ಮಂಗಳೂರು : ಕೇರಳದ ಓಣ ಹಬ್ಬಕ್ಕಾಗಿ ರೈಲ್ವೆ ಇಲಾಖೆಯಿಂದ ವಿಶೇಷ ರೈಲು ಸೇವೆ – ಮುಂಗಡ ಬುಕ್ಕಿಂಗ್ ಆರಂಭ

Advertisement

ಮಂಗಳೂರು, ಜು. 14 : ಕೇರಳ ರಾಜ್ಯದ ಅತ್ಯಂತ ಜನಪ್ರಿಯ ಹಬ್ಬವಾದ “ಓಣಂ ಹಬ್ಬ”ದ ಸಂಭ್ರಮ ದಿನಗಳು ಸಮೀಪಿಸುತ್ತಿದೆ. ಓಣಂ ಹಬ್ಬಕ್ಕಾಗಿ ಭಾರತೀಯ ರೈಲ್ವೆ ಇಲಾಖೆಯು ಹೆಚ್ಚಿನ ವಿಶೇಷ ರೈಲುಗಳ ಸೇವೆಯನ್ನು ಘೋಷಿಸಿದ್ದು, ಮುಗಂಡ ಬುಕ್ಕಿಂಗ್‌ ಆರಂಭಿಸಿದೆ.

Advertisement

ತಿರುವನಂತಪುರ ನಾರ್ತ್‌ನಿಂದ ಮಂಗಳೂರಿಗೆ, ಚೆನ್ನೈನಿಂದ ಕೊಲ್ಲಂಗೆ ಮತ್ತು ಬೆಂಗಳೂರಿನಿಂದ ಎರ್ನಾಕುಲಳಂಗೆ ರೈಲುಗಳ ಸೇವೆ ಇದ್ದು, ಈಗಾಗಲೇ ಮುಂಗಡ ಬುಕ್ಕಿಂಗ್‌ ಆರಂಭಗೊಂಡಿದೆ.

Advertisement

ತಿರುವನಂತಪುರ ನಾರ್ತ್‌ -ಮಂಗಳೂರು ಜಂಕ್ಷನ್‌

ಆಗಸ್ಟ್‌ 12, 19, 26 ಮತ್ತು ಸೆಪ್ಟೆಂಬರ್‌ 2 ರಂದು ತಿರುವನಂತಪುರ ನಾರ್ತ್‌ ನಿಂದ ಮಂಗಳೂರಿಗೆ ವಿಶೇಷ ರೈಲು ಸೇವೆ ಆರಂಭವಾಗಲಿದೆ. ತಿರುವನಂತಪುರದಿಂದ ಬೆಳಗ್ಗೆ 9 ಗಂಟೆಗೆ ಹೊರಡುವ ರೈಲು (06093) ರಾತ್ರಿ 9 ಗಂಟೆಗೆ ಮಂಗಳೂರನ್ನು ತಲುಪುತ್ತದೆ. ಆಗಸ್ಟ್‌ 13, 20, 27 ಮತ್ತು ಸೆಪ್ಟೆಂಬರ್‌ 3 ರಂದು ಮಧ್ಯಾಹ್ನ 3.15ಕ್ಕೆ ಮಂಗಳೂರಿನಿಂದ ಹೊರಡುವ ರೈಲು (06094) ಮರುದಿನ ಬೆಳಿಗ್ಗೆ 5.30 ಕ್ಕೆ ತಿರುವನಂತಪುರ ಸೆಂಟ್ರಲ್‌ ತಲುಪುತ್ತದೆ.

ಈ ರೈಲು ಗಾಡಿಗೆ ವರ್ಕಳ, ಕೊಲ್ಲಂ, ಕಾಯಂಕುಳಂ, ಮಾವೇಲಿಕ್ಕರ, ಚೆಂಗನ್ನೂರ್‌, ತಿರುವಲ್ಲಾ, ಚಂಗನಾಶ್ಶೇರಿ, ಕೊಟ್ಟಾಯಂ, ಎರ್ನಾಕುಳಂ ಟೌನ್‌, ಆಲುವಾ, ತ್ರಿಶೂರ್‌, ಶೊರ್ನೂರು, ತಿರೂರ್‌, ಕೋಳಿಕ್ಕೋಡ್‌, ವಡಕರ, ತಲಶ್ಶೇರಿ, ಕಣ್ಣೂರು, ಪಯ್ಯನ್ನೂರ್‌, ಕಾಂಞಗಾಡು ಮತ್ತು ಕಾಸರಗೋಡುಗಳಲ್ಲಿ ನಿಲುಗಡೆ ಇರುತ್ತದೆ.

ಬೆಂಗಳೂರು-ಎರ್ನಾಕುಳಂ

ಎರ್ನಾಕುಳಂ- ಬೆಂಗಳೂರು ಎಸ್‌ಎಂವಿಟಿ ಎಕ್ಸ್‌ಪ್ರೆಸ್‌ (06147) ಇದು ಆಗಸ್ಟ್‌ 9, 16, 23, 30 ಮತ್ತು ಸೆಪ್ಟೆಂಬರ್‌ 6 ರಂದು ರಾತ್ರಿ 11.10 ಕ್ಕೆ ಎರ್ನಾಕುಳಂ ಜಂಕ್ಷನ್‌ನಿಂದ ಹೊರಟು ಮರುದಿನ ಮಧ್ಯಾಹ್ನ 12.45ಕ್ಕೆ ಬೆಂಗಳೂರು ತಲುಪುತ್ತದೆ. ಇದು ಆಲುವಾ, ತ್ರಿಶ್ಶೂರ್‌, ಪಾಲಕ್ಕಾಡ್‌, ಪೊತ್ತನ್ನೂರ್‌, ತಿರುಪುರ್‌, ಈರೋಡ್‌, ಸೇಲಂ, ಕುಪ್ಪಂ, ಬಂಗಾರಪೇಟೆ ಮತ್ತು ಕೃಷ್ಣ ರಾಜಪುರಗಳಲ್ಲಿ ನಿಲುಗಡೆಯನ್ನು ಹೊಂದಿದೆ.

ಬೆಂಗಳೂರು -ಎರ್ನಾಕುಳಂ ಎಕ್ಸ್‌ಪ್ರೆಸ್‌ (06148) ಆಗಸ್ಟ್‌ 10, 17, 24 ಮತ್ತು 31 ರಂದು ಸಂಜೆ 4 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಿಗ್ಗೆ 5.45 ಕ್ಕೆ ಎರ್ನಾಕುಳಂ ತಲುಪಲಿದೆ. ಈ ರೈಲು ಕೆಆರ್‌ ಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್‌, ತಿರುಪುರ್‌, ಪೋತನ್ನೂರ್‌, ಪಾಲಕ್ಕಾಡ್‌, ತ್ರಿಶೂರ್‌ ಮತ್ತು ಅಲುವಾದಲ್ಲಿ ನಿಲುಗಡೆ ಹೊಂದಿದೆ.

ಚೆನ್ನೈ ಸೆಂಟ್ರಲ್‌-ಕೊಲ್ಲಂ

ರೈಲು (06117) ಆಗಸ್ಟ್‌ 13, 15, 20, 22, 27, 29 ಮತ್ತು ಸೆಪ್ಟೆಂಬರ್‌ 3 ಮತ್ತು 5 ರಂದು ರಾತ್ರಿ 11.50 ಕ್ಕೆ ಚೆನ್ನೈನ ಸೆಂಟ್ರಲ್‌ ನಿಂದ ಹೊರಟು ಮರುದಿನ ಸಂಜೆ 4.20ಕ್ಕೆ ಕೊಲ್ಲಂ ತಲುಪಲಿದೆ. ರೈಲು (06118) ಆಗಸ್ಟ್‌ 14, 16, 21, 23, 28, 30 ಮತ್ತು ಸೆಪ್ಟೆಂಬರ್‌ 4 ಮತ್ತು 6 ರಂದು ಸಂಜೆ 6.45 ಕ್ಕೆ ಕೊಲ್ಲಂನಿಂದ ಹೊರಟು ಮರುದಿನ ಬೆಳಗ್ಗೆ 11.35 ಕ್ಕೆ ಚೆನ್ನೈ ಸೆಂಟ್ರಲ್‌ ತಲುಪಲಿದೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ