ಬೆಳ್ತಂಗಡಿ, ಆ. 21 : ಧ್ವನಿ ನ್ಯೂಸ್ ನ ಸಮಸ್ತ ವೀಕ್ಷಕರಿಗೆ ವರಮಹಾಲಕ್ಷ್ಮೀ ಹಬ್ಬದ ಹಾರ್ದಿಕ ಶುಭಾಷಯಗಳು
ವರಮಹಾಲಕ್ಷ್ಮೀ ಹಬ್ಬವು ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ಶ್ರಾವಣ ಮಾಸದ ಹುಣ್ಣಿಮೆಗೆ ಮುನ್ನ ಬರುವ ಶುಕ್ರವಾರದಂದು ಇದನ್ನು ಆಚರಿಸಲಾಗುತ್ತದೆ. ದೇವಿಯನ್ನು ಅಷ್ಟಲಕ್ಷ್ಮಿ ಸ್ವರೂಪಳಾಗಿ ಪೂಜಿಸಿ ಧನ, ಧಾನ್ಯ ಮತ್ತು ಸಮೃದ್ಧಿಯನ್ನು ಕೋರಿ ಈ ವ್ರತವನ್ನು ಆಚರಿಸಲಾಗುತ್ತದೆ. ಹೆಚ್ಚಾಗಿ ಮುತ್ತೈದೆಯರು (ಮಹಿಳೆಯರು) ತಮ್ಮ ಕುಟುಂಬದ ಆರೋಗ್ಯ ಮತ್ತು ಶ್ರೇಯಸ್ಸಿಗಾಗಿ ಈ ಪೂಜೆಯನ್ನು ಕೈಗೊಳ್ಳುತ್ತಾರೆ.




