ಕಲ್ಮಂಜ : ದಾರಿ ತಪ್ಪಿ ಬಂದಿದ್ದ ವ್ಯಕ್ತಿಗೆ ಸೂಕ್ತ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಯುವಕರು

ಕಲ್ಮಂಜ, ಮೇ 01 : ಧರ್ಮಸ್ಥಳಕ್ಕೆ ಬಂದು, ದಾರಿ ತಪ್ಪಿ ಕಲ್ಮಂಜ ಗ್ರಾಮದ ಕೊತ್ತಳಿಗೆ ಸೇತುವೆ ಬಳಿ ಇದ್ದ ಹಾವೇರಿ ಮೂಲದ ವ್ಯಕ್ತಿಯನ್ನು ಉಪಚರಿಸಿ ಸ್ಥಳೀಯ ಯುವಕರು ಮರಳಿ ಧರ್ಮಸ್ಥಳಕ್ಕೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.

ರಾತ್ರಿ 08 ಗಂಟೆ ಸುಮಾರಿಗೆ ಕೊತ್ತಳಿಗೆ ಸಮೀಪ ಆಯಾಸದಿಂದ ಕುಳಿತಿದ್ದ ವ್ಯಕ್ತಿಯನ್ನು ಕಂಡು ಉಪಚರಿಸಿದಾಗ ಹಾವೇರಿ ಮೂಲದವರು, ಧರ್ಮಸ್ಥಳದಿಂದ ದಾರಿ ತಪ್ಪಿ ಬಂದಿರುವುದಾಗಿ ತಿಳಿಸಿದ್ದಾರೆ.

ತಕ್ಷಣ ಕಾರ್ಯಪ್ರವೃತ್ತರಾದ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಗೌಡ ಕರಿಯನೆಲ, ಅಶೋಕ್ ನಾಯ್ಕ್ ಸತ್ಯನಪಲ್ಕೆ, ಲೋಹಿತ್ ಮದಿಮಲ್ ಕಟ್ಟೆ ಹಾಗೂ ದಿನೇಶ್ ಗೌಡ ಮೂಡಾಯಿಬೆಟ್ಟು ಅವರು ವ್ಯಕ್ತಿಯನ್ನು  ಧರ್ಮಸ್ಥಳ ದೇವಸ್ಥಾನಕ್ಕೆ ಮರಳಿ ಬಿಟ್ಟು, ಊರಿಗೆ ತೆರಳಲು ವ್ಯವಸ್ಥೆ ಮಾಡಿಕೊಟ್ಟು, ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಠಾಣೆಗೆ ಮಾಹಿತಿ ನೀಡಲಾಗಿದೆ.

ಯುವಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.