ದೇಶದಾದ್ಯಂತ 3 ಕೋಟಿ ಬಾಚಿಕೊಂಡ ಜೈ ಸಿನಿಮಾ – ಎಲ್ಲೆಡೆ ಜೈ ಬಿರುಗಾಳಿ

Advertisement

Advertisement

ನ.14ರಂದು ದೇಶದಾದ್ಯಂತ ಬಿಡುಗಡೆಯಾದ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ ಜೈ ಸಿನಿಮಾ ಎಲ್ಲರ ಮನದಲ್ಲೂ ನಗುವನ್ನು ಮೂಡಿಸಿ ಒಳ್ಳೆಯ ಸಂದೇಶವನ್ನು ನೀಡಿ ದೇಶದಾದ್ಯಂತ ಧೂಳೆಬ್ಬಿಸಿದೆ.

Advertisement

ಪ್ರೀಮಿಯರ್ ಶೋ ಮೂಲಕವೇ ಎಲ್ಲರ ನಿರೀಕ್ಷೆಯನ್ನು ಹೆಚ್ಚಿಸಿದ ಈ ಸಿನಿಮಾ‌ ಇದೀಗ ಬಿಡುಗಡೆಯಾಗಿ ಜೈ‘ಗೆ ಎಲ್ಲರೂ ಸೈ ಎಂದಿದ್ದಾರೆ. ಇಂಡಿಯನ್ ಸೂಪರ್ ಸ್ಟಾರ್ ಸುನಿಲ್ ಶೆಟ್ಟಿಯನ್ನು ಈ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು. ಎಲ್ಲರ ಗಮನವನ್ನು ಸೆಳೆದಿದೆ. ಅಮ್ಮ ಮಗನ ಪ್ರೀತಿ , ರಾಜಕೀಯ, ಊರು, ಜೀವನ ಎಲ್ಲವನ್ನು ತುಂಬಾ ಅಚ್ಚುಕಟ್ಟಾಗಿ ತೋರಿಸಿ ಜೈ ಸಿನಿಮಾ ಈಗ ಎಲ್ಲರನ್ನು ತನ್ನ ಹತ್ತಿರಕ್ಕೆ ಸೆಳೆಯುತ್ತಿದೆ. ರಾತ್ರಿ 10ಗಂಟೆಯ ಶೋ ಗೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಇದು ಸಿನಿ ಪ್ರೇಕ್ಷಕರು ಜೈ‌ ಸಿನಿಮಾಗೆ ತೋರಿಸಿದ ಪ್ರೀತಿಯಾಗಿದೆ.

ಇದೀಗ ಜೈ ಸಿನಿಮಾ ತಂಡ ಇವತ್ತಿನವರೆಗೆ ಆದ ಒಟ್ಟು ಕಲೆಕ್ಷನ್ ಮೊತ್ತವನ್ನು ಪ್ರಕಟಿಸಿದೆ. ದೇಶದಾದ್ಯಂತ ಜೈ ಸಿನಿಮಾ‌ ತುಳು ಚಿತ್ರರಂಗದ ಇತಿಹಾಸದಲ್ಲೇ ದೊಡ್ಡಮಟ್ಟದ ಓಪನಿಂಗ್ ಪಡೆದುಕೊಂಡಿದ್ದು 3.2ಕೋಟಿಯನ್ನು ಬಾಚಿಕೊಂಡಿದೆ.

ಜೈ ಸಿನಿಮಾ ಎಲ್ಲೆಡೆ ತನ್ನ ಬಿರುಗಾಳಿಯನ್ನು ಎಬ್ಬಿಸಿ ಮುನ್ನುಗ್ಗುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ