ಬೇಷರತ್ತಾದ ಶರಣಾಗತಿಗೆ ಅಮೇರಿಕಾ ಬೇಡಿಕೆ : ಅದು ಅಮೆರಿಕವನ್ನು ಸಮಾಧಿಗೆ ಕೊಂಡೊಯ್ಯಬೇಕಾದ ಕನಸು ಎಂದ ಇರಾನ್ – ಯುದ್ಧಕ್ಕೆ ರಷ್ಯಾ ಎಂಟ್ರಿ !?

Advertisement

ದುಬೈ, ಮಾ. 07 : ಬೇಷರತ್ತಾದ ಶರಣಾಗತಿಗೆ ಅಮೆರಿಕ ಇಟ್ಟಿರುವ ಬೇಡಿಕೆ ಕುರಿತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಮಿಯಾನ್ ಪ್ರತಿಕ್ರಿಯಿಸಿದ್ದು ‘ಅದು ಅಮೆರಿಕವನ್ನು ಸಮಾಧಿಗೆ ಕೊಂಡೊಯ್ಯಬೇಕಾದ ಕನಸು’ ಎಂದು ಹೇಳಿದ್ದಾರೆ. ಸದ್ಯಕ್ಕೆ ಸಂಘರ್ಷ ಮುಕ್ತಾಯವಾಗುವ ಯಾವುದೇ ಲಕ್ಷಣ ಕಂಡು ಬಂದಿಲ್ಲ.

Advertisement

ಯುಎಸ್‌ ಅಧ್ಯಕ್ಷ ಟ್ರಂಪ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಇರಾನ್‌ನ “ಬೇಷರತ್ತಾದ ಶರಣಾಗತಿ”ಗೆ ಕರೆ ನೀಡುವ ಮೂಲಕ, ಇರಾನ್ ಜತೆ ಮಾತುಕತೆಗಳನ್ನು ತಳ್ಳಿಹಾಕಿದಂತೆ ಕಂಡುಬಂದಿದೆ. ಟ್ರಂಪ್ ಅವರು ಇರಾನ್‌ನ ಮುಂದಿನ ನಾಯಕನನ್ನು ಆಯ್ಕೆ ಮಾಡುವಲ್ಲಿ ಭಾಗಿಯಾಗಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

Advertisement

ಇನ್ನೊಂದೆಡೆ ಅಮೆರಿಕದ ಸ್ಥಾನಗಳ ಕುರಿತು ರಷ್ಯಾ ಇರಾನ್‌ಗೆ ಗುಪ್ತಚರ ಮಾಹಿತಿಯನ್ನು ಒದಗಿಸುತ್ತಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಸೇರಿದಂತೆ ಮೂರು ಮೂಲಗಳು ಸಿಬಿಎಸ್ ನ್ಯೂಸ್‌ಗೆ ದೃಢಪಡಿಸಿವೆ. ರಷ್ಯಾ ಅಧ್ಯಕ್ಷ ವ್ಹಾದಿಮಿರ್ ಪುತಿನ್ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಚಿಯಾನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇಸ್ರೇಲ್ ಶನಿವಾರ ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಪಶ್ಚಿಮ ಮತ್ತು ಮಧ್ಯ ಇರಾನ್‌ನ ಇತರ ಭಾಗಗಳ ಮೇಲೆ ಹೊಸ ದಾಳಿಯ ಅಲೆಯನ್ನು ಪ್ರಾರಂಭಿಸಿದ್ದು, 80 ಕ್ಕೂ ಹೆಚ್ಚು ಯುದ್ಧ ವಿಮಾನಗಳು ದಾಳಿ ನಡೆಸಿವೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.
ಸ್ಥಳೀಯ ಸಮಯ ಶನಿವಾರ ಬೆಳಗ್ಗೆ ಇರಾನ್ ಇಸ್ರೇಲ್ ಕಡೆಗೆ ಒಂದು ಸುತ್ತಿನ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.

ಆಪರೇಷನ್ ಎಪಿಕ್ ಪ್ಯೂರಿಯದ ಮೊದಲ ಏಳು ದಿನಗಳಲ್ಲಿ, ಅಮೆರಿಕ 3,000 ಕ್ಕೂ ಹೆಚ್ಚು ಗುರಿಗಳನ್ನು ಹೊಡೆದಿದ್ದು ಇರಾನಿನ 43 ಯುದ್ಧ ನೌಕೆಗಳು ಹಾನಿಗೊಳಗಾಗಿವೆ ಮತ್ತು ನಾಶವಾಗಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಶುಕ್ರವಾರ ತಿಳಿಸಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ