ಮಿತ್ತಬಾಗಿಲು : ಮನೆಯ ಟಿವಿ ಬಳಿ ಹೆಡೆ ಎತ್ತಿ ನಿಂತ ಕಾಳಿಂಗ ಸರ್ಪ – ಉರಗ ರಕ್ಷಕರಿಂದ ಸುರಕ್ಷಿತ ಕಾರ್ಯಾಚರಣೆ !

ಬೆಳ್ತಂಗಡಿ, ಮೇ 25 : ತಾಲೂಕಿನ ಮಿತ್ತಬಾಗಿಲು ಗ್ರಾಮದ ವಳಚ್ಚಿಲ ಬೆಟ್ಟು ಕೊಲ್ಲಿ ನಿವಾಸಿ ಸುಧಾಕರ ಪೂಜಾರಿ ಅವರ ಮನೆಯಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಕಿಟಕಿ ಬಾಗಿಲು ತೆರೆದಿಟ್ಟ ಕಾರಣ ಮೇ .24 ರಂದು ಪತ್ತೆಯಾಗಿದೆ.

Advertisement

ಮನೆಯ ಟಿವಿ ಶೋ ಕೇಸ್ ಬಳಿ ದೂಡ್ಡ ಗಾತ್ರದ ವಿಷಪೂರಿತ ಕಾಳಿಂಗ ಸರ್ಪ ಇರುವುದನ್ನು ಗಮನಿಸಿದ ಮನೆಯವರು ತಕ್ಷಣವೇ ಸ್ಥಳೀಯರಿಗೆ ಮತ್ತು ಉರಗ ತಜ್ಞರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪರಿಣಿತ ಉರಗ ರಕ್ಷಕರು ಸಾರ್ವಜನಿಕರ ಸಹಾಯದೊಂದಿಗೆ ಹಾವನ್ನು ಅತ್ಯಂತ ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಉರಗ ತಜ್ಞರು ರಕ್ಷಿಸಲಾದ ಕಾಳಿಂಗ ಸರ್ಪವನ್ನು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.