ಬಂಟ್ವಾಳ : ಆರೋಪಿ ಚೇತನ್ ಗಾಗಿ ಬಲೆಬೀಸಿದ ಪೊಲೀಸರು – ಖಾಕಿ ಟೀಮ್ ಹೈ ಅಲರ್ಟ್

ಬಂಟ್ವಾಳ, ಜು. 17 : ಲಾವಣ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚೇತನ್ ಗಾಗಿ ಈಗಾಗಲೇ ಪೊಲೀಸರು ಬಲೆಬೀಸಿದ್ದಾರೆ. ಕೃತ್ಯ ನಡೆಸಿದ ಬಳಿಕ ಸ್ಥಳದಿಂದ ಕಾಲ್ಕಿತ್ತಿರುವ ಆರೋಪಿಯಾಗಿದ್ದಾನೆ. ಅಮಾಯಕ ಹೆಣ್ಣು ಮಗಳ ಪ್ರಾಣ ತೆಗೆದ ಆರೋಪಿಯನ್ನು ಎನ್ ಕೌಂಟರ್ ಅಥವಾ ಗಲ್ಲು ಶಿಕ್ಷೆಗೆ ಒಳಪಡಿಸಿ ಎಂಬ ಆಗ್ರಹಗಳು ಕೇಳಿ ಬರುತ್ತಿದೆ.

Advertisement

ಕಳೆದ 3 ವಾರಗಳ ಅಂತರದಲ್ಲಿ 3 ಪ್ರಕರಣಗಳು ನಡೆದಿದ್ದು ಸಾರ್ವಜನಿಕರಿಗೆ ರಸ್ತೆಯಲ್ಲಿ ನಡೆದಾಡಲು ಭಯದ ವಾತಾವರಣ ಸೃಷ್ಠಿಯಾಗಿದೆ. ಖಡಕ್ ಎಸ್ಪಿ ಜೆಲ್ಲೆಯಲ್ಲಿದ್ದರೂ ಇಂತಹ ಪ್ರಕರಣದ ಆರೋಪಿಗಳು ಯಾವುದೇ ಭಯವಿಲ್ಲದೆ ಕೃತ್ಯ ಎಸಗುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಇಂತಹ ಘಟನೆಗಳು ನಡೆದರೂ ಪೊಲೀಸರ‌ ಕಠಿಟ ಕ್ರಮ ಏನು ಮಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿ.ಸಿ ಕ್ಯಾಮರ ಇಲ್ಲ -ಲೈಟ್ ವ್ಯವಸ್ಥೆ ಇಲ್ವೇ ಇಲ್ಲ

ಇದು ಕೆ.ಎಸ್ ಆರ್.ಟಿ.ಸಿ ಬಸ್ ಸ್ಟಾಂಡಾ ಅಥವಾ ಭೂತ ಬಂಗ್ಲೆಯ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ‌. ಅದ್ಧೂರಿಯಾಗಿ ಉದ್ಘಾಟನೆಗೊಂಡ ಬಂಟ್ವಾಳ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸರಿಯಾದ ಸಾಮಾನ್ಯವಾಗಿರಬೇಕಾದ ವ್ಯವಸ್ಥೆಗಳೇ ಇಲ್ಲದಿರುವುದು ಬೇಸರದ ಸಂಗತಿಯಾಗಿದೆ. ಪ್ರತೀ ದಿನ ನೂರಾರು ಪ್ರಯಾಣಿಕರು ಈ ಬಸ್ ಸ್ಟಾಂಡ್ ನಿಂದಲೇ ತಮ್ಮ ತಮ್ಮ‌ಕೆಲಸಕ್ಕೆ ಹಾಗೂ ಊರಿಗೆ ಹೋಗುತ್ತಾರೆ. ಇಂತಹ ಜಾಗದಲ್ಲಿ ಒಂದೇ ಒಂದು ಸಿ.ಸಿ ಕ್ಯಾಮರ ಆಗಲಿ ಅಥವಾ ಸರಿಯಾದ ಲೈಟ್ ವ್ಯವಸ್ಥೆ ಇಲ್ಲದಿರುವುದು ಆಡಳಿತ ವ್ಯವಸ್ಥೆಯಲ್ಲಿ ಕಣ್ಣಿಗೆ ಬಟ್ಟೆಕಟ್ಟಿದಂತೆ ಆಗಿದೆ.

ಆರೋಪಿ ಚೇತನ್ ನ ತಕ್ಷಣ ಬಂಧಿಸಲು ಆಗ್ರಹ

ಇನ್ನು ಪೊಲೀಸರು ನಿನ್ನ ಸಂಜೆ ಕೃತ್ಯ ನಡೆದ ತಕ್ಷಣವೇ ಆರೋಪಿ ಚೇತನ್ ಗಾಗಿ ಬಲೆಬೀಸಿದ್ದಾರೆ. ತಲ್ವಾರ್ ನಿಂದ ಕೊಚ್ಚಿ ಆತ ಓಡಿ ಹೋಗಿದ್ದು. ಈ ಕೃತ್ಯದ ಹಿಂದೆ ಬೇರೆ ಟೀಮ್ ಇದ್ಯಾ ಅಥವಾ ಆರೋಪಿ ಚೇತನ್ ಎಸ್ಕೇಪ್ ಆಗಲು ಯಾರಾದರು ಸಹಕರಿಸಿದ್ದಾರ ಎಂಬ ಅನುಮಾನಗಳು ಪೊಲೀಸರಿಗೆ ದೊಡ್ಡ ಮಟ್ಟದ ತಲೆನೋವಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

⚠️ Contents are protected on this website.