ಬೆಂಗಳೂರು : ಸಾರ್ವಜನಿಕವಾಗಿಯೇ ಹಸುವಿನ ಜೊತೆ ಅಸ್ವಾಭಾವಿಕ ಕ್ರಿಯೆಯಲ್ಲಿ ತೊಡಗಿದ್ದ ಕಾಮುಕನಿಗೆ ಧರ್ಮದೇಟು !

ನೆಲಮಂಗಲ, ಜು. 23 : ಸಾರ್ವಜನಿಕರು ಓಡಾಡುವ ಪ್ರದೇಶದಲ್ಲಿಯೇ ಹಸುವಿನ ಜೊತೆ ಅಸ್ವಾಭಾವಿಕ ಕ್ರಿಯೆಯಲ್ಲಿ ತೊಡಗಿದ್ದಾಗಾ ಸಿಕ್ಕಿಬಿದ್ದ ನಿಜಾಮುದ್ದೀನ್‌ ಎಂಬಾತನಿಗೆ ಸಾರ್ವಜನಿಕರೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ನಗರದ ವೀವರ್ಸ್ ಕಾಲೋನಿಯ ಕಟ್ಟಡದ ಹಿಂಭಾಗದಲ್ಲಿಸಾರ್ವಜನಿಕರಿಗೆ ಕಾಣುವಂತೆಯೇ ನಿಜಾಮುದ್ದೀನ್‌ ಎಂಬ ಹೊರರಾಜ್ಯದ ವ್ಯಕ್ತಿ ಹಸುವಿಗೆ ಅಸಹಜ ಕ್ರಿಯೆ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ತಕ್ಷಣವೇ ಆತನ ಬಳಿ ಹೋಗಿ ಗಲಾಟೆ ಮಾಡುತ್ತಿದ್ದಂತೆ ಓಡಿಹೋಗಲು ಪ್ರಯತ್ನ ಮಾಡಿದ್ದಾನೆ. ಆಗ ಸ್ಥಳೀಯರು, ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ದೂರು ದಾಖಲು ಮಾಡಿದ್ದಾರೆ. ಆತ ಹಸುವಿನೊಂದಿಗೆ ಅಸಹಜ ಕ್ರಿಯೆ ಮಾಡುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು ನಿಜಾಮುದ್ದೀನ್‌ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಬಜರಂಗದಳ, ವಿಶ್ವಹಿಂದೂ ಪರಿಷತ್‌, ಬಿಜೆಪಿ ಮಹಿಳಾ ಘಟಕ, ಶ್ರೀರಾಮಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಘಟನೆಯನ್ನು ಖಂಡನೆ ಮಾಡಿದ್ದು ಹಿಂದೂಪರ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ಜತೆ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದರು.

ವಲಸಿಗನಿಂದ ಕೃತ್ಯ ಆರೋಪ

ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ನಿಜಾಮುದ್ದೀನ್‌ ಕೆಲ ದಿನಗಳ ಹಿಂದೆಯಷ್ಟೇ ನಗರಕ್ಕೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಈತ ಉತ್ತರ ಭಾರತದ ಬಿಹಾರ, ಉತ್ತರ ಪ್ರದೇಶ ಮೂಲದವನಾಗಿದ್ದಾನೆ. ಈತ ಮಾದಕ ದ್ರವ್ಯಗಳ ದಾಸನಾಗಿದ್ದು ಮಹಿಳೆಯರ ಜತೆ ಸಹ ಅಸಭ್ಯವಾಗಿ ವರ್ತನೆ ಮಾಡಿರುವುದು ತಿಳಿದುಬಂದಿದೆ. ಹಸುವಿನೊಂದಿಗೆ ಅಸಹಜ ಕ್ರಿಯೆಗೆ ಮಾಡುವ ವಿಡಿಯೋ ವೈರಲ್‌ ಆಗಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ, ಗೋವಿನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಲೈಂಗಿಕ ಕ್ರಿಯೆ ಮಾಡಿರುವ ನಿಜಾಮುದ್ದೀನ್‌ ಕೃತ್ಯ ಮನುಕುಲವೇ ತಲೆತಗ್ಗಿಸಬೇಕಾಗಿದೆ. ವಲಸಿಗರಿಂದ ಈ ರೀತಿಯ ಹೀನ ಕೃತ್ಯ ನಡೆಯುತ್ತಿದ್ದು ವಲಸಿಗರನ್ನು ಹೊರಗೆ ಹಾಕಬೇಕು. ತಹಸೀಲ್ದಾರ್‌ ವಲಸಿಗರನ್ನು ಪತ್ತೆ ಮಾಡಿ, ಶೆಡ್‌ಗಳನ್ನು ತೆರವು ಮಾಡಬೇಕು ಇಂತಹ ಹೀನ ಕೃತ್ಯ ಮಾಡಿದ ಈತನ ವಿರುದ್ಧ ಕಠಿಣ ಕ್ರಮವಾಗಬೇಕು. ರಾಜ್ಯದಲ್ಲಿ ದೇವಸ್ಥನದಲ್ಲಿ ಕಳ್ಳತನ, ದರೋಡೆ, ಹಿಂದೂ ಭಾವನೆಗಳಿರುವ ಪ್ರಾಣಿಗಳ ಮೇಲೆ ಲೈಂಗಿಕ ದೌರ್ಜನ್ಯಗಳು ವಲಸಿಗರಿಂದ ನಡೆಯುತ್ತಿರುವುದು ಮನಗಾಣಬೇಕು, ಗೃಹಸಚಿವರು ಮೊದಲು ವಲಸಿಗರನ್ನು ಹೊರಗೆ ಹಾಕಬೇಕು ಎಂದು ಹೇಳಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಹೊಸದೆಹಲಿ : ಸಿಜೆಪಿ ಪ್ರತಿಭಟನೆಯಲ್ಲಿ 2,873 ಅಪರಾಧಿಗಳು – ಫೋಕ್ಸೋ, ಕೊಲೆ ಅಪರಾಧಿಗಳು ಭಾಗಿ !!

ಟಾಪ್ ಸುದ್ದಿಗಳು

ಕೋಝಿಕೋಡ್ : ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನಗಳ ಲೀಡರ್ ಗಳಿಂದಲೇ ಮಕ್ಕಳಿಗೆ ಡ್ರಗ್ಸ್ ಸಪ್ಲೈ !!

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಕೃಷಿಕ ಕೃಷ್ಣಪ್ಪ ಕುಲಾಲ್ ಅಂತ್ಯಕ್ರಿಯೆಯಲ್ಲಿ ಪರಿಸರ ಕಾಳಜಿ – ಮೃತ ಪ್ರಕೃತಿ ಪ್ರೀತಿ ಜೀವಂತವಾಗಿರಿಸಲು ಗಿಡ ವಿತರಣೆ !

⚠️ Contents are protected on this website.