ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಜೇಸಿ ಉತ್ಸವದಂಗವಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು, ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ : ಜೆಸಿ ಆಶಾಲತಾ ಪ್ರಶಾಂತ್

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀ ಪ್ರಾಂತ್ಯ ಡಿ ವಲಯ ೧೫, ಜೆಸಿಐ ಭಾರತ ವತಿಯಿಂದ ಜೇಸಿ ಉತ್ಸವವು ಡಿಸೆಂಬರ್ 07 ಭಾನುವಾರದಂದು ಸಂತೆಕಟ್ಟೆ ಸಮಾಜ ಮಂದಿರ, ಬಯಲು ರಂಗಮಂದಿರದಲ್ಲಿ ವಿಜ್ರಂಭಣೆಯಿಂದ ನಡೆಯಲಿದೆ ಎಂದು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧಕ್ಷರಾದ ಜೆಸಿ ಆಶಾಲತಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.

Advertisement

ಬೆಳ್ತಂಗಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಮಟ್ಟದ ಹೊರಾಂಗಣ ಕ್ರೀಡಾಕೂಟ ಕ್ರೀಡಾ ಆರಾಧನೆಯು ನವೆಂಬರ್ 30 ಭಾನುವಾರದಂದು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ಮತ್ತು ತಾಲೂಕು ಮಟ್ಟದ ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಪಂದ್ಯಾಟವು ಲ್ಯಾಲದ ಕರ್ನೋಡಿ ಶಾಲಾ ವಠಾರದಲ್ಲಿ ನಡೆಯಲಿದೆ ಎಂದರು. ಸಾಂಸ್ಕೃತಿಕ ಆರಾಧನೆಯಂಗವಾಗಿ ಸಂತೆಕಟ್ಟೆಯ ಸಮಾಜಮಂದಿರ, ಬಯಲು ಮಂದಿರದಲ್ಲಿ ಡಿಸೆಂಬರ್ 07ರಂದು ಬೆಳಗ್ಗೆ 09:00ಕ್ಕೆ ಉದ್ಘಾಟನಾ ಸಮಾರಂಭವು ಹಲವು ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಬೆಳಿಗ್ಗೆ 10:00 ಗಂಟೆಯಿಂದ ಯಕ್ಷ ತೆಲಿಕೆ ತಂಡದಿಂದ ಯಕ್ಷ-ಯುವ-ರತ್ನ ಧೀರಜ್ ರೈ ಸಂಪಾಜೆ ಇವರ ಸಾರಥ್ಯದಲ್ಲಿ ಯಕ್ಷ ಹಾಸ್ಯ ವೈಭವ ನಡೆಯಲಿದೆ ಎಂದರು.

Advertisement

ಇನ್ನು, ಸಂಜೆ 04:00 ಗಂಟೆಗೆ ಸಮಾರೋಪ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭವು ಶಾಸಕ ಹರೀಶ್ ಪೂಂಜಾ ಹಾಗೂ ಹಲವು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ. ಅದೇ ದಿನದಂದು ಬೆಳಗ್ಗೆ 09:00 ಗಂಟೆಗೆ ತಾಲೂಕು ಮಟ್ಟದ ಭಾವಗೀತೆ ಸ್ಪರ್ಧೆ, ಮುಕ್ತ ಚೆಸ್ ಸ್ಪರ್ಧೆ, ಮುಕ್ತ ಕೇರಂ ಸ್ಪರ್ಧೆ, ಜಿಲ್ಲಾಮಟ್ಟದ ಜನಪದ ಸಮೂಹ ಗಾಯನ ಸ್ಪರ್ಧೆ, ಸಂಜೆ 05:00 ಗಂಟೆಗೆ ರಾಜ್ಯಮಟ್ಟದ ಫಿಲಂ ಡ್ಯಾನ್ಸ್ ಸ್ಪರ್ಧೆ, ಜಿಲ್ಲಾ ಮಟ್ಟದ ಜೇಸಿ ಸ್ಟಾರ್ ಸಿಂಗರ್ ಸ್ಪರ್ಧೆ ಹಾಗೂ ರಾತ್ರಿ 09:00 ಗಂಟೆಯಿಂದ ಜೇಸಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ. ಸಮಾರಂಭದಲ್ಲಿ ಸಾಧಕರಿಗೆ ಸಾಧನಾ ಶ್ರೀ ಪ್ರಶಸ್ತಿ ಪುರಸ್ಕಾರ, ಅತ್ಯುತ್ತಮ ಯುವ ಸಾಧಕ ಪ್ರಶಸ್ತಿ ಹಾಗೂ ಯುವ ಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜೆಸಿ ಪ್ರಶಾಂತ್ ಲಾಯಿಲ, ಜೆಸಿ ಪ್ರಶಾಂತ್ ಕೋಟ್ಯಾನ್, ಜೆಸಿ ರಜತ್ ಮೋರ್ತಾಜೆ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದಿಲ್ಲಿ : ರಾಮಮಂದಿರ ನಿರ್ಮಾಣಕ್ಕಾಗಿ ಬಂದ ದೇಣಿಗೆ ಹಣದಲ್ಲಿ ಅವ್ಯವಹಾರ ನಡೆದಿಲ್ಲ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಭಾರತದ ಅಧಿಕೃತ ನಕ್ಷೆಗಳಲ್ಲಿ ಅರುಣಾಚಲ ಪ್ರದೇಶದ 27 ಸ್ಥಳಗಳ ಸೇರ್ಪಡೆ – ಚೀನಾಗೆ ಶಾಕ್ !

ಕರಾವಳಿ, ಟಾಪ್ ಸುದ್ದಿಗಳು

ಉಡುಪಿ : ಕಾಂಗ್ರೆಸ್ ಮುಖಂಡ ಡೇವಿಡ್ ಶೂಟೌಟ್ ಪ್ರಕರಣ – ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು

⚠️ Contents are protected on this website.