ಬಂಟ್ವಾಳ : ಬಸ್ ನಲ್ಲಿ ಕುಳಿತು ಮಾತನಾಡಿದ ಬಳಿಕ ಅಟ್ಟಾಡಿಸಿ ಬರ್ಬರ ಹತ್ಯೆ – ಮಾತನಾಡಲು ಬಂದವನು ಸಿಟ್ಟಾಗಿದ್ಯಾಕೆ ಗೊತ್ತಾ ?

Advertisement

ಬಂಟ್ವಾಳ, ಜು. 17 : ಚೇತನ್ ನ ಕ್ರೂರ ಕೃತ್ಯಕ್ಕೆ ಬಲಿಯಾದ ಅಮಾಯಕ ಯುವತಿ ಲಾವಣ್ಯ ಎಂದಿನಂತೆ ತನ್ನ ಕೆಲಸ ಮುಗಿಸಿ, ಮನೆ ಕಡೆ ತೆರಳುವುದಕ್ಕೆ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕಕ್ಯಪದವು ತೆರಳುವ ಬಸ್ ನಲ್ಲಿ ಕುಳಿತ್ತಿದ್ದಳು.

Advertisement

ತನ್ನ ಪಾಡಿಗೆ ತಾನು ಕುಳಿತ್ತಿದ್ದ ಸಂದರ್ಭದಲ್ಲಿ ಕಾರನ್ನು ಬೇರೊಂದು ಕಡೆ ನಿಲ್ಲಿಸಿ, ಬಸ್ ನೊಳಗಡೆ ಬಂದಂತಹ ಆರೋಪಿ ಚೇತನ್ ಯುವತಿಯ ಜೊತೆ ಮಾತನಾಡಲು ಪಕ್ಕದಲ್ಲೇ ಕುಳಿತ್ತಿದ್ದಾನೆ. ಗಾಬರಿಗೊಂಡ ಲಾವಣ್ಯ “ನೀನು ಹೋಗು, ಇಲ್ಲದಿದ್ದರೆ ಅಕ್ಕ-ಬಾವನಿಗೆ ತಿಳಿಸುತ್ತೇನೆ” ಎಂದು ಹೇಳಿದ್ದಾಳೆ. ಅಷ್ಟಕ್ಕೆ ಮೌನವಾಗಿಯೇ ಆರೋಪಿ ಚೇತನ್ ಬಸ್ ನಿಂದ ಇಳಿದು ಹೋಗಿದ್ದಾನೆ.

Advertisement

ಕಾರ್ ಬಳಿ ತೆರಳಿ ತಲ್ವಾರ್ ಹಿಡಿದು ಬಂದ ಚೇತನ್ :

ಬಸ್ ನಿಂದ ಇಳಿದು ಹೋದಂತಹ ಚೇತನ್ ಮರಳಿ ಬಸ್ ನೊಳಗಡೆ ಬಂದಿದ್ದು ಕೈಯ್ಯಲ್ಲಿ ತಲ್ವಾರ್ ಹಿಡಿದುಕೊಂಡು. ಬಸ್ ನೊಳಗಡೆ ಬಂದ ತಕ್ಷಣ ಯುವತಿಯ ಕಡೆಗೆ ತಲ್ವಾರ್ ಬೀಸಿದ್ದಾನಂತೆ. ತಕ್ಷಣವೇ ತಲ್ವಾರ್ ದಾಳಿಯಿಂದ ತಪ್ಪಿಸಿಕೊಂಡ ಯುವತಿ, ಬಸ್ ನಿಂದ ಇಳಿದು ಓಡಿದ್ದಾಳೆ. ಆದರೂ, ಬಿಡದ ಸೈಕೋ ಕಿಲ್ಲರ್ ಚೇತನ್ ಆಕೆಯನ್ನು ಅಟ್ಟಾಡಿಸಿದ್ದಾನೆ. ಬಸ್ ನಿಂದ ಸುಮಾರು 20 ಮೀ. ತಲುಪುವಷ್ಟರಲ್ಲಿ ಯುವತಿ ಎಡವಿ ಬಿದ್ದಿದ್ದಾಳೆ. ಆ ವೇಳೆ ಚೇತನ್ ಯುವತಿಯ ಹಿಂಬದಿಯ ಭಾಗಕ್ಕೆ ತಲ್ವಾರ್ ನಿಂದ ಹೊಡೆದು ಬಿಟ್ಟಿದ್ದಾನೆ. ಯುವತಿಯು ಗಂಭೀರ ಗಾಯಗೊಂಡು ಬಿದ್ದ ಬಳಿಕವೂ ಕೂಡಾ ಸೈಕೋ ಕಿಲ್ಲರ್ ಮತ್ತೆ ದಾಳಿ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಲಾವಣ್ಯ, ವಿಲವಿಲನೆ ಒದ್ದಾಡಿ ಪ್ರಾಣ ಬಿಟ್ಟಿದ್ದಾಳೆ.

ಬಸ್ ನಲ್ಲಿಯೂ ಯಾರೂ ಇರಲಿಲ್ಲ :

ಲಾವಣ್ಯ ಬಸ್ ಹತ್ತಿದ ಸಂದರ್ಭದಲ್ಲಿ ಬಸ್ ನೊಳಗಡೆ ಅಥವಾ ಆಸುಪಾಸಿನಲ್ಲಿ ಯಾರೂ ಇರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ಇದೇ ಸಮಯವನ್ನು ಗಮನಿಸಿಕೊಂಡು ಸೈಕೋ ಕಿಲ್ಲರ್ ದಾಳಿ ನಡೆಸಿದ್ದಾನೆ.

ಹಾಡಹಗಲೇ ಯೋಜಿತವಾಗಿ ತಲ್ವಾರ್ ನಲ್ಲಿ ದಾಳಿ ನಡೆಸಿರುವ “ಸೈಕೋ ಕಿಲ್ಲರ್” ನನ್ನು ಎನ್ ಕೌಂಟರ್ ಅಥವಾ ಗಲ್ಲುಶಿಕ್ಷೆ ವಿಧಿಸಬೇಕೆಂಬ ಆಗ್ರಹಗಳು ಜಿಲ್ಲೆಯಾದ್ಯಂತ ಕೇಳಿ ಬರುತ್ತಿದೆ. ಹೀಗಾಗಿ, ಬಂಧನಕ್ಕೊಳಗಾಗಿರುವ ಆರೋಪಿ ಚೇತನ್ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ