ಮೇಲಂತಬೆಟ್ಟು : ಕೃಷಿಕ ಯುವಕ ಮಂಡಲ (ರಿ.), ಮೇಲಂತಬೆಟ್ಟು ವತಿಯಿಂದ 4ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ

Advertisement

ಮೇಲಂತಬೆಟ್ಟು, ಸೆ. 07 : ಕೃಷಿಕ ಯುವಕ ಮಂಡಲ (ರಿ.), ಮೇಲಂತಬೆಟ್ಟು ವತಿಯಿಂದ ಮೇಲಂತಬೆಟ್ಟು, ಮುಂಡೂರು, ಸವಣಾಲು ಮತ್ತು ಲಾಯಿಲ ಗ್ರಾಮಸ್ಥರಿಗೆ 4ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಅತ್ಯಂತ ವೈಭವದಿಂದ ಮೇಲಂತಬೆಟ್ಟು ಶಾಲಾ ಮೈದಾನದಲ್ಲಿ ಜರುಗಿತು.

Advertisement

ಕಾರ್ಯಕ್ರಮವನ್ನು ಶ್ರೀ ವೇದಮೂರ್ತಿ ಗೋಪಾಲಕೃಷ್ಣ ತಂತ್ರಿಗಳು ಮಡಂತ್ಯಾರು ಇವರು ಉದ್ಘಾಟಿಸಿ ಶುಭ ಹಾರೈಸಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೇಲಂತಬೆಟ್ಟು ಇದರ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೂಪಾ ಇವರು ಸಭಾಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಮೇಲಂತಬೆಟ್ಟು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಶ್ರೀ ರಾಜೇಂದ್ರ ಕೃಷ್ಣ, ಶ್ರೀ ಶೈಲೇಶ್ ಕುಮಾರ್ ಕುರ್ತೋಡಿ, ಶ್ರೀ ಪ್ರಶಾಂತ್ ಎಂ, ಶ್ರೀಮತಿ ಸುಮತಿ ಪ್ರಮೋದ್ ನೂಜೋಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Advertisement

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೇಲಂತಬೆಟ್ಟು ಇಲ್ಲಿನ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಸಮಾರೋಪ ಸಮಾರಂಭದಲ್ಲಿ ಸ್ಟೀಲ್ ವಾಟರ್ ಬಾಟಲ್, ಟೈ-ಬೆಲ್ಟ್ ನಮ್ಮ ಮಂಡಲದ ವತಿಯಿಂದ ಉಚಿತವಾಗಿ ವಿತರಣೆ ಮಾಡಲಾಯಿತು.

ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಬಟ್ಕರಡ್ಡ SKDRDP ಇದರ ಶ್ರೀ ಪ್ರವೀಣ್ ಕುಮಾರ್ ಇವರು ವಹಿಸಿದ್ದರು. ಸಮಾರಂಭದ ವೇದಿಕೆಯಲ್ಲಿ ಜೈಸನ್ ಜೋಯಲ್ ಡಿಸೋಜ, ಆಶ್ರಫ್ ಆಲಿ ಕುಂಞ, ಜೋನ್ ಪಿಂಟೋ, ಶ್ರೀ ನಾರಾಯಣ ಪೂಜಾರಿ, ಶ್ರೀ ಜಗನ್ನಾಥ ಶೆಟ್ಟಿ ಕರ್ನೋಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ