‌ನಲ್ಲಿನ US ನೆಲೆಗಳ ಮೇಲೆಯೂ ದಾಳಿ ನಡೆದಿರುವ ವರದಿಯಾಗಿದೆ.

Advertisement

ಈ ಕುರಿತು IRGC ಸಹ ಹೇಳಿಕೆ ನೀಡಿದ್ದು, ಇದರಲ್ಲಿ “ಇರಾನ್‌ನ ಕೆಶ್ಮ್ ದ್ವೀಪದ ಮೇಲೆ US ದಾಳಿಗೆ ಪ್ರತಿಕ್ರಿಯೆಯಾಗಿ ನಿಖರ ಮತ್ತು ಕೇಂದ್ರೀಕೃತ ಕ್ಷಿಪಣಿ ದಾಳಿಗಳನ್ನು ನಡೆಸಲಾಗಿದ್ದು, ಇನ್ಮುಂದೆ ಇರಾನ್‌ ಮೇಲಿನ ಹಿಟ್ ಅಂಡ್ ರನ್ ಸಮಯ ಮುಗಿದಿದ್ದು ಮತ್ತು ದಮನಕಾರಿ ಶಕ್ತಿಗಳು ತಮ್ಮ ಅಜ್ಞಾನ ಮತ್ತು ಅಜಾಗರೂಕ ಸಾಹಸದ ಗಂಭೀರ ಪರಿಣಾಮಗಳನ್ನು ಒಪ್ಪಿಕೊಳ್ಳಬೇಕು. ಅಲ್ಲದೆ, ಗಡಿ ಹಾಗೂ ಸಾರ್ವಭೌಮತ್ವದ ಒಂದು ಇಂಚು ಸಹ ಮುಟ್ಟುವಂತೆ ಯಾವುದೇ ಮೂರ್ಖತನ ಆಕ್ರಮಣಗಳನ್ನು ಮಾಡಿದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ಈ ಪ್ರದೇಶದಲ್ಲಿ ತಮ್ಮ ನೆಲೆಗಳು ಹಾಗೂ ಅವರ ಹಿತಾಸಕ್ತಿಯ ಪ್ರದೇಶಗಳನ್ನು ಬೂದಿಯಾಗಿ ಪರಿವರ್ತಿಸುವಂತಹ ದೃಢವಾದ ಮತ್ತು ನಿರ್ಣಾಯಕ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದೆ.

ದಾಳಿಯ ಕುರಿತು ಕುವೈತ್‌ ಹೇಳಿಕೆ

ಏತನ್ಮಧ್ಯೆ, ಕೊಲ್ಲಿಯಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ದೇಶದ ಹಲವಾರು ಭಾಗಗಳಲ್ಲಿ ಜೋರಾಗಿ ಸ್ಫೋಟಗಳ ಶಬ್ದ ಕೇಳಿಬಂದಿದ್ದು, ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಒಳಬರುವ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ತಡೆದಿವೆ ಎಂದು ಕುವೈತ್ ಹೇಳಿದೆ.

ಈ ಕುರಿತು ಕುವೈತ್ ಸೇನೆಯ ಜನರಲ್ ಸ್ಟಾಫ್ ನೀಡಿದ ಹೇಳಿಕೆಯ ಪ್ರಕಾರ, “ನಿವಾಸಿಗಳು ವರದಿ ಮಾಡಿದ ಜೋರಾದ ಸ್ಫೋಟಗಳು ವೈಮಾನಿಕ ಬೆದರಿಕೆಗಳ ವಿರುದ್ಧ ವಾಯು ರಕ್ಷಣಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದ್ದು, ಕುವೈತ್ ವಾಯು ರಕ್ಷಣಾ ಪಡೆಗಳು ಪ್ರಸ್ತುತ ಪ್ರತಿಕೂಲ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಎದುರಿಸುತ್ತಿವೆ. ಸ್ಫೋಟದ ಶಬ್ದಗಳು ಕೇಳಿಬಂದರೆ, ಅವು ವಾಯು ರಕ್ಷಣಾ ವ್ಯವಸ್ಥೆಗಳು ಪ್ರತಿಕೂಲ ದಾಳಿಯನ್ನು ಪ್ರತಿಬಂಧಿಸುವುದರ ಪರಿಣಾಮವಾಗಿದೆ ಎಂದು ಅರಿತುಕೊಳ್ಳಿ ಎಂದು ತಿಳಿಸಿದೆ. ಅಲ್ಲದೆ, ನಾಗರಿಕರು ಪ್ರತಿಬಂಧಗಳ ನಂತರ ಬಿದ್ದಿರಬಹುದಾದ ಯಾವುದೇ ಭಗ್ನಾವಶೇಷಗಳು, ಚೂರುಗಳು ಅಥವಾ ಗುರುತಿಸಲಾಗದ ವಸ್ತುಗಳನ್ನು ಸಮೀಪಿಸದಂತೆ ಎಚ್ಚರಿಕೆ ನೀಡಿದ್ದು, ಅಧಿಕಾರಿಗಳು ನೀಡುವ ಭದ್ರತೆ ಮತ್ತು ಸುರಕ್ಷತಾ ಸೂಚನೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ವಿನಂತಿಸಲಾಗಿದೆ” ಎಂದು ತಿಳಿಸಿದ್ದಾರೆ.

ಇನ್ನು, ನಾಗರಿಕರು ಮತ್ತು ನಿವಾಸಿಗಳು ಅನುಮಾನಾಸ್ಪದ ವಸ್ತುಗಳು ಕಂಡುಬಂದ್ದಲ್ಲಿ, ತಕ್ಷಣವೇ 112 ತುರ್ತು ಹಾಟ್‌ಲೈನ್ ಮೂಲಕ ಅಧಿಕಾರಿಗಳಿಗೆ ತಿಳಿಸುವಂತೆ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ಸೌದ್ ಅಬ್ದುಲಜೀಜ್ ಅಲ್-ಒಟೈಬಿ ಒತ್ತಾಯಿಸಿದ್ದು, ಅಧಿಕೃತ ಮಾಹಿತಿ ಮಾರ್ಗಗಳನ್ನು ಮಾತ್ರ ಅವಲಂಬಿಸಿ ಸುರಕ್ಷತಾ ನಿರ್ದೇಶನಗಳನ್ನು ಪಾಲಿಸುವಂತೆ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಇರಾನ್‌ ಡ್ರೋನ್‌ ವಿಫಲಗೊಳಿಸಲಾಗಿದೆ ಎಂದ US

ಇತ್ತ, ಈ ಕುರಿತು ಅಮೆರಿಕಾದ ಸೆಂಟಕಾಮ್‌ ಸಹ ಟ್ವೀಟ್‌ ಮಾಡಿದ್ದು, ಗಲ್ಫ್‌ನಲ್ಲಿನ ನೆರೆರಾಷ್ಟ್ರಗಳ ಮೇಲೆ ಇರಾನ್ ಹಲವಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಆದಾಗ್ಯೂ, ಅವೆಲ್ಲವೂ ತಮ್ಮ ಉದ್ದೇಶಿತ ಗುರಿಗಳನ್ನು ತಲುಪಲು ವಿಫಲವಾಗಿವೆ. ಕುವೈತ್ ಮೇಲೆ ಹಾರಿಸಿದ 2 ಇರಾನಿನ ಕ್ಷಿಪಣಿಗಳು ದಾರಿಯುದ್ದಕ್ಕೂ ವಿಫಲವಾಗಿದೆ. ಜೊತೆಗೆ ಬಹ್ರೇನ್ ಮೇಲೆ ಹಾರಿಸಿದ 3 ಕ್ಷಿಪಣಿಗಳನ್ನು ಅಮೆರಿಕಾ ಮತ್ತು ಬಹ್ರೇನ್ ವಾಯು ರಕ್ಷಣಾ ಪಡೆಗಳು ತಕ್ಷಣವೇ ತಡೆಹಿಡಿದಿವೆ. ಇನ್ನು, ಇದೇ ವೇಳೆ ಅಮೆರಿಕಾ ಪಡೆಗಳು ಕ್ವೆಶ್ಮ್ ದ್ವೀಪದಲ್ಲಿರುವ ಇರಾನಿನ ಮಿಲಿಟರಿ ಭೂ ನಿಯಂತ್ರಣ ಕೇಂದ್ರದ ಮೇಲೆ ಆತ್ಮರಕ್ಷಣೆಯ ದಾಳಿಗಳನ್ನು ನಡೆಸಿದ್ದು, ಈ ಘಟನೆಯಲ್ಲಿ ಯಾವುದೇ ಅಮೇರಿಕನ್‌ ಸೈನಿಕರಿಗೆ ಗಾಯವಾಗಿಲ್ಲ” ಎಂದು ತಿಳಿಸಿದೆ.

ತೈಲದ ಮೇಲೆ ಇಸ್ರೇಲ್ ಬಾಂಬ್, ನೀರಿನ ಮೇಲೆ ಇರಾನ್ ಕಣ್ಣು! ಶುರುವಾಯ್ತು ವಾಟರ್‌ ವಾರ್, ಅರಬ್ ರಾಷ್ಟ್ರಗಳಿಗೆ ಈಗ ಜೀವಭಯ!

ಹೀಗೆ ಮಧ್ಯಪ್ರಾಚ್ಯದಲ್ಲಿ ಅಮೆರಿಕಾ-ಇರಾನ್‌ ನಡುವೆ ದಾಳಿಗಳು ಮತ್ತೆ ಪುನಾರರಂಭವಾಗಿದ್ದು, US ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್‌ ಗಲ್ಫ್‌ನಲ್ಲಿನ ತನ್ನ ನೆರೆ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿರುವುದು ಇಡೀ ಪ್ರದೇಶವನ್ನೇ ಯುದ್ಧದ ಬಲೆಗೆ ಸಿಲುಕುವಂತೆ ಮಾಡಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ