ಬೆಳ್ತಂಗಡಿ : ಕೋಳಿ ಅಂಕಕ್ಕೆ ದಾಳಿ – ಐವರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ, ಮಾ. 14 : ತಾಲೂಕಿನ ಕರಾಯ ಗ್ರಾಮದ ಶೆಟ್ಟಿಕೋಡಿ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಾಲ್ಕು ಹುಂಜಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಕೊಡಂಬೆಟ್ಟು ಗ್ರಾಮದ ಮುಗೇರ ಮನೆಯ ಅಂಕಿತ್, ಉರುಡಾಯಿ ನಿವಾಸಿ ಯಶೋಧರ, ಮುಗೇರ ಮನೆಯ ಶಿವಪ್ಪ, ತಣ್ಣೀರುಪಂಥ ಗ್ರಾಮದ ಮುಂದಿ ಮನೆಯ ಕರುಣಾಕರ ಪೂಜಾರಿ, ಮಚ್ಚಿನ ಗ್ರಾಮದ ಮಡಕ್ಕಿಲ ಮನೆಯ ಉಮೇಶ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸ್ಥಳದಿಂದ ನಾಲ್ಕು ಅಂಕದ ಹುಂಜ, ಜೂಜಾಟಕ್ಕೆ ಬಳಸಿದ 2,500 ರೂ. ನಗದು, ಎರಡು ಕೋಳಿ ಬಾಳು, ಒಂದು ಅಟೋ ರಿಕ್ಷಾವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಶೆಟ್ಟಿಕೋಡಿ ಎಂಬಲ್ಲಿ ಮೈದಾನವೊಂದರಲ್ಲಿ ಮಾ.13ರಂದು ಕೋಳಿ ಅಂಕ ನಡೆಯುತ್ತಿದ್ದ ವೇಳೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪ್ರೊಬೆಷನರಿ ಐಪಿಎಸ್ ಅನನ್ಯ ಶ್ರೀವತ್ಸವ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.