ಮೈಸೂರು : ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸಾವು !

ಮೈಸೂರು, ಏ. 20 : ಕೆ.ಆರ್‌.ನಗರ ತಾಲೂಕಿನ ಎಡತೊರೆ ಅರ್ಕೇಶ್ವರ ಸ್ವಾಮಿ ದೇಗುಲ ಸಮೀಪದ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಭಾನುವಾರ ಸಂಜೆ ಮುಳುಗಿ ಮೃತಪಟ್ಟಿದ್ದು, ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಊಟಿಯ ಸೈಯ್ಯದ್‌ ಇಸ್ಮಾಯಿಲ್‌ ಎಂಬುವವರ ಪತ್ನಿ ಸೈಯ್ಯದ್‌ ಫಾತೀಮಾ (35), ಬೆಂಗಳೂರಿನ ಬಾಬು ಅವರ ಪುತ್ರ ಯಾಸೀನ್‌ (23), ಯಾಸೀನ್‌ ಪತ್ನಿ ನೇಹಾ (20), ಆರೀಫ್‌ ಅವರ ಪುತ್ರ ಅಯಮಾನ್‌ (13), ಮೈಸೂರಿನ ಉದಯಗಿರಿಯ ಸಾದಿಕ್‌ ಅವರ ಪುತ್ರ ಉಮೇರ್‌ (7), ಪಟ್ಟಣದ ಮುಸ್ಲಿಂ ಬ್ಲಾಕ್‌ನ ರಿಯಾಜ್‌ಪಾಷ ಅವರ ಪುತ್ರ ಆಫಿಪಾ (20) ಮೃತರು.

ಘಟನೆಯಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಬನ್ನೂರಿನ ಜುಬೇದಾ (40), ಬೆಂಗಳೂರಿನ ಸಲ್ಮಾ (45) ಪ್ರಾಣಾಪಾಯದಿಂದ ಪಾರಾಗಿದ್ದು ಇವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೃಷ್ಣರಾಜನಗರ ಸಮೀಪದ ಹಜರತ್‌ ಖಾದರ್‌ ಲಿಂಗವಲ್ಲಿ ಉರುಸ್‌ ವೀಕ್ಷಿಸಲು ಆಗಮಿಸಿದ್ದ 12 ಸಂಬಂಧಿಕರು ಸಂಜೆ 4ರ ವೇಳೆಗೆ ದೇವಸ್ಥಾನದ ಬಳಿಯ ನದಿಯಲ್ಲಿ ಈಜಲು ತೆರಳಿದ್ದಾರೆ. ರೈಲ್ವೆ ಸೇತುವೆಯ ಕೆಳಗೆ ಹೆಚ್ಚು ಆಳವಿರುವ ಜಾಗದಲ್ಲಿ ಈಜಲು ಹೋದಾಗ ಈಜು ಬಾರದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಇವರು ಮುಳುಗುತ್ತಿರುವುದನ್ನು ಕಂಡು ಎಲ್ಲರೂ ಕೂಗಿಕೊಂಡಾಗ ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿದ್ದಾರೆ. ಬಳಿಕ ಮುಳುಗುತ್ತಿದ್ದವರನ್ನು ಇತರೆ ಐವರನ್ನು ಮೇಲೆತ್ತಿ ಪಟ್ಟಣದ ಆಸ್ಪತ್ರೆಗೆ, ಮಗುವನ್ನು ಮಕ್ಕಳ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಗೆ ತರುವಷ್ಟರಲ್ಲಾಗಲೇ ಎಲ್ಲರೂ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದರು.

ಮೃತದೇಹಗಳನ್ನು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು. ಘಟನೆ ನಡೆದ ಸ್ಥಳ ಮತ್ತು ಶವಾಗಾರಕ್ಕೆ ಶಾಸಕ ಡಿ.ರವಿಶಂಕರ್‌, ಮಾಜಿ ಶಾಸಕ ಸಾ.ರಾ.ಮಹೇಶ್‌ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್ಪಿಗಳಾದ ನಾಗೇಶ್‌, ಮಲ್ಲಿಕ್‌, ಡಿವೈಎಸ್‌ಪಿ ರಾಜಣ್ಣ, ಸರ್ಕಲ್‌ಇನ್ಸ್‌ಪೆಕ್ಟರ್‌ ಶಿವಪ್ರಕಾಶ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾವಿನ ವಿಷಯ ತಿಳಿದು ಸ್ಥಳೀಯರು ಆಸ್ಪತ್ರೆ ಮುಂಭಾಗ ಜಮಾಯಿಸಿದ್ದರು. ಕೆ.ಆರ್‌.ನಗರ ಪೊಲೀಸ್‌ ಠಾಣೆ ಸಿಬ್ಬಂದಿ ಜನರನ್ನು ನಿಯಂತ್ರಿಸಿದರು. ಕೆ.ಆರ್‌. ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.