ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಕೀನ್ಯಾದ ಯುವ ನಾಯಕ

ಕೀನ್ಯಾ, ಫೆ. 26 : ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಕೀನ್ಯಾದ ಯುವ ನಾಯಕರೊಬ್ಬರು ಪ್ರಮಾಣವಚನ ಸ್ವೀಕರಿಸಿದ್ದು, ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಕೀನ್ಯಾದ ಈ ಯುವ ನಾಯಕನ ಹೆಸರು ಕ್ಯಾಲೆಬ್. ಮೊಂಬಾಸಾದ ಕೌಂಟಿಯಲ್ಲಿರುವ ವಿಧಾನಸಭೆಯಲ್ಲಿ ಈ ಘಟನೆ ನಡೆದಿದೆ. ಮೊಂಬಾಸಾ ಕೌಂಟಿಯ ಚಂಗಮ್ವೆ ಕ್ಷೇತ್ರವನ್ನು ಪ್ರತಿನಿಧಿಸುವ ಯುವ ಶಾಸಕ ಕ್ಯಾಲೆಬ್ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ.

“ಈ ನಡೆ ನಾಟಕೀಯವಲ್ಲ, ಪ್ರಚಾರಕ್ಕೂ ಅಲ್ಲ ಆ ಭಾವ ಅವರ ಹೃದಯಲ್ಲಿ ಹುಟ್ಟಿಕೊಂಡಿರುವುದು, ಅದೇ ಸತ್ಯ, ಹಾಗೂ ಇದು ಉದ್ದೇಶ ಪೂರ್ವಕ ನಡೆ ಎಂದರು. ಸಾರ್ವಜನಿಕ ಹುದ್ದೆಯು ಹೆಚ್ಚಾಗಿ ಪ್ರಬಲ ಧಾರ್ಮಿಕ ಸಂಪ್ರದಾಯಗಳೊಂದಿಗೆ ಹೆಣೆದುಕೊಂಡಿರುವ ರಾಷ್ಟ್ರದಲ್ಲಿ, ಭಗವದ್ಗೀತೆಯ ಮೇಲೆ ಪ್ರಮಾಣ ಮಾಡುವ ಕ್ಯಾಲೆಬ್ ಅವರ ನಿರ್ಧಾರವು ಹೊಸ ಭರವಸೆಯನ್ನು ಹುಟ್ಟುಹಾಕಿದೆ” ಎಂದು ಇಸ್ಕಾನ್‌ನ ಓಂಕಾರ ಮುಕುಂದ ದಾಸ್ ತಿಳಿಸಿದ್ದಾರೆ.

ಕ್ಯಾಲೆಬ್ ಅವರು ಹರೇ ಕೃಷ್ಣ ಸಮುದಾಯದಲ್ಲಿರುವ ಭಕ್ತ, ಅವರ ಅಣ್ಣನ ಮೂಲಕ ಇಸ್ಕಾನ್ ಗೆ ಸೇರಿಕೊಂಡರು. ಮೊಂಬಾಸಾದ ವಿದ್ಯಾರ್ಥಿಗಳಲ್ಲಿ ವೈಷ್ಣವ ಸಂಸ್ಕೃತಿಯನ್ನು ಹರಡಲು 2021 ರಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯ ಆಧಾರಿತ ಉಪಕ್ರಮವಾದ ದಿ ಬೆಟರ್ ಯು ಕ್ಲಬ್‌ನ ಅಧ್ಯಕ್ಷರಾಗಿ, ಕ್ಯಾಲೆಬ್ ಕ್ಲಬ್ ಅನ್ನು 180 ಸದಸ್ಯರನ್ನು ಬೆಳೆಸಲು ಅವರು ಸಹಕರಿಸಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಮೋದಿ ಪೋಸ್ಟ್ ನಿರ್ಬಂಧ – ಕ್ಷಮೆಯಾಚಿಸಿದ ಟೆಕ್‌ ದೈತ್ಯ ಮೆಟಾ !

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

⚠️ Contents are protected on this website.