ಕುಪ್ಪೆಟ್ಟಿ : ಶ್ರೀ ಗಣೇಶ ಭಜನಾ ಮಂಡಳಿ (ರಿ.), ಕುಪ್ಪೆಟ್ಟಿ ಶ್ರೀ ದುರ್ಗಾ ಗಣೇಶ ಮಾತೃಮಂಡಳಿ ಮತ್ತು ಕಟ್ಟಡ ಅಭಿವೃದ್ಧಿ ಸಮಿತಿಯಿಂದ 37ನೇ ವರ್ಷದ “ಸಾರ್ವಜನಿಕ ಶ್ರೀ ಗಣೇಶೋತ್ಸವ”

Advertisement

ಕುಪ್ಪೆಟ್ಟಿ, ಸೆ. 07 : ಶ್ರೀ ಗಣೇಶ ಭಜನಾ ಮಂಡಳಿ (ರಿ.), ಕುಪ್ಪೆಟ್ಟಿ ಶ್ರೀ ದುರ್ಗಾ ಗಣೇಶ ಮಾತೃಮಂಡಳಿ ಮತ್ತು ಕಟ್ಟಡ ಅಭಿವೃದ್ಧಿ ಸಮಿತಿಯಿಂದ 37ನೇ ವರ್ಷದ “ಸಾರ್ವಜನಿಕ ಶ್ರೀ ಗಣೇಶೋತ್ಸವ”ವು ಸೆ. 14 ಸೋಮವಾರದಂದು ಶ್ರೀ ಗಣೇಶ ಭಜನಾ ಮಂದಿರ, ಕುಪ್ಪೆಟ್ಟಿಯಲ್ಲಿ ವಿಜ್ರಂಭಣೆಯಿಂದ ಜರುಗಲಿದೆ.

Advertisement

ಬೆಳಿಗ್ಗೆ ಗಂಟೆ 8.00ಕ್ಕೆ ಬಿಂಬ ಪ್ರತಿಷ್ಠೆ, ಗಣಪತಿ ಹೋಮ, ಬೆಳಿಗ್ಗೆ ಗಂಟೆ 9.00 ರಿಂದ ಸಾರ್ವಜನಿಕರಿಗೆ ಭಕ್ತಿಗೀತೆ ಸ್ಪರ್ಧೆ ಮತ್ತು ಆಟೋಟ ಸ್ಪರ್ಧೆ, ಮಧ್ಯಾಹ್ನ 12.30ಕ್ಕೆ ಹೋಮದ ಪೂರ್ಣಾಹುತಿ, ಮಹಾಪೂಜೆ ಪ್ರಸಾದ ನಂತರ ಅನ್ನಸಂತರ್ಪಣೆ ನಡೆಯಲಿದೆ. ಆ ಬಳಿಕ ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ, ಕೊರಿಂಜ, ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮಲೆಂಗಲ್ಲು ತಂಡದಿಂದ ಭಜನಾ ಕಾರ್ಯಕ್ರಮವು ಜರುಗಲಿದೆ. ಸಂಜೆ ಗಂಟೆ 6.00ರಿಂದ ರಂಗಪೂಜೆ, ಸಂಜೆ ಗಂಟೆ 7.30ರಿಂದ ಸಭಾ ಕಾರ್ಯಕ್ರಮ, ರಾತ್ರಿ ಗಂಟೆ 8.30ರಿಂದ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಹಾಗೂ ರಾತ್ರಿ ಗಂಟೆ 9.00ಕ್ಕೆ ಭಾರತಮಾತಾ ವಂದನಾ ಕಾರ್ಯಕ್ರಮ, ಶೋಭಾಯಾತ್ರೆ ಕುಪ್ಪೆಟ್ಟಿ ನದಿಯಲ್ಲಿ ಬಿಂಬ ಜಲಸ್ತಂಭನ ಕಾರ್ಯಕ್ರಮ ನಡೆಯಲಿದೆ.

Advertisement

ಪರಮಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಸ್ವಾಮೀಜಿಯವರಿಂದ ಆಶೀರ್ವಚನ, ಶಾಸಕ ಶ್ರೀ ಹರೀಶ್ ಪೂಂಜಾ, ಉದ್ಯಮಿಗಳಾದ ಶ್ರೀ ಶಶಿಧರ್ ಶೆಟ್ಟಿ ಬರೋಡಾ ಸೇರಿದಂತೆ ವಿವಿಧ ಗಣ್ಯರ ಸಮ್ಮುಖದಲ್ಲಿ ತನ್ನೋಜಿ ಮಹಾಲಿಂಗೇಶ್ವರ ದೇವಸ್ಥಾನ ಹಲೇಜಿ ಇದರ ಆಡಳಿತ ಮೊಕ್ತೇಸರರಾದ ಶ್ರೀ ಅತುಲ್ ಕುಮಾರ್ ಕೆ. ಎನ್ ಇವರ ಅಧಕ್ಷತೆಯಲ್ಲಿ ಸಭಾ ಕಾರ್ಯಕ್ರಮವು ನಡೆಯಲಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ