ಬೆಳ್ತಂಗಡಿ, ಆ. 13 : ಇಲ್ಲಿನ ಬಹುತೇಕ ಕುಟುಂಬಗಳಿಗೆ ಕೃಷಿಯೇ ಆಧಾರ. ಅದು ಹೊರತುಪಡಿಸಿದರೆ ಕೃಷಿ ಕೂಲಿ ಕೆಲಸ. ಅಡಕೆ, ರಬ್ಬರ್, ತೆಂಗು, ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಜತೆಗೆ ಪಶು ಸಂಗೋಪನೆಯೂ ಇದೆ. ಹಾಗಾಗಿ ಕೃಷಿ ಭೂಮಿ ಜೀವನಾಧಾರ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಗ್ರಾಮೀಣ) ನಾಗೇಶ್ ಕುಮಾರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗಿರುವಾಗ ಕಸ್ತೂರಿ ರಂಗನ್ ಜಾರಿಯಾದರೆ ಕೃಷಿ ಚಟು ವಟಿಕೆಗಳಿಗೇ ನಿರ್ಬಂಧಗಳು ಬಂದರೆ ರೈತರ ಪಾಡೆನು ಎಲ್ಲಿಗೆ ಹೋಗುವುದು ಎಂಬುದು ಗ್ರಾಮಸ್ಥರ ಪ್ರಶ್ನೆ. ಸೂಕ್ಷ್ಮ ವಲಯವಿದ್ದರೆ ಅದನ್ನು ಕಾಡಿನ ಒಳಭಾಗಕ್ಕೆ ಸೀಮಿತಗೊಳಿಸಬೇಕು ಜನರು ವಾಸಿಸುವ ಪ್ರದೇಶಗಳಿಗೆ ಅದನ್ನು ಅನ್ವಯಿಸಬಾರದು.
ಇಲ್ಲವಾದರೆ ನಾವು ಬದುಕುವು ದಾದರೂ ಹೇಗೆ? ಎಂದು ಕೇಂದ್ರ ಸರಕಾರವನ್ನು ಎಚ್ಚಾರಿಸಿದ್ದಾರೆ. ಪಶ್ಚಿಮ ಘಟ್ಟದ ಮಡಿಲಲ್ಲಿ ತಲೆತಲಾಂತರಗಳಿಂದ ಬದುಕುತ್ತಿರುವವರನ್ನು ಪರಿಸರ ಸಂರಕ್ಷಣೆ ಹೆಸರಿನಲ್ಲಿ ಬೀದಿ ಪಾಲು ಮಾಡಿದರೆ ಅವರು ಏನು ಮಾಡಬೇಕು ಎಂಬುದನ್ನು ಕೇಂದ್ರ ಸರಕಾರ ಚಿಂತಿಸಬೇಕು. ಕೇಂದ್ರ ಸರ್ಕಾರ ಕೂಡಲೇ ಕರಡು ಅಧಿಸೂಚನೆಯನ್ನು ಮರುಪರಿಶೀಲನೆ ನಡೆಸಬೇಕು. ಕಾನೂನು ಜಾರಿಯಾದರೆ ತಾಲೂಕಿನ ಅಭಿವೃದ್ಧಿ ಕುಂಟಿತವಾಗುತ್ತದೆ. ರೈತರು ಬೀದಿಪಲಾಗುವುದರಲ್ಲಿ ಸಂಶಯವೇ ವಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಗ್ರಾಮೀಣ) ನಾಗೇಶ್ ಕುಮಾರ್ ಗೌಡ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.




