ಜನಸಮೃದ್ಧಿ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿ. ಸಂಸ್ಥೆ ಆರ್ ಡಿ ಹೆಸರಿನಲ್ಲಿ ಹಣ ಸಂಗ್ರಹಿಸಿ ಗ್ರಾಹಕರಿಗೆ ಪಂಗನಾಮ ?

ಬೆಳ್ತಂಗಡಿ, ಜ. 13 : ಪೇಟೆಯ ಮೂರು ಮಾರ್ಗದ ಬಳಿಯಲ್ಲಿ ಕಾರ್ಯಾಚರಿಸುತ್ತಿರುವ ಜನಸಮೃದ್ಧಿ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಎಂಬ ಸೊಸೈಟಿಯು ಗ್ರಾಹಕರಿಗೆ ವಂಚಿಸಿರುವ ಆರೋಪ ಕೇಳಿ ಬಂದಿದೆ. ಆರ್ ಡಿ ಹಾಗೂ ಇನ್ನಿತರ ಹೆಸರಿನಲ್ಲಿ ಸೊಸೈಟಿಯು ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದೆ. ಆದರೆ, ಇದೀಗ ಹಣ ಮರು ಪಾವತಿ ಮಾಡದೆ ವಂಚಿಸುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಜನಸಮೃದ್ಧಿ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಬೆಳ್ತಂಗಡಿಯಲ್ಲಿ ಶಾಖೆಯನ್ನು ಹೊಂದಿದೆ. 2022ರಲ್ಲಿ ಆರ್ ಡಿ ಹಣ ಕಟ್ಟಲು ಆರಂಭ ಮಾಡಿದ್ದೇನೆ, ಅದು 2025ರ ಆಗಸ್ಟ್ 29ಕ್ಕೆ ಮುಗಿದಿದೆ. ಆಗಸ್ಟ್ ತಿಂಗಳಲ್ಲೇ ಹಣವನ್ನು ಹಿಂತಿರುಗಿಸಬೇಕಿತ್ತು ಆದರೆ, ಈವರೆಗೆ ಹಣ ಹಿಂತಿರುಗಿಸದೆ ಮೋಸ ಮಾಡುತ್ತಿದ್ದಾರೆ ಎಂದು ಹಣ ಕಳೆದುಕೊಂಡಿರುವ ಗ್ರಾಹಕ ಬಂದಾರು ನಿವಾಸಿ ನವೀನ್ ಆರೋಪಿಸಿದ್ದಾರೆ. ಕೆಲವು ತಿಂಗಳ ಹಿಂದೆ ವಕೀಲರ ಜೊತೆಗೆ ಬೆಂಗಳೂರಿನಲ್ಲಿರುವ ಮುಖ್ಯ ಕಚೇರಿಗೆ ನಾವು ತೆರಳಿ ಮಾತನಾಡಿದ್ದೆವು ಎರಡು ದಿನದೊಳಗಡೆ ಹಣ ಪಾವತಿಸುತ್ತೇವೆ ಎಂದಿದ್ದರು. ಆದರೆ, ಇಲ್ಲಿಯವರೆಗೆ ಹಣ ಪಾವತಿಸಿಲ್ಲ. ಆ ಬಳಿಕ ಕರೆ ಮಾಡಿದರೂ ಕೂಡಾ ಪ್ರತಿಕ್ರಿಯೆ ಕೊಡುತ್ತಿಲ್ಲ. ಅಲ್ಲದೆ, ಕಚೇರಿಗೆ ಬಂದು ಕೇಳಿದರೂ ಕೂಡಾ ಯಾವುದೇ ಪ್ರತಿಕ್ರಿಯೆ ಇಲ್ಲ. ಪ್ರತೀ ತಿಂಗಳು 5,000 ಸಾವಿರ ರೂಪಾಯಿಯಂತೆ 36 ತಿಂಗಳು ಹಣ ಪಾವತಿಸಿದ್ದೇವೆ. ಮೆಚ್ಯುರಿಟಿ ಸೇರಿ ನಮಗೆ ಸುಮಾರು 2 ಲಕ್ಷದ 87 ಸಾವಿರದ 22 ರೂಪಾಯಿ ಬರಬೇಕಿತ್ತು. ಆದರೆ ಹಣ ಪಾವತಿಸದೆ ಮೋಸ ಮಾಡುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲೇ ಕೋಟ್ಯಾಂತರ ಹಣ ವಂಚಿಸಿರುವ ಬಗ್ಗೆ ಮಾಹಿತಿ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮತ್ತೋರ್ವ ಗ್ರಾಹಕರಿಗೂ ಇದೇ ರೀತಿಯ ಅನುಭವವಾಗಿದ್ದು ಆಗಸ್ಟ್ ತಿಂಗಳಿನಲ್ಲೇ ಬರಬೇಕಾಗಿದ್ದ ಹಣ ಇನ್ನೂ ಬಂದಿಲ್ಲ. ಹಲವು ಬಾರಿ ನಮಗೆ ಹಣ ಹಾಕುತ್ತೇವೆ ಎನ್ನುವ ಭರವಸೆ ಕೊಟ್ಟಿದ್ದಾರೆ. ಆದರೆ, ಈವರೆಗೆ ಹಣ ಬಂದಿಲ್ಲ. ನನಗೆ ಸುಮಾರು 2 ಲಕ್ಷಕ್ಕಿಂತಲೂ ಹೆಚ್ಚು ಹಣ ಬರಬೇಕಿದೆ. ಆದರೆ, ಹಣ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕಚೇರಿಗೆ ಬೀಗ ಹಾಕಲಾಗಿತ್ತು !

ಈ ಹಿಂದೆ ಹಣ ಹಿಂತಿರುಗಿಸದೇ ಇದ್ದ ಕಾರಣಕ್ಕಾಗಿ ಗ್ರಾಹಕರೇ ಸ್ವತ: ಕಚೇರಿಗೆ ಬೀಗ ಜಡಿದಿದ್ದರು. ಕೆಲವು ದಿನಗಳವರೆಗೆ ಕಚೇರಿ ಕಾರ್ಯಾಚರಿಸುತ್ತಿರಲಿಲ್ಲ. ಆದರೆ, ಮತ್ತೆ ಕಾರ್ಯಾಚರಣೆಗೊಂಡಿದ್ದು, ಈಗಲೂ ಕೂಡಾ ಗ್ರಾಹಕರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಆದರೆ, ಕಟ್ಟಿದ ಹಣವನ್ನು ಗ್ರಾಹಕರಿಗೆ ನೀಡುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.