ಕುಪ್ಪೆಟ್ಟಿ : ಹಿಂದೂ ಧರ್ಮದ ಶಕ್ತಿ ಕೇಂದ್ರವಾಗಿ ಕುಪ್ಪೆಟ್ಟಿ ಭಜನಾ ಮಂದಿರ ನಿರ್ಮಾಣ – ಹರೀಶ್ ಪೂಂಜಾ

ದೀಪ ಪ್ರಜ್ವಲನೆ : ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

ಕುಪ್ಪೆಟ್ಟಿ ಡಿ.08 : ಮೈಸೂರು ಸಂಸ್ಥಾನದ ಮಹಾರಾಜರು, ಸಂಸದರೂ ಆದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುದ ಲೋಕಾರ್ಪಣೆಗೊಳಿಸಿದರು. ಅದೇ ರೀತಿಯಲ್ಲಿ ಶ್ರೀ ದುರ್ಗಾಗಣಪತಿ ಸಭಾಭವನವನ್ನು ಮುಂಬೈ ಉದ್ಯಮಿಗಳಾದ ಶ್ರೀ ಸದಾಶಿವ ಶೆಟ್ಟಿ ಲೋಕಾರ್ಪಣೆಗೊಳಿಸಿದರು.

Advertisement

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಜಗೋಪುರ ಹಾಗೂ ಶ್ರೀ ದುರ್ಗಾಗಣೇಶ ಸಭಾಭವನ, ಲೋಕಾರ್ಪಣಾ ಸಮಿತಿ ಗೌರವಾಧ್ಯಕ್ಷರು, ಶಾಸಕರಾದ ಶ್ರೀ ಹರೀಶ್ ಪೂಂಜಾ ಅವರು ಮಾತನಾಡಿ, ಹಿಂದೂ ಧರ್ಮದ ರಕ್ಷಣೆಗೋಸ್ಕರ, ಹಿಂದೂ ತರುಣಿಯರ ರಕ್ಷಣೆಗೋಸ್ಕರ, ಗೋ ಹತ್ಯೆ, ಲವ್ ಜಿಹಾದ್ ನಂತಹ ಆಘಾತಗಳನ್ನು ತಡೆಯುವಂತಹ ಶಕ್ತಿ ಕೇಂದ್ರವಾಗಿ ಕುಪ್ಪೆಟ್ಟಿ ಭಜನಾ ಮಂದಿರ ನಿರ್ಮಾಣವಾಗಿದೆ. ಭಜನಾ ಮಂದಿರ ನಿರ್ಮಾಣ ಮಾಡಲೇಬೇಕು, ಆ ಮೂಲಕ ಹಿಂದೂ ಧರ್ಮದ ರಕ್ಷಣೆಗೋಸ್ಕರ ಪಣತೊಟ್ಟಂತಹ ಭಜನಾ ಮಂದಿರದ ತರುಣರ ಸಾಧನೆಯನ್ನು ಮೆಚ್ಚಲೇಬೇಕು ಎಂದರು.

ನೂತನ ರಾಜಗೋಪುದ ಲೋಕಾರ್ಪಣೆಗೊಳಿಸಿ ಮೈಸೂರು ಸಂಸ್ಥಾನದ ಮಹಾರಾಜರು, ಸಂಸದರೂ ಆದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ನಮ್ಮ ಇಂದಿನ ಪೀಳಿಗೆಗೆ ಧಾರ್ಮಿಕ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ. ಮತಾಂತರದಂತಹ ಧರ್ಮ ವಿರೋಧಿ ಚಟುವಟಿಕೆಗಳು ನಡೆಯುತ್ತಿದೆ. ಇಂತಹ ಘಟನೆ ಯಾಕೆ ನಡೆಯುತ್ತಿದೆ ಎಂದರೆ, ನಮ್ಮ ಧರ್ಮದ ಅರಿವು ನಮಗಿಲ್ಲ. ಜಾತಿಯತೆಯನ್ನೇ ಮುನ್ನಲೆಗೆ ತಂದು ಹಿಂದೂ ಧರ್ಮವನ್ನು ಕೀಳು ಧರ್ಮ ಎಂದು ಬಿಂಬಿಸುವ ಪ್ರಯತ್ನ ಮೆಕಾಲೆ ಕಾಲದಿಂದಲೇ ನಡೆಯುತ್ತಿದೆ. ಆದರೆ, ಸದ್ಯ ಒಂದು ಧರ್ಮದ ಕ್ರಾಂತಿ ನಡೆಯುತ್ತಿದೆ. ಇದು ದೇಶದಾದ್ಯಂತ ನಡೆಯಬೇಕಿದೆ. ಭಜನಾ ಮಂದಿರದಲ್ಲಿ ನಡೆದಂತಹ ಯಜ್ಞಗಳು ನಮ್ಮ ಧರ್ಮದಲ್ಲಿ ಲಕ್ಷ ಯುಗಗಳ ಹಿಂದೆಯಿಂದಲೇ ನಡೆದುಬಂದ ಪರಂಪರೆ ನಮ್ಮದು. ೨೦೨೮ರ ಚುನಾವಣೆಯಲ್ಲಿ ನಮ್ಮದೇ ಸರ್ಕಾರ ಬರುತ್ತದೆ, ಆಗ ಭಜನಾ ಮಂದಿರಗಳನ್ನೇ ಸಂರಕ್ಷಿಸುವಂತಹ ಕೆಲಸಗಳನ್ನು ಮಾಡಬೇಕಿದೆ. ನಮ್ಮ ಸುತ್ತಮುತ್ತಲು ಇರುವಂತಹ ದೇವಸ್ಥಾನ, ಧಾರ್ಮಿಕ ಕೇಂದ್ರಗಳು, ಭಜನಾ ಮಂದಿರಗಳ ರಕ್ಷಣೆಗೆ ನಾವು ನಿಲ್ಲಲೇಬೇಕಿದೆ ಎಂದರು.

ಧಾರ್ಮಿಕ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ರಾಜಗೋಪುರ ಹಾಗೂ ಶ್ರೀ ದುರ್ಗಾಗಣೇಶ ಸಭಾಭವನ, ಲೋಕಾರ್ಪಣಾ ಸಮಿತಿ ಅಧ್ಯಕ್ಷರಾದ ಶ್ರೀ ಶಶಿಧರ ಶೆಟ್ಟಿ, ಬರೋಡಾ ವಹಿಸಿದ್ದರು. ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ | ಪ್ರಭಾಕರ್ ಭಟ್, ಕಲ್ಲಡ್ಕ ಧಾರ್ಮಿಕ ಭಾಷಣಗೈದರು. ಇನ್ನು ವೇದಿಕೆಯಲ್ಲಿ, ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮುಂಬೈ ಉದ್ಯಮಿಗಳು ಶ್ರೀ ಸದಾಶಿವ ಶೆಟ್ಟಿ ಕನ್ಯಾನ, ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಧರ್ಮಸ್ಥಳ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಅನಿಲ್ ಕುಮಾರ್ ಎಸ್. ಎಸ್., ಉರುವಾಲು ರಾಜಮಂದಿರ ಡಾ|| ಶ್ರೀಕೃಷ್ಣರಾಜ್ ಯು.ಎಸ್.ಎ., ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ & ಸ್ಟೋನ್ಕ್ರಷರ್ ಓನರ್ಸ್ ಅಸೋಸಿಯೇಶನ್ (ರಿ.) ರಾಜ್ಯಾಧ್ಯಕ್ಷರು ಶ್ರೀ ರವೀಂದ್ರ ಶೆಟ್ಟಿ ಬಜಗೋಳಿ, ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನಮನೆ ಉದ್ಯಮಿಗಳು ಶ್ರೀ ಕೆ. ಮೋಹನ್ ಕುಮಾರ್, ತಣ್ಣೀರುಪಂತ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನದ ಅಧ್ಯಕ್ಷರು ಶ್ರೀ ಭರತ್ ಶೆಟ್ಟಿ ಕೇರಿ, ಶಂಕರಿ ಇಲೆಕ್ಟಿಕಲ್ಸ್, ಬೆಂಗಳೂರು ಮಾಲಕರು ಶ್ರೀ ರಾಜೇಶ್ ಶೆಟ್ಟಿ, ಶ್ರೀ ನಾಗಾರ್ಜುನ್ ರಾವ್ ಉದ್ಯಮಿಗಳು ಬೆಂಗಳೂರು, ಶ್ರೀ ನಟೇಶ್ ಪೂಜಾರಿ ಉದ್ಯಮಿಗಳು ಬೆಂಗಳೂರು, ಶ್ರೀ ಕೆ. ಸಿ. ವಿಜಯ ಕುಮಾರ್ ಉದ್ಯಮಿಗಳು ಬೆಂಗಳೂರು, ಶ್ರೀ ವಿಶ್ವನಾಥ್ ಉದ್ಯಮಿಗಳು ಬೆಂಗಳೂರು, ಶ್ರೀಮತಿ ಸುಶೀಲ ಟ್ರಸ್ಟಿ, ಸಿ.ಎಸ್.ಆರ್. ಟ್ರಸ್ಟ್ ಬೆಂಗಳೂರು, ಶ್ರೀಮತಿ ಅರ್ಚನಾ ರಾಜೇಶ್ ಪೈ, ಸಿ.ಇ.ಒ. ಸಂಧ್ಯಾ ಫ್ರೆಶ್ ಉಜಿರೆ, ಶ್ರೀಮತಿ ರೇವತಿ ಟ್ರಸ್ಟಿ ಶ್ರೀಧಾಮ ಮಾಣಿಲ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.