ಸುಳ್ಯ : ಕಾಡು ಪ್ರಾಣಿ ಬೇಟೆ ಆರೋಪ – ಇಬ್ಬರ ಬಂಧನ – ಓರ್ವ ಪರಾರಿ

Advertisement

ಸುಳ್ಯ, ಆ. 07 : ಚೆಂಬು ಅರಣ್ಯ ವ್ಯಾಪ್ತಿಯಲ್ಲಿ ಕಾಡು ಪ್ರಾಣಿ ಯನ್ನು ಬೇಟೆಯಾಡಿ ಮಾಂಸ ಮಾಡಿದ ಆರೋಪದ ಮೇಲೆ ಕೊಡಗು ಕೊಯನಾಡು ಅರಣ್ಯ ಅಧಿಕಾರಿಗಳು ಬುಧವಾರ ಇಬ್ಬರನ್ನು ಬಂಧಿಸಿದ್ದಾರೆ.

Advertisement

ಆರೋಪಿಗಳನ್ನು ಚೆಂಬುವಿನ ಗೌತಮ್, ಪೆರಾಜೆಯ ಶರತ್ ಮತ್ತು ಕಾಡುಪಂಜದ ಯತಿನ್ ಎಂದು ಗುರುತಿಸಲಾಗಿದೆ.

Advertisement

ಅರಣ್ಯ ಅಧಿಕಾರಿಗಳ ಪ್ರಕಾರ, ಕೊಡಗು ಅರಣ್ಯ ವ್ಯಾಪ್ತಿಗೆ ಬರುವ ಚೆಂಬು ಕಾಡಿನ ಕಾಡುಪಂಜದಲ್ಲಿ ಆರೋಪಿಗಳು ಬಂದೂಕಿನಿಂದ ಕಾಡುಹಂದಿಯನ್ನು ಬೇಟೆಯಾಡಿ ಕೊಂದಿದ್ದಾರೆ. ನಂತರ ಅವರು ಮಾಂಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ಕೆಎ -12 ನೋಂದಾಯಿತ ಮಾರುತಿ ಇಕೊ ಕಾರಿನಲ್ಲಿ ಕಲ್ಲುಗುಂಡಿ ಬಳಿಯ ಕೈಪಡ್ಕ್‌ಗೆ ಸಾಗಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ವಾಹನವನ್ನು ತಡೆದು ಕಾಡುಹಂದಿ ಮಾಂಸ, ಅಪರಾಧಕ್ಕೆ ಬಳಸಿದ ಬಂದೂಕು ಮತ್ತು ಕಾರನ್ನು ವಶಪಡಿಸಿಕೊಂಡರು.

ಗೌತಮ್ ಮತ್ತು ಶರತ್ ಅವರನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿ ಕಾಡುಪಂಜದ ಯಾತಿನ್ ತಲೆಮರೆಸಿಕೊಂಡಿದ್ದಾನೆ. ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಸೆಂಥಿಲ್ ಕುಮಾರ್ (ಐಎಫ್‌ಎಸ್), ವಲಯ ಅರಣ್ಯ ಅಧಿಕಾರಿ ಡಿನ್ಸಿ ದೇಚಮ್ಮ, ಉಪ ವಲಯ ಅರಣ್ಯ ಅಧಿಕಾರಿ ಶ್ರೀರಕ್ಷಾ, ಸುರೇಶ್, ಸಂದೀಪ್ ಗೌಡ, ವಿಜೇಂದ್ರ ಕುಮಾರ್, ವಿನಯ್ ಕೃಷ್ಣ, ಮತ್ತು ಅರಣ್ಯ ರಕ್ಷಕರಾದ ಯಮನೂರಿ ಕೋಳೂರು, ಕಾರ್ತಿಕ್ ಡಿ, ಸಿದ್ದೇಶ್, ನಾಗರಾಜ್ ಎಸ್, ಸಿದ್ರಾಮ್ ನಾಟಿಕರ್, ಶ್ರೀಕಾಂತ್ ಬಿರಾದಾರ್ ಮತ್ತು ಸಂಪಾಜೆ ವ್ಯಾಪ್ತಿಯ ಇತರ ಸಿಬ್ಬಂದಿಗಳ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ