ಉತ್ತರ ಪ್ರದೇಶ : ಅತ್ತೆಯ ಅಂತ್ಯಕ್ರಿಯೆ ಸಿದ್ಧತೆಗೆ ಆಗಮಿಸಿದ ಆಳಿಯನನ್ನು ಎಳೆದೊಯ್ದ ಮೊಸಳೆ !

ಉತ್ತರ ಪ್ರದೇಶ, ಮೇ 21 : ಅನಾರೋಗ್ಯದಿಂದ ನಿಧನ ಹೊಂದಿದ ಅತ್ತೆಯ ಅಂತ್ಯಕ್ರಿಯೆಗೆ ನದಿ ತೀರದಲ್ಲಿ ಸಿದ್ಧತೆ ನಡೆಸುತ್ತಿದ್ದ ವೇಳೆ ಅಳಿಯನನ್ನು ಮೊಸಳೆಯೊಂದು ಎಳೆದೊಯ್ದಿರುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಗೋಂಡಾದಲ್ಲಿ ಬುಧವಾರ (ಮೇ.20) ನಡೆದಿದೆ.

Advertisement

ಮೃತ ವ್ಯಕ್ತಿಯನ್ನು ಗ್ರೇಟರ್ ನೋಯ್ಡಾದ ನಿವಾಸಿಯಾದ ದೀಪಕ್ ಶರ್ಮಾ (30), ಎಂದು ಗುರುತಿಸಲಾಗಿದೆ.

ಬುಧವಾರ ಮಧ್ಯಾಹ್ನ ಸುಮಾರು 12 ಗಂಟೆಯಾ ವೇಳೆಗೆ ಸರಯೂ ನದಿ ತೀರದಲ್ಲಿ ದೀಪಕ್ ಹಾಗೂ ಇತರರು ನಿಧನ ಹೊಂದಿದ ಅತ್ತೆಯ ಚಿತೆಗಾಗಿ ಹೊಂಡ ತೋಡುತ್ತಿದ್ದರು. ಹೊಂಡ ತೋಡಿದ ನಂತರ, ದೀಪಕ್ ಕೈ ತೊಳೆಯಲು ಸರಯೂ ನದಿ ತೀರಕ್ಕೆ ಹೋಗಿದ್ದಾರೆ ಈ ವೇಳೆ ದೀಪಕ್ ತಲೆಗೆ ಬಾಯಿ ಹಾಕಿದ ದೈತ್ಯ ಮೊಸಳೆ ಕ್ಷಣಾರ್ಧದಲ್ಲಿ ಆತನನ್ನು ನೀರಿನೊಳಗೆ ಎಳೆದೊಯ್ದಿದೆ. ತೀರದಲ್ಲಿದ್ದ ಜನರು ಕಿರುಚಾಡುತ್ತಲೇ ಇದ್ದರು. ಆದರೆ ಭಯದಿಂದಾಗಿ ಯುವಕನನ್ನು ರಕ್ಷಿಸಲು ಯಾರೂ ಧೈರ್ಯ ಮಾಡಲಿಲ್ಲ.

ಪತ್ತೆಯಾದ ಮೃತದೇಹ:

ಘಟನೆ ನಡೆದ ತಕ್ಷಣ ಸ್ಥಳೀಯ ಪೊಲೀಸರು ಹಾಗೂ ಎಸ್‌ಡಿಆರ್‌ಎಫ್ (SDRF) ಸಿಬ್ಬಂದಿ ಸುದೀರ್ಘ ಕಾರ್ಯಾಚರಣೆ ನಡೆಸಿದ್ದರು. ಸುಮಾರು 24 ಗಂಟೆಗಳ ಸತತ ಹುಡುಕಾಟದ ಬಳಿಕ, ಘಟನಾ ಸ್ಥಳದಿಂದ ಸುಮಾರು 2.5 ಕಿಲೋಮೀಟರ್ ದೂರದಲ್ಲಿ ದೀಪಕ್ ಅವರ ಮೃತದೇಹ ಪತ್ತೆಯಾಗಿದೆ. ಮೃತ ದೀಪಕ್ ಅವರಿಗೆ ಪತ್ನಿ ಹಾಗೂ 4 ವರ್ಷದ ಹೆಣ್ಣು ಮಗಳಿದ್ದಾಳೆ. ಅತ್ತೆಯ ಸಾವಿನ ಬೆನ್ನಲ್ಲೇ ಅಳಿಯನೂ ಮೊಸಳೆಗೆ ಬಲಿಯಾಗಿರುವುದು ಇಡೀ ಕುಟುಂಬವನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.