ಬೆಂಗಳೂರು : ಕೆಪಿಎಸ್​ಸಿ ನೇಮಕಾತಿಯಲ್ಲಿ ಹಗರಣ : ಪ್ರಶ್ನೆಪತ್ರಿಕೆ, OMR ಶೀಟ್ ಇಡುವ ಕೊಠಡಿ ಸಿಸಿಟಿವಿ ದೃಶ್ಯಗಳೇ​ ಡಿಲೀಟ್ !

Advertisement

ಬೆಂಗಳೂರು, ಆ.​​ 26 : ಕೆಪಿಎಸ್​ಸಿಯಿಂದ ಪಶುವೈದ್ಯರ ನೇಮಕಾತಿಯಲ್ಲಿ ಹಗರಣ ಸಂಬಂಧ ಕಚೇರಿ ಮೇಲೆ ಅಧಿಕಾರಿಗಳಿಂದ ದಾಳಿ ವೇಳೆ ಶಾಕಿಂಗ್ ಸತ್ಯ ಬಯಲಾಗಿದೆ. ಪ್ರಶ್ನೆಪತ್ರಿಕೆ, OMR ಶೀಟ್ ಇಡುವ ಕೊಠಡಿ ಸಿಸಿಟಿವಿ ದೃಶ್ಯಗಳೇ​ ಡಿಲೀಟ್ ಆಗಿರೋದು ಪರಿಶೀಲನೆ ವೇಳೆ ಕಂಡುಬಂದಿದೆ. ಪರೀಕ್ಷೆ ಪ್ರಾರಂಭ ಆಗುವಾಗ ಸ್ಟ್ರಾಂಗ್ ರೂಮ್ ತೆರೆಯಬೇಕು. ಪ್ರಶ್ನೆಪತ್ರಿಕೆ, OMR ಇಡುವಾಗ ಸಿಸಿಟಿವಿ ಕಣ್ಗಾವಲು ಇಡಬೇಕು. ಆದರೆ ಕಳೆದ 6 ತಿಂಗಳಿನ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿಲ್ಲ ಎನ್ನಲಾಗಿದೆ.

Advertisement

ಪ್ರಶ್ನೆ ಪತ್ರಿಕೆ OMR ಶೀಟ್​​ ಇಡುವ ಕೊಠಡಿಗೆ ಇಡುವಾಗ ದಿನದ 24 ಗಂಟೆ ಸಿಸಿಟಿವಿ ಕಣ್ಗಾವಲು ಇಡಬೇಕು. ಅದರಂತೆ KPSCಯ ಸ್ಟ್ರಾಂಗ್ ರೂಂ ಅಲ್ಲಿ ಸಿಸಿ ಟಿವಿ ಕ್ಯಾಮರಾ ಏನೋ ಇದೆ. ಆದ್ರೆ ಡಾಟಾ ಡಿಲೀಟ್ ಆಗಿದೆ. ನಿಯಮದ ಪ್ರಕಾರ ಸ್ಟ್ರಾಂಗ್ ರೂಂನ ಸಿಸಿಟಿವಿ ಡಾಟಾವನ್ನು ಪರೀಕ್ಷೆ ಮುಗಿದ ವರ್ಷದ ತನಕ ಇಟ್ಟಿರಬೇಕು. ಯಾವುದೇ ಆರೋಪ ಕೇಳಿಬರದೆ ಇದ್ದರೆ ಡಾಟಾ ಡಿಲೀಟ್ ಮಾಡಬಹುದು. ಆದರೆ 6 ತಿಂಗಳ ಡಾಟಾ ಕೂಡ ಇಲ್ಲಿ ಸಂಗ್ರಹವಾಗಿಲ್ಲ. ಜೊತೆಗೆ OMR ಶೀಟ್​​ಗಳ ಸ್ಕ್ಯಾನ್ ಮಾಡಿರುವ ಹಾರ್ಡ್ ಡಿಸ್ಕ್ ಕೂಡ ನಾಪತ್ತೆಯಾಗಿದೆ. ಪರೀಕ್ಷೆ ಮುಗಿದ ಮೇಲೆ ಎಲ್ಲಾ OMR ಶೀಟ್ ಸ್ಕ್ಯಾನ್ ಮಾಡಲಾಗುತ್ತೆ. ಆದರೆ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆ ಸಂಬಂಧ ಹಾರ್ಡ್ ಡಿಸ್ಕ್ ಇಲ್ಲ. ಹೀಗಾಗಿ ಅತೀದೊಡ್ಡ ಅಕ್ರಮ ಕೇಂದ್ರ ಕಚೇರಿಯಲ್ಲಿಯೇ ನಡೆದಿರುವುದಕ್ಕೆ ಪುಷ್ಠಿ ಸಿಕ್ಕಿದೆ. ಪ್ರಶ್ನೆ ಪತ್ರಿಕೆ ಲೀಕ್ ಮತ್ತು OMR ಟ್ಯಾಪರಿಂಗ್ ಆಗಿರೋದು ಸ್ಪಷ್ಟ ಎನ್ನಲಾಗಿದೆ.

Advertisement

ಮುಂದುವರಿದಿರುವ ವಿಚಾರಣೆ

ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಕೆಪಿಎಸ್​ಸಿ ಸದಸ್ಯೆ ಶಾಂತ ಹೊಸಮನಿ ಸೇರಿ 10 ಸದಸ್ಯರು, 45 ಅಧಿಕಾರಿಗಳು, ಸಿಬ್ಬಂದಿಗೂ ಸಿಐಡಿ ಅದಾಗಲೇ ನೋಟಿಸ್ ನೀಡಿ ವಿಚಾರಣೆಗೆ ಬರಲು ಸೂಚಿಸಿದೆ. IAS ಅಧಿಕಾರಿ ಜ್ಞಾನೇಂದ್ರ ಕುಮಾರ್​​ ಮನೆ, ಕಚೇರಿಗೂ ನೋಟಿಸ್ ಅಂಟಿಸಲಾಗಿದೆ. ಉತ್ತೀರ್ಣಗೊಂಡ 329 ಅಭ್ಯರ್ಥಿಗಳಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಸಿಐಡಿಯಿಂದ ಪ್ರತಿದಿನ ಸುಮಾರು 10 ಅಭ್ಯರ್ಥಿಗಳ ಹೇಳಿಕೆ ದಾಖಲು ನಡೆಯುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳ OMR ಪ್ರತಿ ಕೂಡ ಸೀಜ್ ಮಾಡಲಾಗಿದ್ದು, ಮೂರು ಪರೀಕ್ಷಾ ಕೇಂದ್ರಗಳ ಸಿಸಿಟಿವಿಗಳ ಡಿವಿಆರ್ ವಶಕ್ಕೆ ಪಡೆದು ಎಲ್ಲವನ್ನೂ FSLಗೆ ಕಳುಹಿಸಲಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ