ಮಂಗಳೂರು, ಜು. 9 : 10 ಶಾಲೆಗಳಿಂದ ಮಳೆ ರಜೆ ಆದೇಶ ಉಲ್ಲಂಘನೆ – ಜಿಲ್ಲಾಡಳಿತದಿಂದ ಕಠಿಣ ಕ್ರಮ

Advertisement

ಮಂಗಳೂರು, ಜು. 9 : ದಕ್ಷಿಣ ಕನ್ನಡದಲ್ಲಿ ಮಳೆ ಜೋರಾದ ಹಿನ್ನೆಲೆ ಮೂರು ದಿನ ಶಾಲೆ-ಕಾಲೇಜಿಗೆ ರಜೆ ನೀಡಲಾಗಿತ್ತು. ಆದರೆ ಶಾಲಾ- ಕಾಲೇಜುಗಳು ರಜೆ ನೀಡುವ ವಿಚಾರದಲ್ಲಿ ಹಿಂದೇಟು ಹಾಕಿದ್ದು, ಹಲವು ಕಡೆ ಶಾಲೆಗಳನ್ನ ನಡೆಸಿದೆ. ಇದೀಗ ಈ ಶಾಲೆಗಳ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

Advertisement

ಭಾರೀ ಮಳೆ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಸತತವಾಗಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು. ಆದ್ರೆ ಈ ಬಗ್ಗೆ ನಿರ್ಲಕ್ಷ್ಯ ತೋರಿದ ಕೆಲ ಖಾಸಗಿ ಶಾಲೆಗಳು ರಜೆ ದಿನವೂ ಶಾಲೆ ನಡೆಸಿರುವ ಬಗ್ಗೆ ದೂರು ಬಂದಿದ್ದು, ಹೆಚ್ಚಾಗಿ ವಿದ್ಯಾರ್ಥಿಗಳೇ ಈ ಬಗ್ಗೆ ದೂರು ಕೊಟ್ಟಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಈ ಎಲ್ಲಾ ಶಾಲೆಗಳಿಗೆ ನೋಟಿಸ್‌ ನೀಡಿದೆ.

Advertisement

ಮೂರು ಬಾರಿಯೂ ರಜೆ ಕೊಡದೆ ನಿರ್ಲಕ್ಷ್ಯ

ದಕ್ಷಿಣ ಕನ್ನಡದಲ್ಲಿ ಮಳೆ ಜೋರಾದ ಹಿನ್ನೆಲೆ ಮೂರು ದಿನ ಶಾಲೆ-ಕಾಲೇಜಿಗೆ ರಜೆ ನೀಡಲಾಗಿತ್ತು. ಆದರೆ ಶಾಲಾ- ಕಾಲೇಜುಗಳು ರಜೆ ನೀಡುವ ವಿಚಾರದಲ್ಲಿ ಹಿಂದೇಟು ಹಾಕಿದ್ದು, ಹಲವು ಕಡೆ ಶಾಲೆಗಳನ್ನ ನಡೆಸಿದೆ. ಬಳಿಕ ಮೊದಲಿಗೆ ಜಿಲ್ಲಾಡಳಿತ ಈ ಶಾಲೆ ಕಾಲೇಜುಗಳಿಗೆ ಎಚ್ಚರಿಕೆ ನೀಡಿ ರಜೆ ಘೋಷಣೆ ಮಾಡುವಂತೆ ಸೂಚನೆ ನೀಡಿತ್ತು. ನಂತರ ಎರಡನೇ ಬಾರಿ ಕೂಡ ರಜೆ ಘೋಷಣೆ ಮಾಡಿದಾಗ ಕೂಡ ಇದೇ ರೀತಿ ನಡೆದಾಗಲೂ ಎಚ್ಚರಿಕೆ ನೀಡಿ ಶಾಲೆಗಳನ್ನು ಮುಚ್ಚಿಸುವ ಕೆಲಸ ಮಾಡಿತ್ತು. 2 ಬಾರಿಯಷ್ಟೇ ಅಲ್ಲ ಮೂರನೇ ರಜೆ ಘೋಷಣೆ ಮಾಡಿದಾಗ ಮತ್ತೆ ಉಲ್ಲಂಘಿಸಿ ಕ್ಲಾಸ್ ನಡೆಸಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ