ಕೇರಳ : ಮೊನಾಲಿಸಾ ಬೋಂಸ್ಲೆ ನಾಪತ್ತೆ – ತನಿಖೆಯ ದಾರಿ ತಪ್ಪಿಸುವ ಸಂಚು ಎಂದ ಮೊನಾಲಿಸಾ ತಾಯಿ

ಕೇರಳ, ಏ. 13 : ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿ ಮೊನಾಲಿಸಾ ಬೋಂಸ್ಲೆ ರಾತ್ರೋರಾತ್ರಿ ಫೇಮಸ್ ಆಗಿದ್ದು ಗೊತ್ತೇಯಿದೆ. ತನ್ನ ಸುಂದರ ಕಣ್ಣುಗಳಿಂದಲೇ ಮೋಡಿ ಮಾಡಿ, ಫೇಮಸ್ ಚೆಲುವೆ ಇದೀಗ ದಿಢೀರನೆ 6 ತಿಂಗಳಿನಿಂದ ಪ್ರೀತಿಸುತ್ತಿದ್ದ ಮುಸ್ಲಿಂ ಯುವಕ ಫರ್ಮಾನ್ ಎಂಬುವವನ ಜೊತೆ ಪೋಷಕರ ವಿರೋಧದ ನಡುವೆ ಕೇರಳದಲ್ಲಿ ಮೊನಾಲಿಸಾ ಮದುವೆ ನಡೆದಿತ್ತು. ಈ ಘಟನೆ ಹಲವಾರು ತಿರುವುಗಳನ್ನು ಪಡೆದುಕೊಂಡಿತ್ತು. ಆದರೆ ಇದೀಗ ಅಚ್ಚರಿ ಎಂಬಂತೆ ಮನಾಲಿಸಾ ತನ್ನ ಪತಿಯನ್ನು ಬಿಟ್ಟು ಓಡಿ ಹೋಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

ಮನಾಲಿಸಾ ಮತ್ತು ಫರ್ಮಾನ್ ಮದುವೆಯಾದ ಬೆನ್ನಲ್ಲೇ ಮುನಾಲಿಸಾಹಳಿಗೆ ಇನ್ನೂ 18 ವರ್ಷ ತುಂಬಿಲ್ಲ, ಅವಳು ಇನ್ನು ಅಪ್ರಾಪ್ತೇ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಿರುವಾಗ ಈ ಲವ್ ಸ್ಟೋರಿ ಇನ್ನೊಂದು ತಿರುವು ಪಡೆದಿದ್ದು ಮೊನಾಲಿಸಾ ಕಾಣೆಯಾಗಿದ್ದಾಳೆ ಎಂದು ಫರ್ಮಾನ್ ಖಾನ್ ಅಲವತ್ತುಕೊಂಡಿದ್ದಾರೆ. ಈ ಕುರಿತು ವಿಡಿಯೋ ಮೂಲಕ ಮಾಹಿತಿಯನ್ನು ಹಂಚಿಕೊಂಡಿರುವ ಫರ್ಮಾನ್, ಮೊನಾಲಿಸಾ ಕಾಣೆಯಾಗಿದ್ದಾಳೆ ಎಂದು ಹೇಳಿದ್ಧಾರೆ.

ಈ ಕುರಿತಾಗಿ ಮುನಾಲಿಸಾ ಗಂಡ ಫರ್ಮನ್ ವಿಡಿಯೋ ಮಾಡಿದ್ದು, ಅದರಲ್ಲಿ ಮೊನಾಲಿಸಾನ ಹುಡುಕಿಕೊಂಡು ರಾಜಸ್ಥಾನದ ಪುಷ್ಕರ್‌ಗೆ ಬಂದಿರುವುದಾಗಿ ಕೂಡ ಫರ್ಮಾನ್ ಖಾನ್ ಹೇಳಿದ್ದು, ಮೊನಾಲಿಸಾನ ಹುಡುಕುವ ಪ್ರಯತ್ನ  ಮಾಡುತ್ತಿರುವುದಾಗಿ ಹೇಳಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಮೊನಾಲಿಸಾ ಅವರ ತಾಯಿ ಲತಾ ಭೋಸ್ಲೆ ಇದು ತನಿಖೆಯ ದಾರಿ ತಪ್ಪಿಸುವ ಸಂಚು ಎಂದು ಹೇಳಿದ್ದಾರೆ.ಎಲ್ಲೇ ಇದ್ದರೂ ದಯಮಾಡಿ ಮನೆಗೆ ಬಾ ಎಂದು ಕೂಡ ಮೊನಾಲಿಸಾ ಬಳಿ ಮನವಿಯನ್ನು ಮಾಡಿಕೊಂಡಿರುವ ಅವರ ತಾಯಿ ಲತಾ, ನಾವೆಲ್ಲ ನಿನ್ನ ಜೊತೆ ಇದ್ದೇವೆ, ಹೆದರಬೇಡ ಎಂದು ಹೇಳಿದ್ದಾರೆ. ಮಗಳ ಸುರಕ್ಷತೆಗಾಗಿ ಪೊಲೀಸರಲ್ಲಿ ಮತ್ತು ಸರ್ಕಾರದಲ್ಲಿ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.

Advertisement
Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.