ದುಬೈ : ಇರಾನ್ ಡ್ರೋನ್ ದಾಳಿ ನಡೆಸಿದೆ – ಯುಎಇ ಆರೋಪ  –  ಹೊರ್ಮುಜ್‌ಗೆ ಇರಾನ್ ಪ್ರತ್ಯೇಕ ಸಚಿವಾಲಯ

Advertisement

ದುಬೈ, ಮೇ. 09 : ಇರಾನ್-ಅಮೆರಿಕ ನಡುವಿನ ಸಂಘರ್ಷಕ್ಕೆ ಕದನ ವಿರಾಮ ಜಾರಿಯಲ್ಲಿದ್ದು, ಒಪ್ಪಂದ ಮಾತುಕತೆ ನಡುವೆಯೇ ಮತ್ತೆ ಉಭಯ ರಾಷ್ಟ್ರಗಳಿಂದ ಕ್ಷಿಪಣಿ ಮತ್ತು ಡೋನ್ ದಾಳಿ, ಪ್ರತಿದಾಳಿ ನಡೆದಿವೆ ಎಂದು ಯುಎಇ ಹೇಳಿದೆ.

ಗುರುವಾರ ರಾತ್ರಿ ಹೊರ್ಮುಜ್ ಜಲಸಂಧಿಯಲ್ಲಿ ತನ್ನ ಮೂರು ನೌಕಾಪಡೆ ಹಡಗುಗಳ ಮೇಲಿನ ದಾಳಿಯನ್ನು ತಡೆಹಿಡಿದಿರುವುದಾಗಿ ಮತ್ತು ಇರಾನ್ ಸೇನಾ ನೆಲೆಗಳ ಮೇಲೆ ಪ್ರತಿದಾಳಿ ನಡೆಸಿರುವುದಾಗಿ ಅಮೆರಿಕ ತಿಳಿಸಿತ್ತು. ಇದರ ಬೆನ್ನಲ್ಲೇ ಯುಎಇ ಕೂಡ ಸ್ಪಷ್ಟ ಪಡಿಸಿದೆ. ಆದರೂ ಯುಎಇಯಲ್ಲಿ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಈ ನಡುವೆ ವೈಮಾನಿಕ ದಾಳಿ ಹಾಗೂ ಪ್ರತಿದಾಳಿಗಳಿಂದ ಬಿದ್ದಿರುವ ಯಾವುದೇ ಅವಶೇಷಗಳು ಅಥವಾ ತುಣುಕುಗಳ ಬಳಿ ಹೋಗುವುದು, ಅವುಗಳನ್ನು ಮುಟ್ಟುವುದು ಹಾಗೂ ಫೋಟೊ ತೆಗೆಯುವುದನ್ನು ಮಾಡಬಾರದು ಎಂದು ಸ್ಥಳೀಯ ನಿವಾಸಿಗಳಿಗೆ ಯುಎಇ ರಕ್ಷಣಾ ಸಚಿವಾಲಯ ಸೂಚಿಸಿದೆ.

ಹೊರ್ಮುಜ್‌ಗೆ ಇರಾನ್ ಪ್ರತ್ಯೇಕ ಸಚಿವಾಲಯ

ಹೊರ್ಮುಜ್ ಜಲಸಂಧಿಯನ್ನು ನಿಯಂತ್ರಿಸಲು ಹಾಗೂ ಈ ಮಾರ್ಗದ ಮೂಲಕ ಹಾದುಹೋಗುವ ಹಡಗುಗಳನ್ನು ಪರಿಶೀಲಿಸಿ ಅವುಗಳ ಮೇಲೆ ತೆರಿಗೆ ವಿಧಿಸಲು ಇರಾನ್ “ಪರ್ಷಿಯನ್ ಗಲ್ಫ್ ಸ್ಟೈಟ್ ಅಥಾರಿಟಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದೆ.

Advertisement
Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ