ಬೆಳ್ತಂಗಡಿ, ಆ. 10 : ಇತ್ತೀಚೆಗೆ ಕರ್ನಾಟಕ ಟಿವಿ ವತಿಯಿಂದ ನಡೆದ ಲೀಡರ್ಸ್ ಅವಾರ್ಡ್ 2025 ರಲ್ಲಿ ಕರಾವಳಿ ಮತ್ತು ಮಧ್ಯ ಕರ್ನಾಟಕ ವಿಭಾಗದಲ್ಲಿ ಬೆಸ್ಟ್ ಎಂಎಲ್ಎ (Best MLA) ಅವಾರ್ಡ್ ಪಡೆದ ತಾಲೂಕಿನ ಜನ ಮೆಚ್ಚಿದ ನಾಯಕ, ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜರವರನ್ನು ಕುತ್ಯಾರು ಫ್ರೆಂಡ್ಸ್ ಬೆಳ್ತಂಗಡಿ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಶಾಂತ್ ಎಂ. ಪಾರೆಂಕಿ, ಉಮೇಶ್ ಕುಲಾಲ್, ಪ್ರಕಾಶ್ ಆಚಾರ್ಯ, ಶರತ್ ಕುಮಾರ್, ಗಣೇಶ್ ಲಾಯಿಲ, ಅರವಿಂದ ಲಾಯಿಲ, ಕರುಣಾಕರ, ಪವನ್, ಅಭಿಲಾಷ್, ಚಂದ್ರರಾಜ್, ಚೇತನ್ ಶೆಟ್ಟಿ, ಸಂಜೀವ, ಕೃಷ್ಣ ಭಟ್, ದಿಗಂತ್ ಉಪಸ್ಥಿತರಿದ್ದರು.




