ಗೇರುಕಟ್ಟೆ : “ಟಿಕ್ಕಾ ಪಾರ್ಕ್” ಮಾಲಕನಿಂದ ಬಾಲಕಿಗೆ ಲೈಂಗಿಕ ಕಿರುಕುಳ – ಹೆತ್ತವರ ಬಾಯಿ ಮುಚ್ಚಿಸಲು ಬಾಲಕಿಯ ವೀಡಿಯೋ ವೈರಲ್ !

ಗೇರುಕಟ್ಟೆ, ಡಿ.11 : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಪೋಕೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಪೇಟೆಯಲ್ಲಿರುವ ‘ಟಿಕ್ಕಾ ಪಾರ್ಕ್’ ಎಂಬ ಅಂಗಡಿಯ ಮಾಲಕ ಮಹಮ್ಮದ್ ಎಂಬಾತನೇ ಈ ಪ್ರಕರಣದ ಆರೋಪಿ ಎಂದು ಗುರುತಿಸಲಾಗಿದೆ. ಕೆಲವು ಸಮಯಗಳ ಹಿಂದೆ ತನ್ನ ಅಂಗಡಿಗೆ ಬರುತ್ತಿದ್ದ 6ನೇ ತರಗತಿಯ ಅಪ್ರಾಪ್ತ ಬಾಲಕಿ ಟಿಕ್ಕ ತರಲೆಂದು ಹೋಗಿದ್ದ ಸಂದರ್ಭ ಹಲವು ಭಾರಿ ಬೇರೆ ಬೇರೆ ದಿನಗಲ್ಲಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಬಾಲಕಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ್ದು, ಅಂಗಡಿ ಮಾಲಕ ತಾನೆಸಗಿದ ಕೃತ್ಯದ ಬಗ್ಗೆ ಯಾರಿಗಾದರೂ ತಿಳಿಸಿದಲ್ಲಿ ನಿನ್ನನ್ನು ಬಿಡುವುದಿಲ್ಲ ಎಂದು ಬಾಲಕಿಗೆ ಜೀವ ಬೆದರಿಕೆಯೊಡ್ಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. ಬಾಲಕಿಯನ್ನು ಹೆತ್ತವರು ಹಲವು ಬಾರಿ ಅಂಗಡಿಗೆ ಕರೆದುಕೊಂಡು ಹೋಗುತ್ತಿದ್ದ ಕಾರಣ, ಅಂಗಡಿ ಮಾಲಕನ ಪರಿಚಯವಾಗಿತ್ತು. ಅಂಗಡಿ ಮಾಲಕ ಪರಿಚಿತ ವ್ಯಕ್ತಿಯಾಗಿರುವ ಕಾರಣಕ್ಕಾಗಿ ಬಾಲಕಿಯು ಟ್ಯೂಷನ್ ಹೋಗುವಾಗ ಮತ್ತು ಟಿಕ್ಕ ತರಲೆಂದು ಕೆಲವು ಸಲ ಒಬ್ಬಳೇ ಹೋಗುತ್ತಿದ್ದು ಇಂಥ ಸಂದರ್ಭದಲ್ಲಿ ಆಕೆಯ ಸಲುಗೆ ಮತ್ತು ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಅಂಗಡಿ ಮಾಲಕ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಬಾಲಕಿಯು ಹೆತ್ತವರಲ್ಲಿ ಹೇಳಿಕೊಂಡಾಗ ಕೃತ್ಯ ಬೆಳಕಿಗೆ ಬಂದಿದೆ.

ಈ ಕೃತ್ಯ ಬಾಲಕಿಯ ಹೆತ್ತವರಿಗೆ ತಿಳಿದು ಈ ಬಗ್ಗೆ ಹೋಗಿ ವಿಚಾರಿಸಲು ಹೋಗಿದ್ದು ಅಂಗಡಿ ಮಾಲಕ ಮತ್ತು ಬಾಲಕಿಯ ತಂದೆಯ ಮಧ್ಯೆ ಮಾತಿನ ಚಕಮಕಿ ನಡೆದಿದೆನ್ನಲಾಗಿದೆ. ಅಲ್ಲದೆ, ಇದೇ ಸಂದರ್ಭ ಆತ ಮತ್ತು ಇತರರು ಜೀವಬೆದರಿಕೆ ಹಾಕಿರುವುದಾಗಿಯೂ ಆರೋಪಿಸಲಾಗಿದೆ. ಇನ್ನೊಂದೆಡೆ ಅಂಗಡಿ ಮಾಲಕ ಮತ್ತು ಆತನ ಬೆಂಬಲಿಗರು ಸೇರಿ ಅಂಗಡಿ ಮಾಲಕನ ಲೈಂಗಿಕ ಕಿರುಕುಳ ಪ್ರಕರಣವನ್ನು ಬಾಲಕಿಯ ಹೆತ್ತವರ ಬಾಯಿ ಮುಚ್ಚಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಅಪ್ರಾಪ್ತ ಬಾಲಕಿ ಒಂಟಿಯಾಗಿ ಅಂಗಡಿಗೆ ಬಂದಿದ್ದ ಸಂದರ್ಭದ ಸಿಸಿ ಕ್ಯಾಮೆರಾ ಫೂಟೇಜನ್ನು ಮೊಬೈಲ್ ಮೂಲಕ ವೈರಲ್ ಮಾಡಿ ಕಳ್ಳತನದ ಆರೋಪ ಹೊರಿಸಿ ಬಾಲಕಿ ಇನ್ನಷ್ಟು ಮಾನಸಿಕ ಆಘಾತಕ್ಕೊಳಗಾಗಲು ಪ್ರಚೋದನೆ ನೀಡುವ ಕೃತ್ಯವೆಸಗಿದ್ದಾರೆಂದು ಆರೋಪಿಸಲಾಗಿದೆ. ವೀಡಿಯೋ ವೈರಲ್ ಆದ ಕಾರಣ ಅವಮಾನಗೊಂಡ ತಮ್ಮ ಅಪ್ರಾಪ್ತ ಮಗಳು ಇದೀಗ ಶಾಲೆಗೆ ಹೋಗಲು ಹಿಂಜರಿಯುತ್ತಿದ್ದು ಮಗಳ ಶಿಕ್ಷಣ ಮತ್ತು ಭವಿಷ್ಯ ಕುಂಠಿತಗೊಳ್ಳುವ ಬಗ್ಗೆ ಹೆತ್ತವರಿಗೆ ಚಿಂತೆಯಾಗಿದ್ದು ಎಂದು ತಿಳಿದು ಬಂದಿದೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಾತ್ರವಲ್ಲದೆ ಈ ಪ್ರಕರಣ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೆಟ್ಟಿಲೇರಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.