ಕುಣಿಗಲ್ : ತಾಳಿ ಕಟ್ಟುವ ವೇಳೆ ಕಲ್ಯಾಣಮಂಟಪಕ್ಕೆ ಮೊದಲ ಹೆಂಡತಿ ಎಂಟ್ರಿ – ಮುರಿದುಬಿತ್ತು ಎರಡನೇ ಮದುವೆ !

ಕುಣಿಗಲ್, ಫೆ. 09 : ಹೆಂಡತಿಗೆ ಕೈಕೊಟ್ಟು, ಮತ್ತೋರ್ವ ಯುವತಿಗೆ ತಾಳಿಕಟ್ಟುವ ವೇಳೆ ವಕೀಲರು ಹಾಗೂ ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ಬಂದ ಪತ್ನಿ ಎರಡನೇ ಮದುವೆ ತಡೆದ ಅಪರೂಪದ ಘಟನೆ ತಾಲೂಕಿನ ಶ್ರೀ ಕ್ಷೇತ್ರ ಎಡಿಯೂರಿನ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದಿದೆ.

Advertisement

ಬೆಂಗಳೂರು ರಾಜರಾಜೇಶ್ವರಿ ನಗರದ ಕ್ರೀಡಾ ತರಬೇತಿದಾರ ಎಸ್.ಪಿ ಹರೀಶ್ ಪ್ರಸಾದ್ ಹಾಗೂ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಹಲಗೂರು ಹೋಬಳಿ ನಿಟ್ಟೂರು ಗ್ರಾಮದ ಎನ್.ಎಸ್. ಪುಣ್ಯಶ್ರೀ ಅವರೊಂದಿಗೆ ಎರಡನೇ ಮದುವೆಯಾಗುತ್ತಿದ್ದ ವೇಳೆ ಮೊದಲ ಪತ್ನಿ ಲೇಪಾಕ್ಷಿ ಕಲ್ಯಾಣ ಮಂಟಪಕ್ಕೆ ಬಂದು ವಿವಾಹವನ್ನು ಸಿನಿಮಿಯಾ ರೀತಿಯಲ್ಲಿ ನಿಲ್ಲಿಸುವ ಮೂಲಕ ಮದುವೆ ಸಂಭ್ರಮದಲ್ಲಿ ಇದ್ದ ಕುಟುಂಬಕ್ಕೆ ಶಾಕ್ ನೀಡಿದ್ದಾರೆ.

ಎಸ್.ಪಿ ಹರೀಶ್ ಪ್ರಸಾದ್ ಹಾಗೂ ಎನ್.ಎಸ್ ಪುಣ್ಯಶ್ರೀ ಅವರ ಮದುವೆ ಫೆ. 7 ಶನಿವಾರ ಮತ್ತು ಫೆ 8 ಭಾನುವಾರ ನಿಶ್ಚಯವಾಗಿದ್ದು, ಅರತಕ್ಷತೆ ಹಾಗೂ ದೇವತಾ ಕಾರ್ಯ ಕೂಡ ನೆರವೇರಿತು. ಭಾನುವಾರ ಬೆಳಗ್ಗೆ ಮಹೂರ್ತ ಶಾಸ್ತ್ರಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಕಲ್ಯಾಣ ಮಂಟಪಕ್ಕೆ ಬಂದ ಪತ್ನಿ ಲೇಪಾಕ್ಷಿ ಮದುವೆ ನಿಲ್ಲಿಸಲು ಮುಂದಾದಾಗ ಮಾತಿನ ಚಕಮಕಿ ವಾಗ್ವಾದ ನಡೆಯಿತು, ಮಧ್ಯ ಪ್ರವೇಶಿಸಿದ ಅಮೃತ್ತೂರು ಪೊಲೀಸರು ಹಾಗೂ ವಕೀಲರು ಮದುವೆ ನಿಲ್ಲಿಸಿದರು.

ಹರೀಶ್ ಪ್ರಸಾದ್ ಮತ್ತು ಲೇಪಾಕ್ಷಿ ಅವರು ವ್ಯಾಸಂಗ ಮಾಡುತ್ತಿದ್ದ ವೇಳೆಯಲ್ಲೇ ಇಬ್ಬರು ಒಬ್ಬರನ್ನೊಂಬ್ಬರು ಪ್ರೀತಿಸಿ ನಂತರ 2014 ರಲ್ಲಿ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಮದುವೆ ಆಗಿದ್ದರು ಎನ್ನಲಾಗಿದೆ. ಹರೀಶ್ ಪ್ರಸಾದ್ ಮೊದಲ ಹೆಂಡತಿ ಲೇಪಾಕ್ಷಿಗೆ ವಿವಾಹ ವಿಚ್ಛೇದನ ನೀಡದೆ ಎರಡನೇ ಮದುವೆ ಮಾಡಿಕೊಳ್ಳಲು ಮುಂದಾದನು. ಲಗ್ನ ಪತ್ರಿಕೆ ಮುಂದ್ರಿಸಿ ಸ್ನೇಹಿತರಿಗೆ ಸಂಬಂಧಿಕರಿಗೆಲ್ಲಾ ನೀಡಿ ಮದುವೆಗೆ ಆಹ್ವಾನಿಸಿದ್ದ ಎನ್ನಲಾಗಿದೆ.

ಮೊದಲ ಹೆಂಡತಿ ಲೇಪಾಕ್ಷಿ ಮಾತನಾಡಿ, ನಾನು ಮತ್ತು ಹರೀಶ್ ಪ್ರಸಾದ್ ಕ್ರೀಡಾ ಚಟುವಟಿಕೆಯಲ್ಲಿ ಇದ್ದವರು, ಆ ಸಮಯದಲ್ಲಿ ಇಬ್ಬರ ನಡುವೆ ಪ್ರೇಮ ಉಂಟಾಗಿ ನಾಲ್ಕು ವರ್ಷ ಚೆನ್ನಾಗಿ ಇದ್ದೇವು, ನಮ್ಮ ಅತ್ತೆಯವರು ಮತ್ತೊಮ್ಮೆ ಮರು ಮದುವೆ ಮಾಡಿ ಕರೆದುಕೊಂಡು ಹೊದರು. ಅದಾದ ಬಳಿಕ ಸಾಂಸಾರಿಕ ಜಗಳ ಪ್ರಾರಂಭವಾಗಿತ್ತು, ಇದಾದ ಬಳಿಕ ನನಗೆ ಐದು ಭಾರಿ ಗರ್ಭಪಾತ ಮಾಡಿಸಿದರು. ನನ್ನನು ಸಂಪಾದನೆಗೆ ಮಾತ್ರ ಬಳಸಿಕೊಳ್ಳುತ್ತಿದ್ದರು. ವಿಚ್ಚೇಧನ ನೀಡದೆ ಮತ್ತೊಂದು ಮದುವೆಯಾಗುವ ವಿಚಾರ ತಿಳಿದು ಬಂದು ಮದುವೆ ನಿಲ್ಲಿಸಿದ್ದೇನೆ ಎಂದು ತಿಳಿಸಿದರು. ಹರೀಶ್ ಪ್ರಸಾದ್ ಮೊದಲ ಮಧುವೆ ಆಗಿರುವುದನ್ನು ಮುಚ್ಚಿಟ್ಟಿದ್ದಾರೆ ಎಂದು ಪುಣ್ಯ ಶ್ರೀ ಅಮೃತ್ತೂರು ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಜಿಎಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.