ನಕಲಿ ಮದ್ಯ ಸೇವಿಸಿ 48 ಗಂಟೆಗಳಲ್ಲಿ 18 ಮಂದಿ ಸಾವು – ತನಿಖೆ ಚುರುಕುಗೊಳಿಸಿದ ಪೊಲೀಸರು !

ಪುಣೆ, ಮೇ. 29 : ಮೆಥನಾಲ್‌ ಮಿಶ್ರಿತ ನಕಲಿ ಮದ್ಯ ಸೇವಿಸಿ ಕಳೆದ 48 ಗಂಟೆಗಳಲ್ಲಿ ಬರೊಬ್ಬರಿ 18 ಜನರು ಪ್ರಾಣ ಕಳೆದುಕೊಂಡು. ಹತ್ತಕ್ಕೂ ಹೆಚ್ಚು ಮಂದಿ ಆಸ್ಪತ್ರೆ ದಾಖಲಾಗಿರುವ ಘಟನೆಯೊಂದು ಮಹಾರಾಷ್ಟ್ರದ ಪುಣೆ ಮತ್ತು ಪಿಂಪ್ರಿ-ಚಿಂಚವಾಡ ಭಾಗದಲ್ಲಿ ಬೆಳಕಿಗೆ ಬಂದಿದೆ.

Advertisement

ಘಟನೆಗೆ ಸಂಬಂಧಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಪಿಂಪ್ರಿ ಚಿಂಚವಾಡದ ಫುಗೇವಾಡಿ ಮತ್ತು ದಾಪೋಡಿ ಪ್ರದೇಶಗಳಲ್ಲಿ 13 ಜನರು ಸಾವನ್ನಪ್ಪಿದ್ದರೆ, ಪುಣೆಯ ಹಡಪ್ಪರ್ ಮತ್ತು ಕಾಳೇಪದಲ್ ಭಾಗದಲ್ಲಿ ಐದು ಮಂದಿ ಮೃತಪಟ್ಟಿದ್ದಾರೆ. ಆರಂಭದಲ್ಲಿ ಪೊಲೀಸರು ಇವುಗಳನ್ನು ಬೇರೆ ಯಾವುದೋ ಕಾಯಿಲೆಗಳಿಂದ ಸಾವು ಸಂಭವಿಸಿರಬಹುದು ಎಂದು ಭಾವಿಸಿದ್ದರು. ಆದರೆ, ಮೃತಪಟ್ಟವರೆಲ್ಲರೂ ತೀವ್ರ ತಲೆಸುತ್ತು ಮತ್ತು ಹೊಟ್ಟೆನೋವಿನಂತಹ ಲಕ್ಷಣಗಳಿಂದ ಮೃತಪಟ್ಟಿದ್ದು ಇದು ವಿಷ ಪೂರಿತ ಮದ್ಯ ಸೇವನೆಯ ಪ್ರಾಥಮಿಕ ಲಕ್ಷಣವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿ ಕೈಸೇರಿದ ಬಳಿಕ ಎಚ್ಚೆತ್ತ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 105 (ಕೊಲೆಗೆ ಸಮಾನವಲ್ಲದ ಅಪರಾಧ ಪ್ರೇರಿತ ನರಹತ್ಯೆ), ಸೆಕ್ಷನ್ 123 (ಅಪರಾಧ ಎಸಗುವ ಉದ್ದೇಶದಿಂದ ಹಾನಿಕಾರಕ ಪದಾರ್ಥಗಳ ಮೂಲಕ ಗಾಯಗೊಳಿಸುವುದು) ಹಾಗೂ ಮಹಾರಾಷ್ಟ್ರ ಮದ್ಯಪಾನ ನಿಷೇಧ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಈ ಜಾಲದ ಪ್ರಮುಖ ಕೊಂಡಿಯಾಗಿದ್ದ ಯೋಗೇಶ್ ವಾಂಖೇಡೆ ಎಂಬಾತ ಪೊಲೀಸರ ಮುಂದೆ ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ. ಪುಣೆ ನಗರ ಮತ್ತು ಪಿಂಪ್ರಿ ಚಿಂಚವಡ ಪ್ರದೇಶಗಳಿಗೆ ತಾನೇ ಈ ರಾಸಾಯನಿಕ ಮಿಶ್ರಿತ ಮದ್ಯವನ್ನು ಸರಬರಾಜು ಮಾಡಿರುವುದಾಗಿ ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆರೋಪಿಯು ಮದ್ಯಕ್ಕೆ ಅತ್ಯಂತ ವಿಷಕಾರಿಯಾದ ಮೆಥನಾಲ್ ರಾಸಾಯನಿಕವನ್ನು ಬೆರೆಸಿದ್ದೇ ಈ ಸರಣಿ ಸಾವುಗಳಿಗೆ ಕಾರಣ ಎಂದು ರಾಜ್ಯ ಅಬಕಾರಿ ಇಲಾಖೆಯ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಕಾನಡೆ ತಿಳಿಸಿದ್ದಾರೆ. ಈ ಅಕ್ರಮ ಜಾಲದಲ್ಲಿ ಭಾಗಿಯಾಗಿರುವ ಇತರರನ್ನು ಪತ್ತೆಹಚ್ಚಲು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಪಿಂಪ್ರಿ-ಚಿಂಚವಡ ನಗರದ ಪೊಲೀಸ್ ಕಮಿಷನರ್ ವಿನಯ್ ಚೌಬೆ ಮಾತನಾಡಿ, ವಾಂಖೇಡೆ ಹೊರತುಪಡಿಸಿ ಇನ್ನು ಐವರು ಆರೋಪಿಗಳು ಪೊಲೀಸ್ ವಶದಲ್ಲಿದ್ದರೆ, ಇಬ್ಬರು ರಾಜ್ಯ ಅಬಕಾರಿ ಇಲಾಖೆಯ ಕಸ್ಟಡಿಯಲ್ಲಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸ್ಥಳೀಯರ ಆಕ್ರೋಶ:

ದಾಪೋಡಿ, ಪುಗೇವಾಡಿ ಮತ್ತು ಹಡಪ್ಪರ್ ಭಾಗಗಳಲ್ಲಿ ವ್ಯಾಪಕವಾಗಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದರೂ, ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಕಾನೂನು ತಿದ್ದುಪಡಿ ಮಸೂದೆ ಅಂಗೀಕಾರ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಭೀಕರ ರೈಲು ಅಪಘಾತ : ಕ್ರಿಕೆಟ್ ಮೈದಾನಕ್ಕೆ ತೂರಿ ಬಿದ್ದಿದ್ದ ವ್ಯಕ್ತಿಯ ರುಂಡ !

ತಾಲೂಕು, ಬೆಳ್ತಂಗಡಿ

ಉಪ್ಪಿನಂಗಡಿ : ನಿಂತಿದ್ದ ಟಿಪ್ಪರ್ ಹಿಂಬದಿಗೆ ಕಾರು ಢಿಕ್ಕಿ – 4 ವರ್ಷದ ಮಗು ಸೇರಿ ಐವರಿಗೆ ಗಾಯ

⚠️ Contents are protected on this website.