ಕೇರಳ : ಮದುವೆ ರಿಸೆಪ್ಷನ್‌ನಲ್ಲಿ ಗೆಳೆಯರ ‘ಸರ್ಪ್ರೈಸ್ ಗಿಫ್ಟ್’ಗೆ ವೇದಿಕೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದ ನವವಧು!

ಕೇರಳ, ಮಾ. 17 : ಕೊಚ್ಚಿಯ ವೈಟ್ಟಿಲ ಮೂಲದ ಯುವತಿಯ ಮತ್ತು ಯುವಕನ ಮದುವೆ ರಿಸೆಪ್ಷನ್ ಕಾರ್ಯಕ್ರಮ ಭಾನುವಾರ ಸಂಜೆ ತ್ರಿಪುಣಿತುರದ ಖಾಸಗಿ ಹಾಲ್‌ನಲ್ಲಿ ಅದ್ಧೂರಿಯಾಗಿ ನಡೆಯುತ್ತಿತ್ತು. ವಧು-ವರರು ಮೆರವಣಿಗೆಯ ಮೂಲಕ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ವರನ ಸ್ನೇಹಿತರು ‘ಸರ್ಪ್ರೈಸ್’ ಎಂದು ಭಾರೀ ಶಬ್ದ ಮಾಡುವ ಪಟಾಕಿಗಳನ್ನು ಏಕಾಏಕಿ ಸಿಡಿಸಿದ್ದಾರೆ.

Advertisement

ನಿರೀಕ್ಷೆಯೇ ಇರದ ಈ ಭಯಾನಕ ಶಬ್ದಕ್ಕೆ ವಧು ಗಾಬರಿಗೊಂಡು ನಡುಗಿ, ಕ್ಷಣಾರ್ಧದಲ್ಲಿ ವೇದಿಕೆಯ ಮೇಲೆ ಕುಸಿದು ಬಿದ್ದರು. ಸಂಭ್ರಮದ ವಾತಾವರಣ ತಕ್ಷಣ ಆತಂಕಕ್ಕೆ ತಿರುಗಿತು. ವರ ಮತ್ತು ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಕಾರಿನಲ್ಲಿ ಹತ್ತಿರದ ತ್ರಿಪುಣಿತುರ ತಾಲೂಕು ಆಸ್ಪತ್ರೆಗೆ ಕರೆದೊಯ್ದರು.

ರಾತ್ರಿ ಸುಮಾರು 7:30ಕ್ಕೆ ಆಸ್ಪತ್ರೆಗೆ ದಾಖಲಾದ ವಧುವಿಗೆ ವೈದ್ಯರು ತಕ್ಷಣ ಚಿಕಿತ್ಸೆ ನೀಡಿ ಡ್ರಿಪ್ ಹಾಕಿದರು. ಸ್ವಲ್ಪ ಸಮಯದ ನಂತರ ಆಕೆ ಸಂಪೂರ್ಣ ಚೇತರಿಸಿಕೊಂಡಳು. ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ ಎಂದು ವೈದ್ಯರು ತಿಳಿಸಿದರು.

ಆಸ್ಪತ್ರೆಯಿಂದ ಚೇತರಿಸಿಕೊಂಡ ವಧು ಮತ್ತು ವರ ಮತ್ತೆ ರಿಸೆಪ್ಷನ್ ಹಾಲ್‌ಗೆ ಮರಳಿದರು. ಅರೆಬರೆ ನಿಂತಿದ್ದ ಕಾರ್ಯಕ್ರಮವನ್ನು ಅಂತಿಮವಾಗಿ ಪೂರ್ಣಗೊಳಿಸಲಾಯಿತು. ಆದರೆ ಸ್ನೇಹಿತರ ಈ ಅತಿಯಾದ ‘ಸರ್ಪ್ರೈಸ್’ ಕುಟುಂಬಸ್ಥರು ಮತ್ತು ಅತಿಥಿಗಳಲ್ಲಿ ದೊಡ್ಡ ಅಸಮಾಧಾನ ಮೂಡಿಸಿತು.

ಮದುವೆಗಳಲ್ಲಿ ಹೆಚ್ಚುತ್ತಿರುವ ಯಡವಟ್ಟುಗಳು ಇತ್ತೀಚಿನ ದಿನಗಳಲ್ಲಿ ಮದುವೆ ಸಮಾರಂಭಗಳಲ್ಲಿ ಸಣ್ಣ ವಿಷಯಗಳಿಗೂ ದೊಡ್ಡ ಗಲಾಟೆಗಳು ನಡೆಯುತ್ತಿವೆ. ಕೇರಳದಲ್ಲೇ ಇತ್ತೀಚೆಗೆ ಮದುವೆ ಊಟದಲ್ಲಿ ‘ಹಪ್ಪಳ’ ನೀಡಿಲ್ಲ ಎಂಬ ಕಾರಣಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದು ವೀಡಿಯೊ ವೈರಲ್ ಆಗಿತ್ತು. ಅಂತಹ ಘಟನೆಗಳ ಬೆನ್ನಲ್ಲೇ ಈಗ ಈ ಪಟಾಕಿ ಘಟನೆ ವರದಿಯಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ‘ಸಂಭ್ರಮದ ಹೆಸರಿನಲ್ಲಿ ಇತರರಿಗೆ ತೊಂದರೆಯಾಗುವ ಅಥವಾ ಅಪಾಯ ತರುವ ಕೆಲಸಗಳನ್ನು ಮಾಡಬಾರದು’ ಎಂದು ಕಿಡಿಕಾರುತ್ತಿದ್ದಾರೆ. ‘ಸರ್ಪ್ರೈಸ್ ಎಂದರೆ ಸಂತೋಷ ಕೊಡುವುದು, ಭಯ ಹುಟ್ಟಿಸುವುದಲ್ಲ’ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಮದುವೆ ಎಂಬುದು ಸಂತೋಷದ ಕ್ಷಣವಾಗಿರಬೇಕೇ ಹೊರತು ಭಯದ ಅಥವಾ ಆತಂಕದ ಕ್ಷಣವಾಗಬಾರದು ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.