ಮಂಗಳೂರು : “KEEP DISTANCE – EMI PENDING” – ವೈರಲ್ ಆಗುತ್ತಿದೆ ಕಾರಿನ ಹಿಂದೆ ಕಂಡು ಬಂದ ಬರಹ !

ಮಂಗಳೂರು, ಡಿ. 23 : ಹಲವಾರು ಆಟೋ, ಕ್ಯಾಬ್, ಬಸ್, ಬೈಕ್ ಹಾಗೂ ಹಲವು ವಾಹನಗಳಲ್ಲಿ ವಿಭಿನ್ನವಾದ ಬರಹಗಳನ್ನು ನಾವು ಕಾಣುತ್ತೇವೆ. ಸಾಹಿತ್ಯಾಭಿಮಾನ ಮೆರೆಯುವವರೂ ಇದ್ದಾರೆ ಜೊತೆಗೆ ಹಾಸ್ಯಾತ್ಮಕವಾಗಿ ಬರಹಗಳನ್ನು ಬರೆಸಿಕೊಳ್ಳುವವರೂ ಇದ್ದಾರೆ. ಆದರೆ, ಮಂಗಳೂರಿನಲ್ಲಿ ಕಂಡು ಬಂದ ಕಾರಿನ ಸ್ಟಿಕ್ಕರೊಂದು ಭಾರಿ ವೈರಲ್ ಆಗುತ್ತಿದೆ ಅಲ್ಲದೆ ಕಾರು ಚಾಲಕ ತನ್ನ ಆರ್ಥಿಕ ಸ್ಥಿತಿ ಬಗ್ಗೆ ವಿಚಿತ್ರವಾಗಿ ಬರೆದುಕೊಂಡು ಸ್ಟಿಕರ್‌ ಅಂಟಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ತಮಾಷೆಗೆ ಕಾರಣವಾಗಿದೆ.

Advertisement

ಸಾಮಾನ್ಯವಾಗಿ ಕಾರು ಅಥವಾ ವಾಹನಗಳ ಹಿಂಭಾಗದಲ್ಲಿ ಡಿಸ್ಟೇನ್ಸ್‌ ಮೇಂಟೇನ್‌ ಮಾಡಿ ಅನ್ನೋದನ್ನ ನೋಡೆ ಇರುತ್ತೇವೆ . “KEEP DISTANCE – EMI PENDING” (ದಯವಿಟ್ಟು ದೂರವಿರಿ – ಇ ಎಂ ಐ ಬಾಕಿ ಇದೆ) ಎನ್ನುವ ಬರಹ ಇದೀಗ ಬಹಳಷ್ಟು ವೈರಲ್ ಆಗುತ್ತಿದೆ. ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯ ಟ್ರಾಫಿಕ್‌ನಲ್ಲಿ ಚಲಿಸುತ್ತಿರುವ ಮಾರುತಿ ಸುಜುಕಿ ಆಲ್ಟೋ ಕಾರನ್ನು ಕಾಣಬಹುದು. ಈ ಕಾರಿನ ಹಿಂಭಾಗದಲ್ಲಿರುವ ಸ್ಟಿಕ್ಕರ್‌ನಲ್ಲಿ ʻಅಂತರ ಕಾಯ್ದುಕೊಂಡು ಡ್ರೈವ್‌ ಮಾಡಿ, ಇಎಂಐ ಬಾಕಿ ಇದೆ ಎಂಬ ಅರ್ಥದಲ್ಲಿ ಸ್ಟಿಕರ್‌ ಬರೆಸಿ, ಅಂಟಿಸಲಾಗಿದೆ. ಪ್ರತಿ ತಿಂಗಳು ಕಟ್ಟಬೇಕಾದ ಸಾಲದ ಕಂತಿನ ಹೊರೆ ಮತ್ತು ವಾಹನವನ್ನು ಅಪಘಾತದಿಂದ ರಕ್ಷಿಸಿಕೊಳ್ಳುವ ಕಾಳಜಿಯನ್ನು ಈ ವಾಕ್ಯವು ತೋರ್ಪಡಿಸುತ್ತದೆ. ಜೊತೆಗೆ ಚಾಲಕನ ಚಾಣಾಕ್ಷತನವನ್ನು ಕಂಡು ನೆಟ್ಟಿಗರು ತಮಾಷೆ ಮಾಡಿದ್ದಾರೆ.

ಇದೇ ರೀತಿಯ ವಿಶಿಷ್ಟ ಸ್ಟಿಕ್ಕರ್ ಘಟನೆಯೊಂದು ಈ ಹಿಂದೆ ತಮಿಳುನಾಡಿನಲ್ಲಿಯೂ ನಡೆದಿತ್ತು. ಅಲ್ಲಿನ ಬಿಳಿ ಬಣ್ಣದ ಮಾರುತಿ ಸುಜುಕಿ ಇಗ್ನಿಸ್ ಕಾರೊಂದರ ಮೇಲೆ ನನ್ನ ಇನ್ನೊಂದು ಕಾರು ಬಿಎಂಡಬ್ಲ್ಯೂ ಎಂಬ ಸ್ಟಿಕ್ಕರ್ ಇತ್ತು. ಮೊದಮೊದಲು ಇದನ್ನು ಎಲ್ಲರೂ ತಮಾಷೆ ಎಂದುಕೊಂಡಿದ್ದರು. ಆದರೆ ವಿಡಿಯೋ ಕೊನೆಯಲ್ಲಿ ಕ್ಯಾಮೆರಾವನ್ನು ಪಕ್ಕಕ್ಕೆ ತಿರುಗಿಸಿದಾಗ, ಅಲ್ಲಿ ನಿಜವಾಗಿಯೂ ಒಂದು ದುಬಾರಿ ಬಿಎಂಡಬ್ಲ್ಯೂ ಕಾರು ಪಾರ್ಕ್ ಆಗಿರುವುದು ಕಂಡುಬಂದು ನೆಟ್ಟಿಗರನ್ನು ಅಚ್ಚರಿಗೊಳಿಸಿತ್ತು. ಪ್ರಸ್ತುತ ಮಂಗಳೂರಿನ ಈ ಆಲ್ಟೋ ಕಾರಿನ ಸ್ಟಿಕ್ಕರ್ ಮಾತ್ರ ಮಧ್ಯಮ ವರ್ಗದ ಜನರ ಸಾಲದ ಹೊರೆ ಮತ್ತು ಹಾಸ್ಯ ಪ್ರಜ್ಞೆಯನ್ನು ಏಕಕಾಲಕ್ಕೆ ಪ್ರತಿಬಿಂಬಿಸುತ್ತಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ  : ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

⚠️ Contents are protected on this website.