ಮದುವೆ ದಿನ ಮೇಕಪ್ ಮಾಡಲು ತೆರಳುತ್ತಿದ್ದಾಗ ವಧುವಿಗೆ ಅಪಘಾತ – ಐಸಿಯುನಲ್ಲೇ ತಾಳಿ ಕಟ್ಟಿದ ವರ…!

Advertisement

ಕೇರಳ : ಮದುವೆ ದಿನದಂದು ಮೇಕಪ್ ಮಾಡಿಸಿಕೊಳ್ಳಲು ತೆರಳುತ್ತಿದ್ದ ವಧುವಿಗೆ ಅಪಘಾತವಾ, ತೀವ್ರವಾಗಿ ಗಾಯಗೊಂಡಿದ್ದರು. ಮದುಮಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ, ಐಸಿಯು ದಾಖಲಿಸಲಾಗಿತ್ತು. ಆಸ್ಪತ್ರೆಯ ಐಸಿಯುನಲ್ಲೇ ವರನು, ವಧುವಿಗೆ ತಾಳಿ ಕಟ್ಟಿದ ಅಪರೂಪದ ಘಟನೆ ತಿರುವನಂತಪುರದ ಕೊಚ್ಚಿಯಲ್ಲಿ ನಡೆದಿದೆ.

Advertisement

ಕೇರಳದ ಆಲಪ್ಪುಳದ ಥುಂಬೋಳಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಆಳಪ್ಪುಳ ನಿವಾಸಿ ಅವನಿ ಹಾಗೂ ಥುಂಬೋಳಿ ನಿವಾಸಿ ಶರೋನ್ ವಿವಾಹ ಶುಕ್ರವಾರದಂದು ನಿಗದಿಯಾಗಿತ್ತು. ಈ ಹಿನ್ನೆಲೆ ವಧು ಅವನಿ ಮೇಕಪ್ ಮಾಡಿಸಿಕೊಳ್ಳಲೆಂದು ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವನಿಯ ಬೆನ್ನುಮೂಳೆಗೆ ತೀವ್ರ ಗಾಯವಾಗಿ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ಬಂದ ಶರೋನ್ ಹಾಗೂ ಅವನಿ ಕುಟುಂಬಸ್ಥರು ಪೂರ್ವ ನಿಗದಿಯಾಗಿದ್ದಂತೆ ಶುಕ್ರವಾರ ಮಧ್ಯಾಹ್ನ 12:15 ರಿಂದ 12:30ರ ನಡುವೆ ಮದುವೆ ನೆರವೇರಿಸಲು ಅವಕಾಶ ಕಲ್ಪಿಸುವಂತೆ ಆಸ್ಪತ್ರೆಯವರಲ್ಲಿ ಮನವಿ ಮಾಡಿದ್ದರು. ಅದರಂತೆ ಆಸ್ಪತ್ರೆಯ ಐಸಿಯುನಲ್ಲೇ ಶರೋನ್ ಅವನಿ ಕುತ್ತಿಗೆಗೆ ತಾಳಿ ಕಟ್ಟಿದ್ದಾರೆ.

Advertisement

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ