ಬೆಳ್ತಂಗಡಿ : ಮನೆ ಸಮೀಪದಲ್ಲೇ ಕಾಡಾನೆ ಠಿಕಾಣಿ – ಮನೆಮಂದಿಗೆ ಆತಂಕ

ಮಲವಂತಿಗೆ, ಜ. 19 : ಮಲವಂತಿಗೆ ಗ್ರಾಮದ ದಿಡುಪೆಯಲ್ಲಿ ರವಿವಾರ ಸಂಜೆಯ ವೇಳೆಗೆ ಮನೆಯೊಂದರ ಸಮೀಪದಲ್ಲೇ ಆನೆಯೊಂದು ಠಿಕಾಣಿ ಹೂಡಿ ಮನೆಮಂದಿಯನ್ನು ಆತಂಕಕ್ಕೀಡು ಮಾಡಿದೆ. ದಿಡುಪೆಯ ರುಕ್ಮಯ್ಯ ಗೌಡ ಅವರ ಮನೆ ಸಮೀಪ ರವಿವಾರ ಸಂಜೆ 6ರ ಸುಮಾರಿಗೆ ಕಾಡಾನೆ ಕಂಡು ಬಂದಿದ್ದು ಪಟಾಕಿ ಸಿಡಿಸಿ ಆನೆಯನ್ನು ಓಡಿಸಲು ಪ್ರಯತ್ನಪಟ್ಟರೂ ಅದು ಕದಲದೆ ಅಲ್ಲೇ ನಿಂತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Advertisement

ಜ. 17ರ ರಾತ್ರಿ ಕಾಡಾನೆ ದಿಡುಪೆಯ ಜನತಾ ಕಾಲನಿ, ಪೇಟೆ ಪರಿಸರ ಸೇರಿದಂತೆ ಹಲವೆಡೆ ಜನನಿಬಿಡ ಪ್ರದೇಶಗಳಲ್ಲೇ ಸಂಚರಿಸಿದೆ ಎನ್ನಲಾಗಿದೆ. ಅಲ್ಲದೆ, ತಾಲೂಕಿನ ಹಲವು ಭಾಗಗಳಲ್ಲಿ ಕಾಡಾನೆ ಸಂಚಾರ ಕಂಡು ಬಂದಿದೆ. ಜೊತೆಯಲ್ಲಿ ಚಿರತೆಯ ಹಾವಳಿಯೂ ಹೆಚ್ಚಾಗಿದ್ದು, ಜನತೆ ಆತಂಕ ಪಡುವಂತಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.