ರಾಜ್ಯದ 4673 ಗ್ರಾಮಗಳಲ್ಲಿ ಕಲುಷಿತ ನೀರು ! : ಮಂಡ್ಯದಲ್ಲೇ ಅಧಿಕ – 7 ಲಕ್ಷಕ್ಕೂ ಅಧಿಕ ಮಾದರಿಗಳ ಪರೀಕ್ಷೆ

ಬೆಂಗಳೂರು, ಮೇ 24 : ಜನರಿಗೆ ಶುದ್ದ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಸರ್ಕಾರದ ಜವಾಬ್ದಾರಿ. ಆದರೆ ರಾಜ್ಯದ 4673 ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆ ಇದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿದೆ. ನೀರಿನ ಗುಣಮಟ್ಟ ಪರೀಕ್ಷೆ ಮಾಡುವುದರ ಜೊತೆಯಲ್ಲಿ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಕೆ ಮಾಡಿದೆ.

Advertisement

ಗ್ರಾಮೀಣಾಭಿವೃದ್ದಿ ಇಲಾಖೆ ನೀಡುವ ಅಂಕಿ – ಅಂಶಗಳ ಪ್ರಕಾರ ರಾಜ್ಯದ ಒಟ್ಟು 31 ಜಿಲ್ಲೆಗಳ 4673 ಗ್ರಾಮಗಳಲ್ಲಿ ಕುಡಿಯುವ ನೀರಿನ ಮಾದರಿಗಳನ್ನು ಪರೀಕ್ಷೆಗೊಳಪಡಿಸಿದಾಗ ಅವು ಕುಲುಷಿತ ಎಂದು ತಿಳಿದುಬಂದಿದೆ. ಒಟ್ಟು 7 ಲಕ್ಷಕ್ಕೂ ಅಧಿಕ ನೀರಿನ ಮಾದರಿಗಳ ಗುಣಮಟ್ಟ ಪರೀಕ್ಷೆ ಮಾಡಲಾಗಿದೆ.

ಯಾವ ವರ್ಷ ಎಷ್ಟು ಪರೀಕ್ಷೆ?

2023-24 -251763
2024-25 – 272166
2025-26 – 223734

2023-24 ರಲ್ಲಿ 24917 ಮಾದರಿಗಳು ಕಲುಷಿತ ಎಂದು ಸಾಬೀತಾಗಿದೆ. 2024-25 ರಲ್ಲಿ 17261 ಹಾಗೂ 2025-26 ರಲ್ಲಿ 12127 ಮಾದರಿಗಳು ಕುಲುಷಿತ ಎಂದು ಕಂಡು ಬಂದಿದೆ. ಇವುಗಳಲ್ಲಿ ಕೆಲವು ಜನವಸತಿ ಪ್ರದೇಶಗಳಲ್ಲಿ ಕಬ್ಬಿನ, ನೈಟ್ರೇಟ್ ಮತ್ತು ಲವಣಾಂಶಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿರುವುದು ಕಂಡು ಬಂದಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು?

ಮಂಡ್ಯ- 423
ಕೊಪ್ಪಳ- 387
ತುಮಕೂರು- 387
ವಿಜಯಪುರ- 375
ಚಿತ್ರದುರ್ಗ- 324
ಬೆಳಗಾವಿ- 274
ಚಿಕ್ಕಬಳ್ಳಾಪುರ- 271
ರಾಯಚೂರು- 255
ಕೋಲಾರ- 206
ಹಾವೇರಿ- 188
ರಾಮನಗರ- 186
ಬೀದರ್- 178
ಕಲಬುರ್ಗಿ- 171
ಚಿಕ್ಕಮಗಳೂರು- 162
ಮೈಸೂರು- 141
ದಕ್ಷಿಣ ಕನ್ನಡ – 102
ಬಳ್ಳಾರಿ- 96
ಯಾದಗಿರಿ- 95
ಬಾಗಲಕೋಟೆ- 92
ಗದಗ- 72
ದಾವಣಗೆರೆ- 59
ಧಾರವಾಡ- 59
ಚಾಮರಾಜನಗರ- 55
ಉತ್ತರ ಕನ್ನಡ- 44
ವಿಜಯನಗರ- 18
ಕೊಡಗು- 13
ಬೆಂಗಳೂರು ಗ್ರಾಮಾಂತರ- 12
ಹಾಸನ- 10
ಉಡುಪಿ- 8
ಬೆಂಗಳೂರು ನಗರ- 7
ಶಿವಮೊಗ್ಗ- 3


ಶುದ್ದ ಕುಡಿಯುವ ನೀರಿನ ಘಟಕ

ಕಲುಷಿತ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಕೆ ಮಾಡಲಾಗಿದೆ. ಮಂಡ್ಯದಲ್ಲಿ 281 ಘಟಕಗಳನ್ನು ಅಳವಡಿಕೆ ಮಾಡಲಾಗಿದೆ. ಕೊಪ್ಪಳದಲ್ಲಿ 326, ತುಮಕೂರಿನಲ್ಲಿ 300, ವಿಜಯಪುರದಲ್ಲಿ 284, ಚಿತ್ರದುರ್ಗದಲ್ಲಿ 258, ಬೆಳಗಾವಿ 258, ರಾಯಚೂರು 224, ರಾಮನಗರ 103, ಹಾವೇರಿ 185 ಘಟಕಗಳನ್ನು ಅಳವಡಿಕೆ ಮಾಡಲಾಗಿದೆ.

ಏನೇನು ಕ್ರಮಗಳು?

ಕುಡಿಯುವ ನೀರು ಕಲುಷಿತ ವೆಂದು ಕಂಡು ಬಂದಿರುವ ಪ್ರದೇಶಗಳಿಗೆ ಪ್ರಥಮ ಆದ್ಯತೆಯಾಗಿ ಆ ಗ್ರಾಮದಲ್ಲಿ ಅಥವಾ ಸುತ್ತಮುತ್ತಲು ಇರುವ ಪ್ರದೇಶಗಳಿಂದ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಲ್ಲದೆ ರಾಜ್ಯಾದ್ಯಂತ 18,000 ಕ್ಕೂ ಹೆಚ್ಚಿನ ! ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿರುತ್ತದೆ. ಶಾಶ್ವತವಾಗಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಮುನ್ನ ಮೇಲೆ ನೀರು (Surface water) ಲಭ್ಯವಿರುವ ಕಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

ಟಾಪ್ ಸುದ್ದಿಗಳು, ರಾಜ್ಯ / ದೇಶ

ಕರ್ನಾಟಕದ 24ನೇ ಸಿಎಂ ಆಗಿ ಡಿಕೆಶಿ ಪ್ರಮಾಣ ವಚನ –  ನೊಣವಿನ ಕೆರೆ ಅಜ್ಜಯ್ಯನ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಕೊರಂಜ ಮತ್ತು ಮಚ್ಚಿನ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ – ಶಾಸಕ ಹರೀಶ್ ಪೂಂಜಾ

⚠️ Contents are protected on this website.