ದೆಹಲಿ, ಜು. 24 : ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹೊಸ ಮಸೂದೆಯನ್ನ ತರೋದಾಗಿ ಘೋಷಿಸಿದರು. ಈ ವೀಡಿಯೋ ಸದ್ಯ 230 ಮಿಲಿಯನ್ ವೀಕ್ಷಕರನ್ನು ಪಡೆದಿದೆ.
ಸಿಜೆಪಿ ಈ ಹಿಂದೆ ನಮ್ಮ ಸಾಮಾಜಿಕ ಜಾಲತಾಣದ ಮುಂದೆ ಭಾರತದಲ್ಲಿ ಬೇರೆಯವರ ಸಾಮಾಜಿಕ ಜಾಲತಾಣವು ನಿಲ್ಲಲಾರದು ಎಂಬರ್ಥದಲ್ಲಿ ಚಾಲೆಂಜ್ ಹಾಕಿತ್ತು. ಇದೇ ಚಾಲೆಂಜ್ ಗೆ ರಿವೇಂಜ್ ಎಂಬಂತೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೋ ಸಂದೇಶವು 24 ಗಂಟೆ ಕಳೆಯುವುದರೊಳಗಾಗಿ 230 ಮಿಲಿಯನ್ ವೀಕ್ಷಕರನ್ನು ಪಡೆದಿದೆ. ಇದು, ವಿರೋಧ ಪಕ್ಷದ ಹುಬ್ಬೇರುವಂತೆಯೂ ಮಾಡಿದೆ.

ವಿಡಿಯೋ ಮೂಲಕ ಮೋದಿ ಮಹತ್ವದ ಸಂದೇಶ
“ಪ್ರಶ್ನೆಪತ್ರಿಕೆ ಸೋರಿಕೆ ಘಟನೆ ಬೆಳಕಿಗೆ ಬಂದ ತಕ್ಷಣ, ಸರ್ಕಾರ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿತು. ನಾವು ಅಪರಾಧಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದೇವೆ. ನಾವು 22 ಲಕ್ಷ ಅಭ್ಯರ್ಥಿಗಳಿಗೆ ತಕ್ಷಣ ಪರೀಕ್ಷೆಯನ್ನು ಮರು ನಡೆಸಿದ್ದೇವೆ ಮತ್ತು ಫಲಿತಾಂಶಗಳನ್ನು ಘೋಷಿಸಿದ್ದೇವೆ. ಈ ಅಪರಾಧಿಗಳ ವಿಚಾರಣೆಗೆ ತ್ವರಿತ ನ್ಯಾಯಾಲಯಗಳು ಮತ್ತು ಕಠಿಣ ಶಿಕ್ಷೆಗಳನ್ನು ಖಚಿತಪಡಿಸಿಕೊಳ್ಳಲು ಕರಡು ಮಸೂದೆಯನ್ನು ಸಿದ್ಧಪಡಿಸುವಂತೆ ನಾನು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ.
ಪ್ರಧಾನಿ ಮೋದಿ ಸಂದೇಶಕ್ಕೆ ಯುವಜನತೆಯಿಂದ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೈಗೊಂಡ ನಿರ್ಧಾರಗಳನ್ನು ದೇಶದ ಯುವಜನತೆ ಮುಕ್ತ ಮನಸ್ಸಿನಿಂದ ಸ್ವಾಗತಿಸಿತ್ತು. ಇದಕ್ಕೆ ಸಾಕ್ಷಿಯೆಂಬಂತೆ 230 ಮಿಲಿಯನ್ ವೀಕ್ಷಕರನ್ನು ಪಡೆದಿದೆ.


