ವಾಷಿಂಗ್ಟನ್ :‌ ಇರಾನ್ ನೊಂದಿಗಿನ ಮಾತುಕತೆಗಳು ವಿಫಲವಾದಲ್ಲಿ ಆಕ್ರಮಣಕಾರಿ ದಾಳಿಗೆ ಯುಎಸ್‌ ಸಜ್ಜು – ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್ :‌ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಯುದ್ಧದ ಕುರಿತು ಮಾಹಿತಿ ಹಂಚಿಕೊಳ್ಳಲು ವಾಷಿಂಗ್ಟನ್‌ ನಲ್ಲಿ ದೇಶವನ್ನುದ್ದೇಶಿಸಿ ಭಾಷಣ ನಡೆಸಿದ್ದು,ಇರಾನ್‌ ಯುದ್ಧದಲ್ಲಿ ಅಮೆರಿಕಾ ಅಭೂತಪೂರ್ವ ಜಯವನ್ನು ಗಳಿಸಿದ್ದು, ನಮ್ಮ ಉದ್ದೇಶಗಳನ್ನು ಪೂರೈಸಲು ಸಾಕಷ್ಟು ಹತ್ತಿರವಾಗಿದ್ದೇವೆ. ಆದಾಗ್ಯೂ, ಇರಾನ್ ನೊಂದಿಗಿನ ಮಾತುಕತೆಗಳು ವಿಫಲವಾದಲ್ಲಿ ಆಕ್ರಮಣಕಾರಿ ದಾಳಿಗೆ ಯುಎಸ್‌ ಸಜ್ಜಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಹೊರ್ಮುಜ್‌ ಜಲಸಂಧಿಯಾಗಲಿ ಅವರ ತೈಲವಾಗಲಿ ನಮಗೆ ಬೇಡ ಎಂದು ತಿಳಿಸಿದ್ದಾರೆ.

Advertisement

ಇರಾನ್‌ ಯುದ್ಧದಲ್ಲಿ ಅಮೆರಿಕಾಗೆ ಅಭೂತಪೂರ್ವ ಜಯ ಎಂದ ಟ್ರಂಪ್‌ ಘೋಷಣೆ

ಕಳೆದ ಒಂದು ತಿಂಗಳಿನಿಂದ ಇರಾನ್‌ ಮೇಲೆ ಅಮೆರಿಕಾ ನಡೆಸುತ್ತಿರುವ ಆಪರೇಷನ್‌ ಎಪಿಕ್‌ ಫ್ಯೂರಿಯಲ್ಲಿ ಇರಾನ್‌ ನ ನೌಕಾಪಡೆ ಸೇರಿದಂತೆ ಅವರ ಮಿಲಿಟರಿಗೆ ದೊಡ್ಡ ನಷ್ಟವಾಗಿದ್ದು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುವ ಅವರ ಸಾಮರ್ಥ್ಯ, ಅವರ ಶಸ್ತ್ರಾಸ್ತ್ರ ಕಾರ್ಖಾನೆಗಳು ಮತ್ತು ರಾಕೆಟ್ ಲಾಂಚರ್‌ಗಳನ್ನು ಛಿದ್ರಗೊಳಿಸಲಾಗುತ್ತಿದ್ದು, ಅವರ ಮಿಲಿಟರಿ ಸಾಮರ್ಥ್ಯಗಳನ್ನು ಗಣನೀಯವಾಗಿ ಕುಗ್ಗಿಸಿದ್ದೇವೆ. ಜೊತೆಗೆ ಈಗ ಅವರಲ್ಲಿ ಇರಾನ್ ಸೈನ್ಯವು ಹೋಗಿದೆ, ಅವರ ನಾಯಕತ್ವವು ಹೋಗಿದೆ, ಅವರ IRGC ಕಮಾಂಡರ್ ನಾಶವಾಗಿದ್ದಾರೆ ಎಂದು ಟ್ರಂಪ್‌ ಹೇಳಿದ್ದಾರೆ.

ಇರಾನ್‌ ಪರಮಾಣು ಸಾಮರ್ಥ್ಯ ಹೊಂದಲು ಸಾಧ್ಯವಿಲ್ಲ ಎಂದು ಪುನರುಚ್ಚಾರ

ಈ ಯುದ್ಧದಲ್ಲಿ ಇರಾನ್‌ ಪರಮಾಣು ಸಾಮರ್ಥ್ಯವನ್ನು ಹೊಂದಿರಬಾರದು ಎಂಬ ಅಮೆರಿಕಾದ ನಿಲುವನ್ನು ಪುನರುಚ್ಚರಿಸಿದ ಟ್ರಂಪ್‌ ” ಈ ನಿಲುವು ಸ್ಪಷ್ಟವಾಗಿದ್ದು, ಇರಾನ್‌ ಪರಮಾಣು ಶಕ್ತಿಯನ್ನು ಹೊಂದಲು ಸಾಧ್ಯವಿಲ್ಲ. ಇದಕ್ಕಾಗಿಯೇ ನಾನು ಇರಾನ್ ಜೊತೆಗಿನ ಬರಾಕ್ ಒಬಾಮಾ ಅವರ ವಿನಾಶಕಾರಿ ಪರಮಾಣು ಒಪ್ಪಂದವನ್ನು ರದ್ದುಗೊಳಿಸಿದೆ. ಅಲ್ಲದೆ, ಇರಾನ್ ಪರಮಾಣು ಶಕ್ತಿಯನ್ನು ಹೊಂದಲು ಸಾಧ್ಯವಿಲ್ಲ ಎಂದು ಹಲವು ಎಲ್ಲರೂ ವರ್ಷಗಳಿಂದ ಹೇಳುತ್ತಿದ್ದಾರೆ. ಅಂತಯೇ, ಈ ಯುದ್ಧದಲ್ಲಿ ನಮ್ಮ ಮುಖ್ಯ ಉದ್ದೇಶ ಸಂಪೂರ್ಣವಾಗಿ ಇರಾನ್‌ ನ ನೌಕಾಪಡೆಯನ್ನು ಕೆಡುವುವುದು ಅವರ ಮಿಲಿಟರಿಯನ್ನು ನಾಶಪಡಿಸುವುದು ಪ್ರಮುಖವಾಗಿ ಅವರ ಪರಮಾಣು ಬಾಂಬ್‌ ನಿರ್ಮಿಸುವ ಮತ್ತು ಪ್ರಾದೇಶಿಕವಾಗಿ ಭಯೋತ್ಪಾದಕ ಪ್ರಾಕ್ಸಿಗಳಿಗೆ ಬೆಂಬಲ ನೀಡುವ ಅವರ ಸಾಮರ್ಥ್ಯವನ್ನು ನಾಶಮಾಡುವುದು” ಎಂದು ತಿಳಿಸಿದ್ದಾರೆ.

ಅಲ್ಲದೆ, ಈ ಯುದ್ಧದ ಅಮೆರಿಕಾದ ಭದ್ರತೆ ಹಾಗೂ ಸುರಕ್ಷತೆಗೆ ಅಗತ್ಯವ ಎಂದಿರುವ ಟ್ರಂಪ್‌ ಈ ಭಯೋತ್ಪಾದಕರು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಅಸಹನೀಯ ಬೆದರಿಕೆಯಾಗಿದೆ. ಏಕೆಂದರೆ, ಭೂಮಿಯ ಮೇಲಿನ ಅತ್ಯಂತ ಹಿಂಸಾತ್ಮಕ ಮತ್ತು ದರೋಡೆಕೋರ ಆಡಳಿತವು ಪರಮಾಣು ಎಂಬ ಗುರಾಣಿಯ ನೆಪದಿಂದ ಪ್ರಪಂಚದಲ್ಲಿ ಭಯೋತ್ಪಾದನೆ, ಬಲವಂತ ಮತ್ತು ಸಾಮೂಹಿಕ ಹತ್ಯೆಯ ಚಟುವಟಿಕೆಗಳನ್ನು ನಡೆಸಲು ಶಕ್ತಿ ನೀಡಿದಂತಾಗುತ್ತದೆ ಎಂದಿದ್ದಾರೆ.

ಇರಾನ್‌ ಮೇಲಿನ ಭಾರಿ ಪ್ರಮಾಣದ ಆಕ್ರಮಣದ ಎಚ್ಚರಿಕೆ

ಅಮೆರಿಕಾದ ಉದ್ದೇಶಗಳು ಸಂಪೂರ್ಣವಾಗಿ ಗುರಿತಲುಪುವವರೆಗೂ ಇರಾನ್‌ ಮೇಲಿನ ಮಿಲಿಟರಿ ಒತ್ತಡದ ಅಗತ್ಯದ ಕುರಿತು ವಿವರಿಸಿದ ಟ್ರಂಪ್‌ “ಇರಾನ್‌ ಮಾತುಕತೆಗಳಲ್ಲಿ USನ ಷರತ್ತುಗಳಿಗೆ ಒಪ್ಪಿಕೊಳ್ಳದಿದ್ದಲ್ಲಿ, ಮುಂದಿನ 2-3ವಾರಗಳ ಕಾಲ ಇರಾನ್‌ ಮೇಲಿನ ಆಕ್ರಮಣದ ತೀವ್ರತೆ ಹೆಚ್ಚಾಗಲಿದ್ದು, ಇರಾನ್‌ನ ಪ್ರಮುಖ ಮೂಲಸೌಕರ್ಯಗಳು, ವಿದ್ಯುತ್ ಉತ್ಪಾದನಾ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ಮಾಡಲಿದ್ದು, ಅವರನ್ನು ಮತ್ತೆ ಶಿಲಾಯುಗಕ್ಕೆ ಹೋಗುವಂತೆ ಧ್ವಂಸ ಮಾಡುತ್ತೇವೆ” ಎಂದು ಎಚ್ಚರಿಸಿದ್ದಾರೆ.

ಹೊರ್ಮುಜ್‌ ಜಲಸಂಧಿ ಹಾಗೂ ತೈಲದ ಕುರಿತು ಟ್ರಂಪ್‌ ಸಂದೇಶ

ಇನ್ನು, ಹೊರ್ಮುಜ್‌ ಜಲಸಂಧಿ ಹಾಗೂ ಇರಾನ್‌ ತೈಲದ ಕುರಿತು ತಮ್ಮ ನಿಲುವನ್ನು ತಿಳಿಸಿದ ಟ್ರಂಪ್‌ ” ಅಮೆರಿಕಾದ ಬಳಿ ಸಾಕಷ್ಟು ಕಚ್ಚಾತೈಲವಿದ್ದು, ಸೌದಿ ಅರೇಬಿಯಾ ಹಾಗೂ ರಷ್ಯಾ ಒಟ್ಟಿಗೆ ಉತ್ಪಾದಿಸುವ ತೈಲಕ್ಕಿಂತ ಹೆಚ್ಚಿನ ತೈಲ ಮತ್ತು ಅನಿಲವನ್ನು ನಾವು ಉತ್ಪಾದಿಸುತ್ತೇವೆ, ಯಾರಿಂದಲೂ ಸಹ ತೈಲವನ್ನು ಖರೀದಿಸುವಂತಹ ಪರಿಸ್ಥಿತಿಯಿಲ್ಲ. ಹಾಗಾಗಿ ನಮಗೆ ಪಶ್ಚಿಮ ಏಷ್ಯಾದಿಂದ ಬರುವ ತೈಲದ ಅಗತ್ಯವಿಲ್ಲ” ಎಂದಿದ್ದಾರೆ.

ಅಲ್ಲದೆ, ಹೊರ್ಮುಜ್‌ ಜಲಸಂಧಿಯ ಮೂಲಕ ತೈಲ ಸಾಗಣೆಯನ್ನು ಅವಲಂಬಿಸಿರುವ ದೇಶಗಳು ಈ ಜಲಮಾರ್ಗವನ್ನು ಸುರಕ್ಷಿತಗೊಳಿಸುವಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಪುನರುಚ್ಚರಿಸಿದ ಟ್ರಂಪ್‌ ಅಮೆರಿಕಾದ ಬಳಿ ಸಾಕಷ್ಟು ತೈಲವಿದ್ದು, ಬೇಕಿದ್ದರೆ ಖರೀದಿಸಬಹುದು ಎಂಬ ಸಲಹೆ ನೀಡಿದ್ದಾರೆ. “ಹೊರ್ಮುಜ್‌ ಬಳಸುವ ದೇಶಗಳು USನಿಂದ ತೈಲ ಖರೀದಿಗೆ ಮುಂದಾಗಿ, ಇಲ್ಲವೇ ಅದನ್ನು ಸುರಕ್ಷಿತವಾಗಿಸುವ ಕ್ರಮ ವಹಿಸಿ. ವಿಳಂಬಿತ ಧೈರ್ಯವನ್ನು ಬೆಳೆಸಿಕೊಳ್ಳಿ, ಜಲಸಂಧಿಗೆ ಹೋಗಿ ಅದನ್ನು ತೆಗೆದುಕೊಳ್ಳಿ. ಅಲ್ಲಿನ ಕಠಿಣ ಭಾಗ ಮುಕ್ತಾಯವಾಗಿದ್ದು, ಸಂಘರ್ಷ ಮುಗಿದ ನಂತರ ಜಲಸಂಧಿ ಸ್ವಾಭಾವಿಕವಾಗಿ ಮತ್ತೆ ತೆರೆಯುತ್ತದೆ” ಎಂದು ಸಂದೇಶ ನೀಡಿದ್ದಾರೆ.

ಇರಾನ್‌ ಯುದ್ಧದ ಅವಧಿ ಹಾಗೂ ಪರಿಣಾಮದ ಬಗ್ಗೆ ಟ್ರಂಪ್‌ ಸಮರ್ಥನೆ

ಇರಾನ್‌ ಯುದ್ಧದ ಅವಧಿ ಹಾಗೂ ಅದರಿಂದಾಗಿ ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳ ಸೇರಿದಂತೆ ವಿವಿಧ ಅಂಶಗಳ ಕುರಿತು ಟ್ರಂಪ್‌ ಮಾತನಾಡಿದ್ದು, ಈ ಕುರಿತು ಅಮೆರಿಕನ್ನರಲ್ಲಿ ಆತಂಕ ಹೆಚ್ಚಾಗಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದು, ಆದಾಗ್ಯೂ, ಪ್ರಸ್ತುತ ಬೆಲೆ ಏರಿಳಿತಗಳು ತಾತ್ಕಾಲಿಕವಾಗಿರುತ್ತವೆ ಎಂಬ ಭರವಸೆ ನೀಡಿದ್ದಾರೆ.

ಅಲ್ಲದೆ, ಇರಾನ್‌ ಯುದ್ದದ ಅವಧಿಯ ಕುರಿತು ಇರುವ ಚರ್ಚೆಗಳ ಕುರಿತು ಪ್ರತಿಕ್ರಿಯೆ ನೀಡಿ ವಿಶ್ವದಲ್ಲಿ ನಡೆದ ಹಲವು ಪ್ರಮುಖ ಯುದ್ಧಗಳ ಕಾಲಮಿತಿಯನ್ನು ಉಲ್ಲೇಖಿಸಿ ಇವುಗಳಿಗೆ ಹೋಲಿಸಿದರೆ, ಇರಾನ್‌ ಯುದ್ಧ ಕೇವಲ ಒಂದು ತಿಂಗಳ ಕಾಲಗಳಿಂತ ಹೆಚ್ಚುಕಾಲ ನಡೆದಿದೆ. ಆದರೆ, ನಮ್ಮ ಮಿಲಿಟರಿಯ ವೇಗದ ಕಾರ್ಯಾಚರಣೆಯ ಪರಿಣಾಮಕಾರಿತ್ವವನ್ನು ಅದ್ಬುತವಾಗಿ ಪ್ರದರ್ಶನವಾಗುತ್ತಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿನ ಮಿತ್ರರಾಷ್ಟ್ರಗಳಿಗೆ ಟ್ರಂಪ್‌ ಧನ್ಯವಾದ

ಇನ್ನು, ಇರಾನ್‌ ಯುದ್ಧಲ್ಲಿ ಅಮೆರಿಕಾಗೆ ಸಹಾಯ ಮಾಡಿದ ಮಧ್ಯಪ್ರಾಚ್ಯದಲ್ಲಿನ ದೇಶಗಳಾದ ಇಸ್ರೇಲ್, ಸೌದಿ ಅರೇಬಿಯಾ, ಕತಾರ್, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಹಲವಾರು ಪ್ರಾದೇಶಿಕ ಮಿತ್ರರಾಷ್ಟ್ರಗಳಿಗೆ ಧನ್ಯವಾದ ಅರ್ಪಿಸಿದ ಟ್ರಂಪ್ ” ನಾವು ಅವರಿಗೆ ಯಾವುದೇ ರೀತಿಯಲ್ಲಿ ನೋವುಂಟುಮಾಡಲು ಅಥವಾ ವಿಫಲರಾಗಲು ಬಿಡುವುದಿಲ್ಲ” ಎಂದು ವಾಷಿಂಗ್ಟನ್‌ನ ಮಿಲಿಟರಿ ಒಳಗೊಳ್ಳುವಿಕೆ ಮಧ್ಯಪ್ರಾಚ್ಯದಲ್ಲಿ ಪಾಲುದಾರ ರಾಷ್ಟ್ರಗಳಿಗೆ ಸ್ಥಿರತೆ ಮತ್ತು ಭದ್ರತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ ಎಂದು ಭರವಸೆ ನೀಡಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.